Site icon ಹರಿತಲೇಖನಿ

ದರ್ಶನ್ ಅಭಿನಯದ ಶಾಸ್ತ್ರಿ ಸಿನಿಮಾ ರಿ-ರಿಲೀಸ್..!; ಥಿಯೇಟರ್ ಮೇಲೆ ಖೈದಿ ನಂ.6106: ವಿಡಿಯೋ ನೋಡಿ

ಬೆಂಗಳೂರು, (ಜುಲೈ.12): ಪವಿತ್ರ ಗೌಡರಿಗೆ ಅಶ್ಲೀಲ ಮೆಸೇಜ್ ಕಳಿಸಿದ ಕಾರಣ ವ್ಯಕ್ತಿಯೋರ್ವನ ಹತ್ಯೆ ಆರೋಪದ ಹಿನ್ನಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿ ನಟ ದರ್ಶನ್  ಇದ್ದಾರೆ. ಇತ್ತ ಅವರ ಅಭಿನಯದ ಶಾಸ್ತ್ರೀ ಚಿತ್ರ ಮರುಬಿಡುಗಡೆಯಾಗಿದ್ದು, ದರ್ಶನ್ ಅವರ ಅನುಪಸ್ಥಿತಿಯ ನಡುವೆಯೂ ಅಭಿಮಾನಿಗಳು ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿದ್ದಾರೆ.

ಬೆಳ್ಳಂಬೆಳಗ್ಗೆಯೇ ಚಿತ್ರಮಂದಿರಗಳತ್ತ ಧಾವಿಸಿರುವ ದರ್ಶನ್ ಅಭಿಮಾನಿಗಳು ನಟನ ಕಟ್‌ಔಟ್‌ಗೆ ಹಾರ ಹಾಕಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೆ ಜೈಲಿನಲ್ಲಿ ದರ್ಶನ್‌ಗೆ ನೀಡಿರುವ ಖೈದಿ ನಂಬರ್ 6106 ಪೋಸ್ಟರ್ ಮಾಡಿಸಿ ಥಿಯೇಟರ್ ಮೇಲೆ ಅನಾವರಣಗೊಳಿಸಿದ್ದಾರೆ.

ಬೆಂಗಳೂರು ಮೈಸೂರು ತುಮಕೂರು ಸೇರಿದಂತೆ ಹಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಶಾಸ್ತ್ರಿ ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಜಮಾಯಿಸಿದ್ದಾರೆ.

ದರ್ಶನ್ ಬಂಧನದ ನಂತರ ತೀವ್ರವಾಗಿ‌ ಮಲಗಿದ್ದ ಕನ್ನಡ ಸಿನಿಮಾ ರಂಗ ಮತ್ತೆ ದರ್ಶನ್ ಸಿನಿಮಾ ತೆರೆಗೆ ಬಂದಿರುವ ಕಾರಣ ಸ್ವಲ್ಪ ಕಳೆಬಂದಿದೆ. 2005ರಲ್ಲಿ ತೆರೆಕಂಡಿದ್ದ ಈ ಚಿತ್ರ ಮರು ಬಿಡುಗಡೆಯಾಗಿದ್ದು, ದರ್ಶನ್ ಫ್ಯಾನ್ಸ್‌ಗೆ ಸಂಭ್ರಮಕ್ಕೆ ಕಾರಣವಾಗಿದೆ.

ಪಿಎನ್ ಸತ್ಯ ನಿರ್ದೇಶನದ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದು, ಅವರಿಗೆ ಜೋಡಿಯಾಗಿ ಮಾನ್ಯ ಚಿತ್ರ ಶಣೈ, ಬುಲೆಟ್ ಪ್ರಕಾಶ್ ತರಾಗಣನದಲ್ಲಿದ್ದರು

ಈ ಚಿತ್ರ ನಮನ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿದ್ದು ಅಣಜಿ ನಾಗರಾಜ್ ನಿರ್ಮಾಣ ಮಾಡಿದ್ದರು. ಸಾಧು ಕೋಕಿಲ ಸಂಗೀತ ಸಂಯೋಜನೆ ಮಾಡಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version