Site icon Harithalekhani

ವಿದ್ಯುತ್ ತಂತಿ ತುಂಡಾಗಿ ಬಿದ್ದು ಕರು ಸಾವು..!: ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿಯಲ್ಲಿ ದುರ್ಘಟನೆ

ದೊಡ್ಡಬಳ್ಳಾಪುರ, (ಜೂ.25); ವಿದ್ಯುತ್ ತಂತಿ ತುಂಟಾಗಿ ಬಿದ್ದ ಪರಿಣಾಮ ಕರುವೊಂದು ವಿದ್ಯುತ್ ಶಾಕ್‌ನಿಂದ ಸಾವನಪ್ಪಿರುವ ಘಟನೆ ತಾಲೂಕಿನ ನಾರಸಿಂಹನಳ್ಳಿಯಲ್ಲಿ ಸಂಭವಿಸಿದೆ.

ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿಯಲ್ಲಿ ಸೋಮವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಮುನಿಯಪ್ಪ ಎಂಬ ರೈತನ ಸುಮಾರು 20 ಸಾವಿರಕ್ಕೂ ಹೆಚ್ಚು ಬೆಲೆ ಬಾಳುತ್ತದೆ ಎನ್ನಲಾದ ಮೂರು ವರ್ಷದ ಕರು ವಿದ್ಯುತ್ ಶಾಕ್ ನಿಂದ ಸಾವನಪ್ಪಿದೆ‌.

ಸೋಮವಾರ ರಾತ್ರಿ ಮನೆಯ ಮುಂದೆ ಕರವನ್ನು ಕಟ್ಟಿಹಾಕಿದ್ದ ವೇಳೆ, ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಹಸು ಮೇಲೆ ಬಿದ್ದಿದೆ. ಈ ವೇಳೆ ಹಸುವಿಗೆ ಶಾಕ್ ತಗುಲಿ ಸ್ಥಳದಲ್ಲಿಯೇ ಸಾವನಪ್ಪಿದೆ ಎನ್ನಲಾಗಿದೆ.

ವಿಷಯ ತಿಳಿದ ದೊಡ್ಡಬಳ್ಳಾಪುರ ಗ್ರಾಮಾಂತರ ಬೆಸ್ಕಾಂ ಘಟಕದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version