ದೊಡ್ಡಬಳ್ಳಾಪುರ, (ಜೂ.20); ಫಸಲ್ ವಿಮೆ ಯೋಜನೆ ಕುರಿತು ಅನ್ಯಾಯಕ್ಕೆ ಒಳಗಾಗಿರುವ ರೈತರ ಸ್ಥಾನದಲ್ಲಿ ನಿಂತು ಅಧಿಕಾರಿಗಳು ಯೋಚಿಸಿದರೆ.. ಅನ್ನದಾತರ ನೋವೇನು ಎಂಬುದು ಅರಿವಾಗುತ್ತದೆ ಎಂದು ಕೆಎಂಎಫ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ಹೇಳಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಫಸಲ್ ವಿಮೆ ಯೋಜನೆಯಲ್ಲಿ ಹಣ ಕಟ್ಟಿದ ರೈತರಿಗೆ ಅನ್ಯಾಯವಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ರೈತರಿಗೆ ಪದೇ ಪದೇ ಅನ್ಯಾಯವಾಗಲು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ನೇರವಾಗಿ ಆರೋಪಿಸಿದರು.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಫಸಲ್ ವಿಮೆ ರೈತರಿಗೆ ವರದಾನ. ಆದರೆ ವಿಮೆ ಕಂಪನಿ ಹಾಗೂ ಕೆಲ ಇಲಾಖೆಗಳ ಷಡ್ಯಂತ್ರದಿಂದ ರೈತರಿಗೆ ಬರಬೇಕಾದ ಪರಿಹಾರ ಬರುತ್ತಿಲ್ಲ. ಈ ಕುರಿತು ಅನೇಕ ಬಾರಿ ಸಂಬಂಧಿಸಿದವರೊಂದಿಗೆ ಚರ್ಚಿಸಲಾಗಿದೆ ಆದಾಗ್ಯೂ ಅಧಿಕಾರಿಗಳ ಧೋರಣೆ ಬದಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪದೇ ಪದೇ ರೈತರಿಗೆ ವಂಚಿಸುವ ವಿಮೆ ಕಂಪನಿಗಳು, ಅಧಿಕಾರಿಗಳ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರಕಾರ ಕ್ರಮಕೈಗೊಂಡು, ಮತ್ತೆ ಈ ರೀತಿಯ ಅನ್ಯಾಯ ರೈತರಿಗೆ ಆಗದಂತೆ ನಿಗವಹಿಸಬೇಕೆಂದು ಬಿಸಿ ಆನಂದ್ ಕುಮಾರ್ ಒತ್ತಾಯಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….