ಚಿಕ್ಕಬಳ್ಳಾಪುರ, (ಜುಲೈ.09); ಹುಟ್ಟು ಹಬ್ಬದ ದಿನವೇ ಬಿಕಾಂ ವಿದ್ಯಾರ್ಥಿನಿ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಬೆಂಗಳೂರು ಹೈದರಾಬಾದ್ ಹೆದ್ದಾರಿಯ ನಾಗಾರ್ಜುನ ಕಾಲೇಜು ಬಳಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ವಿದ್ಯಾರ್ಥಿನಿ ರಕ್ಷಿತಾ ಮೃತ ವಿದ್ಯಾರ್ಥಿನಿ. ಅಂದಹಾಗೆ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದ ರಕ್ಷಿತಾ ನಿನ್ನೆ ರಕ್ಷಿತಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಾಲೇಜು ಸ್ನೇಹಿತರ ಜೊತೆಗೂಡಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಳು.
ಸ್ನೇಹಿತರ ಜೊತೆ ಸಂಭ್ರಮಾಚರಣೆ ಮುಗಿಸಿ ಕ್ಯಾಬ್ ನಲ್ಲಿ ವಾಪಾಸ್ ಬರುವಾಗ ನಾಗಾರ್ಜುನ ಕಾಲೇಜು ಬಳಿಯ ಪ್ಲೈಒವರ್ ಮೇಲೆ ತಡೆಗೋಡೆಗೆ ಇಂಡಿಕಾ ಕಾರು ಡಿಕ್ಕಿಯಾಗಿದೆ ಎಡಬದಿಯಲ್ಲಿ ಕುಳಿತಿದ್ದ ರಕ್ಷಿತಾಳಿಗೆ ಗಂಭೀರತರನಾದ ಗಾಯಗಳಾಗಿವೆ.
ಕೂಡಲೇ ಆಕೆಯನ್ನ ಹಾಗೂ ಚಾಲಕನನ್ನ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ರಕ್ಷಿತಾ ಸಾವನ್ನಪ್ಪಿದ್ದು ಗಂಭೀರವಾಗಿ ಗಾಯಗೊಂಡಿರುವ ಚಾಲಕನಿಗೆ ಚಿಕಿತ್ಸೆ ಮುಂದುವರೆದಿದೆ.
ಹುಟ್ಟು ಹಬ್ಬದ ದಿನವೇ ಪ್ರಾಣ ಕಳೆದುಕೊಂಡ ವಿದ್ಯಾರ್ಥಿನಿಯ ಸಾವಿಗೆ ಕುಟುಂಬಸ್ಥರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….