ದೊಡ್ಡಬಳ್ಳಾಪುರ, (ಜುಲೈ.01); ನವದೆಹಲಿ, (ಜೂ.28); ನಗರದ ಹೊರವಲಯದಲ್ಲಿರುವ ತಾಯಿ ಮಗು ಆಸ್ಪತ್ರೆಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ನೀಡಲಾಗುವ ರಾಷ್ಟ್ರೀಯ ಗುಣಮಟ್ಟದ ಖಾತ್ರಿ ಅವಾರ್ಡ್ (NQAS) ರಾಷ್ಟ್ರ ಮಟ್ಟದ ಪ್ರಶಸ್ತಿ ದೊರೆತಿದೆ.
ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ರಾಜ್ಯ ಸಚಿವ ಪ್ರತಾಪ್ ರಾವ್ ಗಣಪತ್ ರಾವ್ ಜಾದವ್ ಹಾಗೂ ಅನುಪ್ರಿಯ ಪಾಟೀಲ್ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಮೇಶ್, ಡಾ.ಮಂಜುನಾಥ್, ಸಿಸ್ಟರ್ ಭವ್ಯ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಟ್ವಿಟ್ ಮಾಡಿರುವ ಅವರು, ಜೂನ್ 28, 2024 ರಂದು ವಿಜ್ಞಾನ ಭವನದಲ್ಲಿ ನಡೆದ “ಆಯುಷ್ಮಾನ್ ಭಾರತ್, ಗುಣವತ್ ಹೆಲ್ತ್” ಎಂಬ ಥೀಮ್‌ನೊಂದಿಗೆ GOI ಆಯೋಜಿಸಿದ ರಾಷ್ಟ್ರೀಯ ಮಟ್ಟದ ಸಮಾರಂಭದಲ್ಲಿ ಕರ್ನಾಟಕವು ನಾಲ್ಕು NQAS (ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳು) ಪ್ರಶಸ್ತಿಗಳನ್ನು ಗೆದ್ದಿದೆ ಎಂದು ಹಂಚಿಕೊಳ್ಳಲು ಹೆಮ್ಮೆಯಿದೆ.
ಎಂಸಿ ಗನ್ ಜಿಲ್ಲಾ ಆಸ್ಪತ್ರೆ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲೂಕು ಆಸ್ಪತ್ರೆ ದೊಡ್ಡಬಳ್ಳಾಪುರ, ನಗರ ಸಮುದಾಯ ಆರೋಗ್ಯ ಕೇಂದ್ರ (UCHC) ಶ್ರೀರಾಮಪುರಂ, BBMP; ಮತ್ತು ಆಯುಷ್ಮಾನ್ ಆರೋಗ್ಯ ಮಂದಿರ-ಉಪ ಕೇಂದ್ರ ತೊರಡೆವಂಡಹಳ್ಳಿ, ಕೋಲಾರ ಈ ಗಮನಾರ್ಹ ಸಾಧನೆಗಾಗಿ.
ಅಲ್ಲದೆ, ಕರ್ನಾಟಕದಲ್ಲಿ 855 ಸಾರ್ವಜನಿಕ ಆರೋಗ್ಯ ಸೌಲಭ್ಯಗಳು NQAS ಪ್ರಮಾಣೀಕರಣ NQAS ಪ್ರಶಸ್ತಿಗಳನ್ನು ಸಾಧಿಸಿವೆ, ಇದು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳ ಸಂಪನ್ಮೂಲ ಕೇಂದ್ರ (NHSRC) ನಿಗದಿಪಡಿಸಿದ ಕಠಿಣ ಗುಣಮಟ್ಟದ ಮಾನದಂಡಗಳನ್ನು ಪೂರೈಸುವ ಆರೋಗ್ಯ ಸೌಲಭ್ಯಗಳಿಗೆ ನೀಡಲಾಗುತ್ತದೆ.
