ಬೆಂಗಳೂರು,(ಜೂ.25); ಹತ್ಯೆ ಆರೋಪದಡಿಯಲ್ಲಿ ಬಂಧನವಾಗಿರುವ ನಟ ದರ್ಶನ್ ಭೇಟಿಗೆ ಬಂದಿದ್ದರು ಎನ್ನಲಾದ ವಕೀಲರೊಬ್ಬರು, ಕಾರಿನಲ್ಲಿ ತೆರಳಲು ಅಡ್ಡಿಪಡಿಸಿದ ಪೊಲೀಸ್ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿನ ಚೆಕ್ ಪೋಸ್ಟ್ ಬಳಿ ನಡೆದಿದೆ.
ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಕಾಣಲು ಅವರ ವಕೀಲರಾದ ಕೃಷ್ಣ ನಾಯಕ್ ಎನ್ನುವವರು ಬಂದಿದ್ದು ಚೆಕ್ ಪೋಸ್ಟ್ ಬಳಿ ಬಂದಾಗ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ, ಕಾರನ್ನು ಜೈಲಿನ ಆವರಣದೊಳಗೆ ಒಯ್ಯುವಂತಿಲ್ಲ, ಇಲ್ಲೇ ಪಾರ್ಕ್ ಮಾಡಿ ನಡೆದು ಹೋಗಿ ಎಂದರು.
ಇದರಿಂದ ಕೆರಳಿದ ವಕೀಲರು, ಅದ್ಹೇಗೆ ಕಾರು ಬಿಡಲ್ಲ, ನೀವು ಹೇಳಿದ್ದೇ ಕಾನೂನಾ..? ನಾನು 60-ವರ್ಷ ದಾಟಿರುವ ಹಿರಿಯ ನಾಗರೀಕ, 2 ಕಿಮೀ ಹೇಗೆ ನಡೆದುಹೋಗುವುದು? ನಿಮ್ಮ ಮೇಲಧಿಕಾರಿಗಳೊಂದಿಗೆ ಮಾತಾಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇಲಧಿಕಾರಿಗಳು ಮೊದಲು ಖಾಸಗಿ ಕಾರನ್ನು ಬಿಡಬೇಡಿ ಅಂತ ಹೇಳಿದರು. ಈ ವೇಳೆ ಮತ್ತೆ ನಿಮ್ಮದೆ ಕಾರಿನ ಕರೆದುಕೊಂಡು ಹೋಗಿ. ಸೆಕ್ಯುರಿಟಿ ರೀಸನ್ ಆದರೆ, ಚೆಕ್ ಮಾಡಿ ಬಿಡಿ, ಇಲ್ಲ ಬರೆದು ಕೊಡಿ ನಾ ಒಳಗಡ ಬರಲ್ಲ, ಕೋರ್ಟಲ್ಲಿ ನೋಡಿಕೊಳ್ಳುತ್ತೇನೆ ಎಂದು ವಕೀಲರು ಪಟ್ಟು ಹಿಡಿದರು. ಅಂತಿಮವಾಗಿ ಕಾರಿನಲ್ಲಿ ತೆರಳಲು ವಕೀಲರಿಗೆ ಪೊಲೀಸರು ಅನುಮತಿ ನೀಡಿದರು.
ಜನಸಾಮಾನ್ಯರ ವಿರುದ್ಧ ಅವರೇಳಿದ್ದೆ ಕಾನೂನು ಎಂಬಂತೆ ದರ್ಪ ಪ್ರದರ್ಶಿಸುತ್ತಿದ್ದ ಪೊಲೀಸರು, ವಕೀಲರ ಆಕ್ರೋಶಕ್ಕೆ ಬೆಸ್ತುಬಿದ್ದಿದ್ದು ಮಾತ್ರ ನೋಡುಗರಲ್ಲಿ ನಗು ಹುಟ್ಟಿಸಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….