Site icon Harithalekhani

ಜುಲೈ.07 ರಂದು ದೊಡ್ಡಬಳ್ಳಾಪುರದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಅದ್ಧೂರಿ ಆಚರಣೆ; ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ದೊಡ್ಡಬಳ್ಳಾಪುರ, (ಜೂ.25); ಕೆಂಪೇಗೌಡ ಜಯಂತಿ ಆಚರಣಾ ಸಮಿತಿವತಿಯಿಂದ ಜುಲೈ 07 ರಂದು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.

ಈ ಕುರಿತಂತೆ ಇಂದು ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮುಖಂಡರು ತೀರ್ಮಾನಿಸಿದ್ದು, ಇದೇ ಮೊದಲ ಬಾರಿಗೆ SSLC, PUC ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕಪಡೆದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲು ತೀರ್ಮಾನಿಸಲಾಗಿದೆ.

ಜುಲೈ.07 ರಂದು ಬೆಳಗ್ಗೆ 09 ಗಂಟೆಗೆ ಬೆಳ್ಳಿರಥದಲ್ಲಿ ಕೆಂಪೇಗೌಡರ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು,  ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ನಗರದ ನೆಲದಾಂಜನೇಯ ಸ್ವಾಮಿ ದೇವಾಲಯದಿಂದ ಆರಂಭವಾಗುವ ಮೆರವಣಿಗೆ, ಸೌಂದರ್ಯ ಮಹಲ್ ಚಿತ್ರ ಮಂದಿರ, ತಾಲೂಕು ಕಚೇರಿ ವೃತ್ತದ ಮೂಲಕ ಸಾಗಿ ಜಿ.ರಾಮೇಗೌಡ ವೃತ್ತಕ್ಕೆ ತೆರಳಿ, ನಂತರ ಒಕ್ಕಲಿಗರ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ 2023-24 ನೇ ಸಾಲಿನ SSLC, PUC ಪರೀಕ್ಷೆಯಲ್ಲಿ ಶೇ.90 ಕ್ಕು ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲು ಸಹ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆಯಲ್ಲಿ ನಾಡಫ್ರಭು ಕೆಂಪೇಗೌಡ ಜಯಂತಿ ಆಚರಣೆ ಸಮಿತಿ ಅಧ್ಯಕ್ಷ ಟಿವಿ ಲಕ್ಷ್ಮೀನಾರಾಯಣ್, ಮುಖಂಡರಾದ ಹೆಚ್.ಅಪ್ಪಯ್ಯಣ್ಣ, ಹರೀಶ್ ಗೌಡ, ತಿ.ರಂಗರಾಜು, ವೆಂಕಟೇಶ್ ಬಾಬು,  ಅಂಜನೇಗೌಡ, ಡಿಸಿ ಶಶಿಧರ್, ಬಂತಿ ವೆಂಕಟೇಶ್, ಗಂಟಿಗಾನಹಳ್ಳಿ ರಂಗಪ್ಪ, ವಿಶ್ವಾಸ್ ಗೌಡ, ನಾಗೇಶ್, ಶ್ರೀನಿವಾಸ್ ಗೌಡ, ಮನೋಹರ್, ಮೆಳೇಕೋಟೆ ಕ್ರಾಸ್ ನಾಗೇಶ್, ರೇವತಿ ಅನಂತರಾಮ್, ಲಕ್ಷ್ಮೀ, ಶೋಭಾ, ಆಶಾ ಮತ್ತಿತರರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version