ಸೇವಾ ನಿಬಂಧನೆ, ರೋಗಿಗಳ ಹಕ್ಕುಗಳು, ಒಳಹರಿವು, ವೈದ್ಯಕೀಯ ಆರೈಕೆ, ಸೋಂಕು ನಿಯಂತ್ರಣ, ಗುಣಮಟ್ಟ ನಿರ್ವಹಣೆ ಮತ್ತು ಫಲಿತಾಂಶ. ಈ ಸಾಧನೆಯು ಅತ್ಯುತ್ತಮ ಆರೋಗ್ಯವನ್ನು ತಲುಪಿಸಲು, ರೋಗಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವ ಮತ್ತು ಉನ್ನತ ದರ್ಜೆಯ ಮೂಲಸೌಕರ್ಯವನ್ನು ನಿರ್ವಹಿಸುವ ನಮ್ಮ ಬದ್ಧತೆಯನ್ನು ಗುರುತಿಸುತ್ತದೆ.
ನಮ್ಮ ಸೌಲಭ್ಯಗಳಾದ್ಯಂತ ಆರೋಗ್ಯದ ಗುಣಮಟ್ಟವನ್ನು ಸುಧಾರಿಸಲು ಮತ್ತು ರಾಷ್ಟ್ರೀಯ ಗುಣಮಟ್ಟವನ್ನು ಪರಿಣಾಮಕಾರಿಯಾಗಿ ಪೂರೈಸಲು ನಾವು ನಮ್ಮ ಪ್ರಯತ್ನಗಳನ್ನು ಬಲಪಡಿಸುವುದನ್ನು ಮುಂದುವರಿಸುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ದೊಡ್ಡಬಳ್ಳಾಪುರ ನಿಕಟ ಪೂರ್ವ ಶಾಸಕ ಟಿ.ವೆಂಕಟರಮಣಯ್ಯ ಪ್ರಶಂಸೆ ವ್ಯಕ್ತಪಡಿಸಿದ್ದು, 2013ರಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಮತದಾರರು ನನಗೆ ನೀಡಿದ ಶಕ್ತಿಯಿಂದಾಗಿ ಈ ಆಸ್ಪತ್ರೆ ತಾಲೂಕಿನ ಜನರಿಗೆ ಸೇವೆ ಸಲ್ಲಿಸುತ್ತಾ. ಜಿಲ್ಲೆ, ರಾಜ್ಯ, ಈಗ ರಾಷ್ಟ್ರ ಮಟ್ಟದಲ್ಲಿಯೂ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ.
ಈ ಪ್ರಶ್ತಿಗೆ ಇಲ್ಲಿನ ಸಿಬ್ಬಂದಿಗಳ ಕಾಳಜಿ ಅಪಾರವಾಗಿದ್ದು, ಆಸ್ಪತ್ರೆ ಆರಂಭವಾದಾಗಿನಿಂದ ಜಿಲ್ಲಾ ಮಟ್ಟದ ಆಸ್ಪತ್ರೆಗೂ ಮೀರಿ ಬರುವ ರೋಗಿಗಳಿಗೆ ಹಗಲಿರುಳು ಸೇವೆ ಸಲ್ಲಿಸುತ್ತಿರುವುದು ಪ್ರಶಂಸನೀಯವಾಗಿದ್ದು, ಅವರಿಗೆಲ್ಲರಿಗೂ ಶುಭಕೋರುತ್ತೇನೆ ಎಂದರು.
ನನ್ನ ಅಧಿಕಾರವಧಿಯಲ್ಲಿ ನಿರ್ಮಾಣಗೊಂಡು ತಾಲೂಕಿನ ಜನತೆಗೆ ವರದಾನವಾಗಿ, ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿರುವ ಆಸ್ಪತ್ರೆಯ ಕಡೆಗೆ ಮತ್ತಷ್ಟು ಹೆಚ್ಚಿನ ಗಮನ ಅಧಿಕಾರಿಗಳು ನೀಡಬೇಕಿದೆ. ಬಾಗಿಲು ಮುಚ್ಚಿರುವ ಮೇಕ್ ಶಿಪ್ಟ್ ಆಸ್ಪತ್ರೆಯನ್ನು ಮರು ಬಳಕೆ ಮಾಡಿಕೊಂಡು, ಹಾಸಿಗೆ ಕೊರತೆ ಉಂಟಾಗದಂತೆ ಕಾಳಜಿವಹಿಸುವಂತೆ ಟಿ.ವೆಂಕಟರಮಣಯ್ಯ ಸಲಹೆ ನೀಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….