ಹರಿತಲೇಖನಿ ದಿನಕ್ಕೊಂದು ಕಥೆ: ಸಂಘದೋಷ

ಅಲ್ಲೊಂದು ಸಿಲೂರು ಅಂತಾ ಇತ್ತಂತೆ. ಆ ಊರಾಗ ಇದ್ದ ಅಗಸರ ಹನುಮಂತಣ್ಣ ಬಟ್ಟೆ ತೊಳೆಯೋದ್ರಾಗ ಫುಲ್‌ ಫೇಮಸ್‌ ಆಗಿದ್ನಂತೆ. ಅದು ಎಷ್ಟರಮಟ್ಟಿಗೆ ಅಂದ್ರ ಸುತ್ತಮುತ್ತ ಹತ್ತಳ್ಳಿ ಜನ ಎಲ್ರೂ ಅಗಸರ ಹನುಮಂತಣ್ಣನ ಕೈಯಾಗ ಹಳೆ ಬಟ್ಟೆನೂ ಹೊಸಾವು ಆಕವೆ ಅಂತಿದ್ರಂತೆ.

ಹನುಮಂತಣ್ಣನೂ ಹಂಗ ಇದ್ದ ಮತ್ತ. ಆತನ ಕೆಲಸಕ್ಕ ಜೊತೆಯಾಗಿ ಇಬ್ಬರು ಮಕ್ಕಳಿದ್ರಂತೆ. ಮಕ್ಕಳ ದೊಡ್ಡತನ ಅಂದರ ಹನುಮಂತಣ್ಣ ಎಷ್ಟು ಮಣಭಾರದ ಬಟ್ಟೆ ಹೊರಿಸಿದರೂ ಝುಂ ಅಂತಿರಲಿಲ್ಲಂತೆ. ಅಂಜುತಿರಲಿಲ್ಲ ಅಳುಕುತಿರಲಿಲ್ಲಂತೆ. ಹನುಮಂತಣ್ಣನ ಹೆಂಡ್ತಿನೂ ಕುಂತುಣ್ಣಾಕಿ ಅಲ್ಲ. ಊರಾಗಿನ ಮನಿಮನಿಗೆ ಹೋಗಿ ಇದ್ದಿಲಿ ತರ್ತಿದ್ಲಂತೆ.

ಹೀಂಗ ಒಂದ್ಸಲ ಏನಾತಪ ಅಂದರ ಬರಗಾಲ ಅಂದರ ಬರಗಾಲ ಬಿದ್ದುಬಿಡ್ತಂತೆ. ಊರಾಗಿನ ಕೆರಿ ಬತ್ತಿಬಿಡ್ತಂತೆ. ಊರಿನ ಜನಕ್ಕ ಕುಡಿಯಾಕ ನೀರಿಲ್ದಂಗಾತಂತೆ. ಇನ್ನು ಹನುಮಂತಣ್ಣ ಬಟ್ಟೆ ತೊಳೆಯೋದು ಹೆಂಗ? ಹೊಟ್ಟಿ ಮ್ಯಾಲೆ ತಣ್ಣೀರ ಬಟ್ಟೇನ ಗತಿಯಾತಂತೆ. ಎಷ್ಟು ದಿನ ಹಂಗ ಇರ್ತಾರ? ಅವಾಗಲೂ ಹನುಮಂತಣ್ಣನ ಇಬ್ಬರು ಮಕ್ಕಳು ಆತನ ನೆರವಿಗೆ ಬಂದ್ರಂತೆ. ಹೆಂಗಪ ಅಂದರ ಬಿಸಿಲೂರಿನಿಂದ ಮೈಲು ದೂರದಾಗ ಮಳೆಯೂರು ಅಂತ ಒಂದೂರಿತ್ತಂತೆ. ಅಲ್ಲಿದ್ದ ಒಂದು ಕೆರಿಯಾಗ ನೀರು ಯಾವಾಗಲೂ ಇರ್ತಿದ್ವಂತೆ. ನೀರು ನೋಡಿಕೆಂಡು ಬಂದ ಹನುಮಂತಣ್ಣನ ಮಕ್ಕಳು ಅಪ್ಪನನ್ನ ಜೊತೆಗೆ ಕರ್ಕಂಡು ಬಟ್ಟೆ ಹೊತ್ಕಂಡು ಹೋಗಿ ತೊಳ್ಕಂಡು ಬಂದ್ರಂತೆ. ಮತ್ತ ಜೀವನ ಮೊದಲಿನಂಗಾತಂತೆ.

