Site icon Harithalekhani

ಅಶ್ಲೀಲ ಸಂದೇಶ ಪ್ರಕರಣ: ಮೃತ ರೇಣುಕಾಸ್ವಾಮಿ ಮಡದಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಸಿಎಂಗೆ‌ ಮನವಿ

ಬೆಂಗಳೂರು, (ಜೂ.25): ನಟ ದರ್ಶನ್ ಗೆಳತೆ ಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆಂದು ಹತ್ಯೆಗೀಡಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬ ಸದಸ್ಯರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದರು.

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ ನ್ಯಾಯ ಒದಗಿಸಲು ಮನವಿ ಸಲ್ಲಿಸಿದರು. ಈಗ ನಡೆಯುತ್ತಿರುವ ಪೊಲೀಸ್‌ ತನಿಖೆ ಸಮಾಧಾನ ತಂದಿದೆ ಎಂದಿದ್ದಾರೆ ಎಂದು ತಿಳಿದು ಬಂದಿದೆ.

ಮನವಿ ಸಲ್ಲಿಸಿದ ಕುಟುಂಬಸ್ಥರು ರೇಣುಕಾಸ್ವಾಮಿ ಪತ್ನಿಗೆ ಸಹನಾಗೆ ಸರ್ಕಾರಿ ನೌಕರಿ ನೀಡಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ನ್ಯಾಯ ಸಿಗುವ ಭರವಸೆ ಇದೆ. ಆದರೆ ಸೊಸೆ ಚಿಕ್ಕವಯಸ್ಸಿನವಳು .ಅಲ್ಲದೆ ಆಕೆ ಗರ್ಭಿಣಿ ಬೇರೆ.. ಹೀಗಾಗಿ ಜೀವನಕ್ಕೆ ಏನಾದರೂ ದಾರಿ ಮಾಡಬೇಕು ಎಂದು ರೇಣುಕಾಸ್ವಾಮಿ ಪೋಷಕರು ಮನವಿ ಮಾಡಿಕೊಂಡಿದ್ದಾರೆ.

ಕಾನೂನು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಸಿದ್ದರಾಮಯ್ಯ ರೇಣುಕಾಸ್ವಾಮಿ ಕುಟುಂಬಕ್ಕೆ ಹೇಳಿದ್ದು, ಪತ್ನಿ ಸಹನಾಗೆ ಸರ್ಕಾರಿ ಕೆಲಸ ಕೊಡಿಸುವ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version