ಗದಗ: (ಜುಲೈ.06): ರಾಜಕೀಯವಾಗಿ ಬೆಳೆಯುವವರು ಮತದಾರರೊಂದಿಗೆ ವೈರತ್ವ ಬೆಳೆಸಿಕೊಳ್ಳಬಾರದು ರಾಜಕಾರಣಿಗಳ ಮನೋಭಾವನೆ ಬದಲಾವಣೆ ಮಾಡಿಕೊಂಡಾಗ ಯಶಸ್ಸು ಸಿಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಪಟ್ಟಣದ ಜಗದ್ಗುರು ರಂಬಾಪುರಿ ಕಲ್ಯಾಣ ಮಂಟಪದಲ್ಲಿ ಶಿರಹಟ್ಟಿ ಮಂಡಲದ ಕಾರ್ಯಕರ್ತರಿಗೆ ಮುಖಂಡರಿಗೆ ಅಭಿನಂದನೆ ಹಾಗೂ ನೂತನ ಸಂಸರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಆತ್ಮವಿಶ್ವಾಸದಿಂದ ನಡೆದರೆ ಮಾತ್ರ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುತ್ತದೆ. ರಾಜ್ಯ ಕಾಂಗ್ರೆಸ್ ಸರಕಾರ ಅಭಿವೃದ್ಧಿಯಲ್ಲಿ ಶೂನ್ಯ ಆಗಿದೆ. ಇದೊಂದು ರೈತ ವಿರೋಧಿ ಸರಕಾರ. ವಿದ್ಯಾರ್ಥಿಗಳ ವಿದ್ಯಾನಿಧಿಯನ್ನು ನಿಲ್ಲಿಸಿದರು, ಬರಗಾಲ ಪರಿಹಾರ ಹಣ ಸರಿಯಾಗಿ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು,
ಶಿರಹಟ್ಟಿ ಕ್ಷೇತ್ರದ ಭಾಗದ ಬಹುದಿನಗಳ ಬೇಡಿಕೆಯಾದ, ಕಾರವಾರ ಇಳಕಲ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದು ಅದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅದೇ ರೀತಿ ಯಲವಿಗಿ ಗದಗ ರೈಲ್ವೆ ಮಂಜುರಾತಿ ಆಗಿದ್ದು, ಅದಕ್ಕೆ ನಾನು ಮುಖ್ಯಮಂತ್ರಿ ಇದ್ದಾಗ ಬಜೆಟ್ ನಲ್ಲಿ 600 ಕೋಟಿ ಹಣ ಇಟ್ಟಿದ್ದೆ ಈ ಸರಕಾರ ಯೋಜನೆ ಜಾರಿಗೊಳಿಸುವಲ್ಲಿ ವಿಫಲವಾಗಿದೆ, ಅದನ್ನು ಕಾರ್ಯ ರೂಪಕ್ಕೆ ತರಲು ಶ್ರಮ ವಹಿಸುತ್ತೇನೆ.
ಆರ್ಥಿಕವಾಗಿ ಶೈಕ್ಷಣಿಕವಾಗಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತೇನೆ. ಮುಂಬರುವ ದಿನಗಳಲ್ಲಿ ಜಿ.ಪಂ ತಾ.ಪಂ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಲ್ಲಿ ಕೆಲಸ ಮಾಡಿದರೆ ಪಕ್ಷ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಶಾಸಕ ಚಂದ್ರು ಲಮಾಣಿ ಪಕ್ಷದ ಕಾರ್ಯಕರ್ತರು ಬಸವರಾಜ ಬೊಮ್ಮಾಯಿ ಅವರ ಗೆಲುವಿಗೆ ದುಡಿದಿದ್ದಾರೆ, ಪ್ರತಿ ಮನೆಗೆ ಭೇಟಿ ಕೊಟ್ಟು ಉತ್ಸಾಹದಿಂದ ಕೆಲಸ ಮಾಡಿದ್ದಾರೆ ಕೇಂದ್ರದಲ್ಲಿ ಸಚಿವ ಆಗಬೇಕೆಂಬ ಆಸೆ ಇತ್ತು ಮುಂದಿನ ದಿನಮಾನಗಳಲ್ಲಿ ಸಚಿವ ಸ್ಥಾನ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.
