ಬೆಂಗಳೂರು, (ಜೂ.25): ಧಿಡೀರನೆ ನಂದಿನಿ ಹಾಲಿನಿ ಬೆಲೆ ಏರಿಸುವ ಮೂಲಕ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಶಾಕ್ ನೀಡಿದ್ದಾರೆ. ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ಗೆ 2 ರೂ. ಹಾಗೂ ಒಂದು ಲೀಟರ್ ಹಾಲಿನ ಪ್ಯಾಕೆಟ್ ಮೇಲೆ 1 ರೂ. ದರ ಹೆಚ್ಚಿಸಲಾಗಿದೆ.
ಇದೇ ವೇಳೆ ಪ್ರತಿ ಲೀಟರ್ ಪ್ಯಾಕೆಟ್ ನಲ್ಲಿ 50 ಮಿಲೀ ಹಾಲನ್ನು ಹೆಚ್ಚಿಗೆ ನೀಡುವುದಾಗಿ ಭೀಮಾನಾಯ್ಕ್ ಹೇಳಿದ್ದಾರೆ. ಇದರಿಂದ ನಂದಿನಿ ಹಾಲಿನ ಬೆಲೆಯೇರಿಕೆಯ ಬಿಸಿ ಜನರಿಗೆ ತಟ್ಟುವುದಿಲ್ಲ ಎಂದು ಅವರು ಹೇಳಿದ್ದಾರೆ.
ನಾಳೆಯಿಂದ ಈ ದರ ನಾಳೆಯಿಂದ ಅನ್ವಯವಾಗಲಿದೆ ಎಂದು ಭೀಮಾನಾಯ್ಕ್ ತಿಳಿಸಿದರು. ಕೆಎಂಎಫ್ ಎಂಡಿ ಎಂಕೆ ಜಗದೀಶ್, ಆಡಳಿತ ಮಂಡಳಿ ಸದಸ್ಯರು ಸಹ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….