Site icon Harithalekhani

ಗ್ರಾಮದ ಒಳಿತಿಗಾಗಿ ಊರು ಬಿಟ್ಟ ಗ್ರಾಮಸ್ಥರು..!: ಕೊಟ್ಟಿಗೆಮಾಚೇನಹಳ್ಳಿ ಖಾಲಿ ಖಾಲಿ| ವಿಡಿಯೋ ನೋಡಿ

ದೊಡ್ಡಬಳ್ಳಾಪುರ, (ಜೂ.25); ಗ್ರಾಮದ ಒಳಿತಿಗಾಗಿ ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಜನ, ಜಾನುವಾರುಗಳೊಂದಿಗೆ ಇಡೀ ಗ್ರಾಮಸ್ಥರು ಊರನ್ನು ತ್ಯಜಿಸಿರುವ ಆಚರಣೆ ತಾಲೂಕಿನ ಕೊಟ್ಟಿಗೆ ಮಾಚೇನಹಳ್ಳಿಯಲ್ಲಿ ಕಂಡುಬಂದಿದೆ.

ತಾಲೂಕಿನ ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೊಟ್ಟಿಗೆ ಮಾಚೇನಹಳ್ಳಿ ಗ್ರಾಮಸ್ಥರಿಂದ ಗ್ರಾಮ ದೇವತೆಯಾದ ವರ್ಪನಮ್ಮ ದೇವರಿಗೆ ಈ ವಿಶೇಷ ಆಚರಣೆ ನಡೆಸಿದ್ದಾರೆ.

ಗ್ರಾಮದ ಸಮಸ್ಯೆಗಳು ಬಗೆಹರಿಯಲು, ಗ್ರಾಮ ಶಾಂತಿಯುತವಾಗಿರಲು, ಯಾವುದೇ ರೀತಿಯ ಸಮಸ್ಯೆಗಳಾಗದೇ ಎದುರಾಗದಂತೆ ಒಂದು ದಿನದ ವಲಸೆಯನ್ನು ಗ್ರಾಮಸ್ಥರು ಕೈಗೊಂಡಿದ್ದಾರೆ‌

ಗ್ರಾಮದ ಹೊರವಲಯದಲ್ಲಿ ಶೆಡ್ ನಿರ್ಮಿಸುವ ಗ್ರಾಮಸ್ಥರು ಅಲ್ಲೆ ವಾಸವಿದ್ದು, ಬೆಳಗ್ಗೆ ಏಳು ಗಂಟೆಯಿಂದ ಸಂಜೆ 5ರವರೆಗೆ ಅಲ್ಲೇ ಗ್ರಾಮ ದೇವತೆಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ‌.

ಸುಮಾರು 25 ವರ್ಷಗಳ ನಂತರ ಈ ಆಚರಣೆಯನ್ನು ಗ್ರಾಮಸ್ಥರು ನಡೆಸಿದ್ದು, ಪ್ರಾಚೀನ ಕಾಲದ ಪದ್ಧತಿಯನ್ನು ಗ್ರಾಮಸ್ಥರು ಇಂದಿಗೂ ಆಚರಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version