ಶಿರಹಟ್ಟಿ ಮತ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಬೇಕು, ತುಂಗಾಭದ್ರ ನದಿಯಿಂದ, ರೈತರಿಗೆ ನೀರಾವರಿ ಯೋಜನೆ ತರಬೇಕು, ರಾಜ್ಯ ಸರಕಾರ ಜನತೆಗೆ ಮೊಸ ಮಾಡುತ್ತಿದೆ ಭ್ರಷ್ಟಾಚಾರದಲ್ಲಿ ಮುಳುಗಿದ್ದು ರಾಜ್ಯದ ಲೂಟಿ ಹೊಡಿತಾ ಇದೆ, ಕ್ಷೇತ್ರಕ್ಕೆ ಯಾವುದೆ ಒಂದು ಕಾಮಗಾರಿಗೆ ದುಡ್ಡು ಕೊಟ್ಟಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಮಾತನಾಡಿ, ಕಾರ್ಯಕರ್ತರು ಮತದಾರರ ಮನೆಗೆ ಹೋಗಿ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಿದ್ದೀರಿ ಈ ಗೆಲುವು ಕಾರ್ಯಕರ್ತರಿಗೆ ಸಲ್ಲಬೇಕು, ಮುಂದಿನ ದಿನಗಳಲ್ಲಿ ಎಲ್ಲರೂ ಕೂಡಿ ಪಕ್ಷದ ಸಂಘಟನೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ ಎಂ ಮಹಾಂತಶೆಟ್ಟರ, ಶಿವಪ್ರಕಾಶ ಮಹಾಜನಶೆಟ್ಟರ, ನಾಗರಾಜ ಕುಲಕರ್ಣಿ, ಸಣ್ಣವೀರಪ್ಪ ಹಳ್ಳೆಪ್ಪನವರ, ಭೀಮಶಿಂಗ ರಾಠೋಡ, ಸಣ್ಣವೀರಪ್ಪ ಹಳ್ಳೆಪ್ಪನವರ, ಜೆಡಿಎಸ್ ತಾಲೂಕ ಅಧ್ಯಕ್ಷ ಪ್ರವೀಣ ಬಾಳಿಕಾಯಿ, ಫಕ್ಕೀರೇಶ ರಟ್ಟೀಹಳ್ಳಿ, ಚಂಬಣ್ಣ ಬಾಳಿಕಾಯಿ, ಎಂ ಆರ್ ಪಾಟೀಲ ನಿಂಗಪ್ಪ ಬನ್ನಿ, ಅಶ್ವಿನಿ ಅಂಕಲಕೋಟಿ ನಾಗರಾಜ ಲಕ್ಕುಂಡಿ, ನಗರ ಬಿಜೆಪಿ ಅಧ್ಯಕ್ಷ ನವೀನ ಬೆಳ್ಳಟ್ಟಿ, ಪೂರ್ಣಜಿ ಕರಾಟೆ, ಶಿವಪ್ರಕಾಶ ಮಹಾಜನಶೆಟ್ಟರ, ಗಂಗಾಧರ ಮೆಣಸಿನಕಾಯಿ, ಹೇಮಗಿರೀಶ ಹಾವನಾಳ, ರವಿ ದಂಡಿನ, ಸೋಮೇಶ ಉಪನಾಳ, ಶಿವಣ್ಣ ಲಮಾಣಿ, ಜಾನು ಲಮಾಣಿ, ಎಂ ಎಸ್ ದೊಡ್ಡಗೌಡ್ರ, ಡಿ ವೈ ಹುನಗುಂದ, ನವೀನ ಹಿರೇಮಠ, ಗಿರೀಶ ಚೌರಡ್ಡಿ ಸೇರಿದಂತೆ ಶಿರಹಟ್ಟಿ ಮುಂಡರಗಿ ಮಂಡಲದ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….