ಹಿಂಗ ನಡೆದಿದ್ರ ಎಲ್ಲ ಸರಿ ಇರ್ತಿತ್ತಂತೆ. ಆದರ, ಮಳೆಯೂರಿಗೆ ಹೋದ ಹನುಮಂತಣ್ಣನ ಮಕ್ಕಳು ಸ್ವಲ್ಪ ದಿನಕ್ಕ ಬದಲಾಗಿಬಿಟ್ರಂತೆ. ಏನಾತು ಅಂದರ ಇದಕ್ಕಿಂತ ಮೊದಲು ಹನುಮಂತಣ್ಣ ನಾಲ್ಕು ದಿನಕ್ಕೋ ವಾರಕ್ಕೋ ಒಮ್ಮೆ ಒಟ್ರಾಶಿ ಬಟ್ಟೆ ಮಾಡ್ಕಂಡು ಗಂಟು ಕಟ್ಕಂಡು ತೊಳಿತಿದ್ನಂತೆ. ಈಗ ನೋಡಿದ್ರ ದಿನದಿನಕ್ಕ ಕೂಡು ಹಾಕೆಂಡು ಕುಂತ್ರ ಬಟ್ಟೆ ಭಾಳ ಆಕಾವು ಅಂತ ಪ್ರತಿ ದಿನಾನೂ ಬಟ್ಟೆ ತೊಳಿಯಲು ಹೋಗಲು ಶುರು ಮಾಡಿದ್ನಂತೆ.

ಇದರಿಂದ ದಿನ್‌ದಿನಾ ಮಳೆಯೂರಿಗೆ ಹೊಂಟ ಹನುಮಂತಣ್ಣನ ಮಕ್ಕಳು ಮಳೆಯೂರಿನ ಅಗಸರ ನಾಗಣ್ಣನ ಮಕ್ಕಳ ಗೆಳೆತನ ಬೆಳೆಸಿದ್ರಂತೆ. ಇದರ ಪರಿಣಾಮ ಏನಾತು ಅಂದರ ಹನುಮಂತಣ್ಣನ ಮಕ್ಕಳಿಬ್ಬರೂ ನಿಧಾನಕ್ಕ ಸೋಮಾರಿಗಳಾದ್ರಂತೆ. ಕಾರಣ ಏನಪ ಅಂತ ಹುಡುಕಿದ್ರ ನಾಗಣ್ಣ ತನ್ನ ಮಕ್ಕಳಿಗೆ ಕೆಲಸಾನ ಹಚ್ಚುತ್ತಿರಲಿಲ್ಲಂತೆ. ಹೆಂಗೂ ಊರಾಗ ನೀರಿದ್ವಲ್ಲ ಕೆರೆ ಪಕ್ಕದಲ್ಲೇ ಒಂದು ಮನೆ ಕಟ್ಕೆಂಡು ವಾಷಿಂಗ್‌ ಮಶಿನ್‌ ಇಟ್ಟಕಂಡಿದ್ರಂತೆ. ನೀರಾಗಿಳಿಯಂಗಿಲ್ಲ ಕೈಮುಟ್ಟಿ ಕೆಲಸ ಮಾಡಂಗಿಲ್ಲ. ಆರಾಮದಾಯಕ ಬದುಕಿನಿಂದ ಅವರ ಮೈ ಜಡ್ಡುಗಟ್ಟಿದ್ವಂತೆ.

ಒಂದಿನ ಮಳೆಯೂರಿನಿಂದ ವಾಪಾಸ್‌ ಬರುವ ದಾರಾರ‍ಯಗ ಹನುಮಮತಣ್ಣನ ಮಕ್ಕಳು ನಾವು ನಮ್ಮೂರಾಗ ಒಂದು ಮನೆ ಕಟ್ಟಿ ವಾಷಿಂಗ್‌ ಮಶೀನ್‌ ತರಬೇಕು ಅಂತಾ ಹೇಳಿದ್ರಂತೆ. ಅದಕ್ಕ ಹನುಮಂತಣ್ಣ ನಮ್ಮೂರಾಗ ಅವೆಲ್ಲ ನಡೆಯಲ್ಲ. ಹಾಸಿಗಿ ಇದ್ದಷ್ಟ ಕಾಲು ಚಾಚಬೇಕು ಅಂದ್ನಂತೆ. ದಾರಿಯುದ್ದಕ್ಕೂ ಒಂದೂ ಮಾತಾಡದ ಮನಿಗೆ ಬಂದ ಮಕ್ಕಳಿಬ್ಬರೂ ಒಂದು ತುತ್ತು ಉಣ್ಣದೇ ಮಕ್ಕಂಡು ಬಿಟ್ರಂತೆ.

ಯಾಕ ಹಿಂಗ ಬ್ಯಾಸರ ಮಾಡ್ಕೆಂಡಾರ? ಅಂತ ಕೇಳಿದ ಹನುಮಂತಣ್ಣನ ಹೆಂಡತಿ ಮಾಡಿ ಕೊಡ್ರಿ ದುಡಿಯೋ ಮಕ್ಕಳನ್ನ ಹಿಂದಕ್ಕೇಳಿಬ್ಯಾಡ್ರಿ ಅಂದ್ಲಂತೆ. ಆತು ಬಿಡು ಮಾಡ್ಲಿ. ನಾವು ಇನ್ನು ಎಷ್ಟ್‌ ದಿವಸ ಅಂತಾ ದುಡಿಯೋಕಾಗುತ್ತ? ಅಂದ ಹನುಮಂತಣ್ಣ ಅವರ್ನ ಇವರ್ನ ಕೈಕಾಲ ಹಿಡ್ದು ಬ್ಯಾಂಕಿನ್ಯಾಗ ಸಾಲ ತೆಗೆದು ಮಕ್ಕಳಾಸೆಪಟ್ಟಂಗ ಮಾಡಿಕೊಟ್ನಂತೆ.

