ಬಾರ್ಬಡೋಸ್, (ಜೂ.29): T20WC ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂದು ಭಾರತ ಸೆಣಸಾಡುತ್ತಿದ್ದು, ಇದೇ ಮೊದಲ ಬಾರಿಗೆ ವರ್ಡ್ ಕಪ್‌ನಲ್ಲಿ ಸೌತ್ ಆಫ್ರಿಕಾ ತಂಡ ಫೈನಲ್ ಪ್ರವೇಶಿಸಿದೆ.
ಉಭಯ ತಂಡಗಳು ಟೂರ್ನಿಯಲ್ಲಿ ಒಂದು ಪಂದ್ಯವನ್ನೂ ಸೋತಿಲ್ಲ ಎಂಬುದು ಗಮನಾರ್ಹ. ಆದರೆ, ಟೀಂ ಇಂಡಿಯಾ ಬಲಿಷ್ಠ ತಂಡಗಳನ್ನು ಮಣಿಸಿ ಫೈನಲ್ ಪ್ರವೇಶ ಮಾಡಿದ್ದು, ಗೆಲ್ಲುವ ತಂಡ ಎಂದೇ ಭಾವಿಸಲಾಗಿದೆ.
ಯಾವುದೇ ಬದಲಾವಣೆ ಇಲ್ಲದೆ ಟೀಂ ಇಂಡಿಯಾ ಕಣಕ್ಕೆ ಇಳಿದಿದೆ. IND: ರೋಹಿತ್, ಕೊಹ್ಲಿ, ಪಂತ್, ಸೂರ್ಯ, ದುಬೆ, ಹಾರ್ದಿಕ್, ಜಡೇಜಾ, ಅಕ್ಷರ್, ಕುಲದೀಪ್, ಅರ್ಶ್‌ದೀಪ್, ಬುಮ್ರಾ SA: ಡಿ ಕಾಕ್, ಹೆಂಡ್ರಿಕ್ಸ್, ಮಾಕ್ರ್ರಾಮ್, ಸ್ವಲ್ಸ್, ಕ್ಲಾಸೆನ್, ಮಿಲ್ಲರ್, ಜಾನ್ಸೆನ್, ಕೇಶವ್ ಮಹಾರಾಜ್, ರಬಾಡ, ನೋರ್ಟ್ರೆ, ಶಮ್ಪಿ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….