ಧುಲೆ, (ಜುಲೈ.06): ವಾಹನ ಚಲಾಯಿಸುವ ವೇಳೆ ರೀಲ್ಸ್ ಶೋಕಿಗೆ ಅನೇಕ ಅಪಘಾತಗಳು ಸಂಭವಿಸಿ ಸಾವು, ನೋವು ಸಂಭವಿಸುತ್ತಲೇ ಇದ್ದರು, ಯುವ ಸಮುದಾಯ ಆ ಚೇಸ್ಟೆಯಿಂದ ಹೊರಬರದೆ ಪ್ರಾಣ ಕಳೆದುಕೊಳ್ಳುವ ದುರ್ಘಟನೆಗೆ ಸಾಕ್ಷಿಯಾಗುತ್ತಲೇ ಇದ್ದಾರೆ..
ಅಂತೆಯೇ ಬೈಕ್ ಚಲಾವಣೆ ವೇಳೆ ರೀಲ್ಸ್ ವಿಡಿಯೋಗೆ ಪೋಸ್ ನೀಡಿದ ತಪ್ಪಿಗೆ, ದ್ವಿಚಕ್ರ ವಾಹನ ಡಿವೈಡರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಧುಲೆ-ಸೋಲಾಪುರ ಹೆದ್ದಾರಿಯಲ್ಲಿ ನಡೆದಿದೆ. ಹಿಂಬದಿ ಸವಾರನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಘಟನೆಯ ವಿಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಿಂಬದಿ ಸವಾರ ವಿಡಿಯೋ ಮಾಡಲು ಪ್ರಾರಂಭಿಸಿದಾಗ ಚಲನೆ ಮಾಡುತ್ತಿದ್ದಾತ ವಿಡಿಯೋಗೆ ಪೋಸ್ ನೀಡಲು ಮುಂದಾಗಿದ್ದಾನೆ. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಇಬ್ಬರು ಬೈಕ್ ಸವಾರರು ಕೂಡಾ ಹೆಲ್ಮೆಟ್ ಧರಿಸದೇ ಇರುವುದು ವಿಡಿಯೋದಲ್ಲಿ ಕಂಡುಬಂದಿದೆ.
ವರದಿಗಳ ಅನ್ವಯ ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಹಾರಿ ರಸ್ತೆಗೆ ಬಿದ್ದಿದ್ದಾರೆ. ಬೈಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದರೆ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪೆಯುತ್ತಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….