ಚಾಮರಾಜನಗರ, (ಜೂ.29): ಜಮೀನಿನಲ್ಲಿ ಮಲಗಿದ್ದ ರೈತನ ಎದೆಯ ಮೇಲೆ ಆನೆ ಕಾಲ ಟ್ಟಿದ್ದು, ಅವರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.
ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮ ನಿವಾಸಿ ಬಸವಣ್ಣ (52 ವರ್ಷ) ಅಪಾಯದಿಂದ ಪಾರಾದವರು. ಆಲೂಗೆಡ್ಡೆ ಬೆಳೆ ಸಂರಕ್ಷಣೆಗೆ ಕಾವಲಿಗೆಂದು ಇವರು ಜಮೀನಿಗೆ ತೆರಳಿದರು. ತೆವರಿನ ಮೇಲೆ ಮಲಗಿದ್ದಾಗ ಕಾಡಾನೆ ನುಗ್ಗಿ ಬಂದು ಎದೆಯ ಮೇಲೆ ಕಾಲಿಟ್ಟಿದೆ. ತಕ್ಷಣವೇ ಜೋರಾಗಿ ಕೂಗಿ ಕೊಂಡಿದ್ದರಿಂದ ತನ್ನ ಮರಿ ಜೊತೆ ಆನೆ ಕಾಲ್ಕಿತ್ತಿದೆ.
ಇದರಿಂದಾಗಿ ರೈತ ಅಪಾಯದಿಂದ ಪಾರಾಗಿದ್ದಾರೆ. ಆದರೆ ಎದೆಗೆ ತೀವ್ರವಾದ ಗಾಯವಾಗಿದೆ. ತಕ್ಷಣ ಸ್ಥಳೀಯರು ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ಬಸವಣ್ಣರನ್ನು ದಾಖಲು ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಹೊಂಡಕ್ಕೆ ಬಿದ್ದು ಬಾಲಕರ ಸಾವು: ಕಲಬುರಗಿ ಜಿಲ್ಲೆಯ ರಾವೂರು ಗ್ರಾಮದಲ್ಲಿ ಗುರುವಾರ ಆಟವಾಡಲು ತೆರಳಿದ್ದ ಇಬ್ಬರು ಬಾಲಕರು ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಹತ್ತಿರದ ಕಲ್ಲುಗಣಿಯ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ರಾವೂರಿನ ರವಿ ಗುತ್ತೇ ದಾರ ಅವರ ಪುತ್ರ ಭುವನ್ (5 ವರ್ಷ) ಹಾಗೂ ಅಶೋಕ ಬೆಟಗೇರಿ ಅವರ ಪುತ್ರ ದೇವು (6 ವರ್ಷ) ಮೃತರು. ಗ್ರಾಮದ ವಿವೇಕಾನಂದ ಶಿಶುವಿಹಾರ ಶಾಲೆಯಲ್ಲಿ ಓದುತ್ತಿದ್ದ ಭುವನ್ ಹಾಗೂ ದೇವು ಬೆಳಿಗ್ಗೆ ಆಟ ವಾಡಲು ಹೋಗಿದ್ದರು. ಬಹಳ ಹೊತ್ತಾದರೂ ಬಾರದಿದ್ದಾಗ ಸಂಬಂಧಿಕರು ಹುಡುಕಾಡಿದ್ದಾರೆ.
ಒಬ್ಬ ಬಾಲಕನ ಬಟ್ಟೆ ಹಾಗೂ ಆಟವಾಡಲು ಬಳಸುತ್ತಿದ್ದ ಟೈರ್ ಗಾಲಿಯು ಕಲ್ಲುಗಣಿಯ ಪಕ್ಕದಲ್ಲಿ ಕಾಣಿಸಿಕೊಂಡಿದೆ. ಅನುಮಾನಗೊಂಡು ಹೊಂಡದಲ್ಲಿ ಹುಡುಕಿದಾಗ ಇಬ್ಬರ ಬಾಲಕರ ಶವಗಳು ಪತ್ತೆಯಾಗಿವೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….