ಹನುಮಂತಣ್ಣನ ಮಕ್ಕಳಿಗೇನೊ ಖುಷಿ ಆತಂತೆ. ಎಲ್ಲಾ ಆಟೋಮ್ಯಾಟಿಕ್‌ ಇದ್ದ ವಾಷಿಂಗ್‌ ಮಶೀನು ಬಟ್ಟೆ ತೊಳ್ದು ಒಣಗಿಸಿ ಕೊಡ್ತಿದ್ದವಂತೆ. ಇಬ್ಬರೂ ಅಣ್ಣ ತಮ್ಮ ಸೇರಿ ಇಸ್ತ್ರಿ ಮಾಡಿಕೊಟ್ರ ಮುಗಿತಂತೆ. ಕೊರಳಪಟ್ಟಿ ತೋಳು ಮ್ಯಾಗಿನ ಕೊಳೆ ಹಂಗ ಇರ್ತಿತ್ತಂತೆ. ಇದರಿಂದ ವಾರ ಕಳೆದಾಂಗ ತಿಂಗಳು ಆದಾಂಗ ಜನರು ಬಟ್ಟೆ ಕೋಡೋರು ಕಡಿಮೆ ಮಾಡಿದ್ರಂತೆ.

ಬಟ್ಟೆಗಳು ಮೊದಲಿನಂಗ ಸ್ವಚ್ಚ ಆಗಂಗಿಲ್ಲ ಅಂತ ಹನುಮಂತಣ್ಣಗ ಹೇಳಾಕ ಶುರು ಮಾಡಿದ್ರಂತೆ. ವಾಷಿಂಗ್‌ ಮಶೀನ್ಯಾಗ ತೊಳಿಯೋದಾದ್ರ ಅವರಿಗ್ಯಾಕ ಕೊಡಬೇಕು ಅಂತಿದ್ರಂತೆ. ಆರು ತಿಂಗಳಾದ್ರು ಬ್ಯಾಕಿನ ಒಂದು ಕಂತಿನ ರೊಕ್ಕ ಆಗರಲಿಲ್ಲಂತೆ. ಮಕ್ಕಳು ನೋಡಿದರ ಇದ ಪಾಡೈತಿ ಜನ ಸ್ವಲ್ಪ ದಿನ ಹಂಗ ಬಿಡು ಅಂತಿದ್ರಂತೆ. ಹನುಮಂತಣ್ಣ ಸಣ್‌ ಮಕ ಮಾಡ್ಕಂಡು ಹೆಂಡತಿ ಮುಂದ ನಿಂತರ ಹೆಂಡತಿನೂ ಸೆರಗಿನ ಮರೆಯಾಗ ಕಣ್ಣೊರೆಸಿಕೊಂಡ್ಲಂತೆ. ಜನ ಸುಮ್ನಿರಬೇಕಲ್ಲ ಅಗಸನ ಮಕ್ಕಳು ಕತ್ತಿ ಆದ್ರು ಅಂತಿದ್ರಂತೆ.

ಆದರ ಅಸಹಾಯಕರಾದ ಗಂಡ ಹೆಂಡತಿ ಇಬ್ರು ಮಕ್ಕಳಿಗೆ ಹೆಂಗ ಅರ್ಥ ಮಾಡಿಸೊದಪ ಅನ್ನೋದಕ್ಕ ಬರೇ ಚಿಂತಿ ಮಾಡೋದ ಆತಂತೆ. ಕೈ ಕಟ್ಕೆಂಡು ಕುಂತರ ಕೆಲಸಾಗಂಗಿಲ್ಲ ಅಂದು ನೋಡಮಟ ನೋಡಿದ ಹನುಮಂತಣ್ಣ ಹೆಂಡತಿ ಕರ್ಕಂಡು ಎರಡು ಕತ್ತಿ ತಂದು ಬಟ್ಟೆ ಹಾಕೆಂಡು ತೊಳಿಯಾಕ ಹೋದ್ನಂತೆ.

ಕೃಪೆ: ಸಾಮಾಜಿಕ ಜಾಲತಾಣ (ಸೋಮು ಕುದರಿಹಾಳ) 

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಪಾಕಿಸ್ತಾನದ ವಿರುದ್ಧ ಯುದ್ಧ ಬೇಡವೆಂದ ಸಿಎಂ ಸಿದ್ದರಾಮಯ್ಯ ಯೂ ಟರ್ನ್

ಪಾಕಿಸ್ತಾನದ ವಿರುದ್ಧ ಯುದ್ಧ ಬೇಡವೆಂದ ಸಿಎಂ ಸಿದ್ದರಾಮಯ್ಯ ಯೂ ಟರ್ನ್

ಪಾಕಿಸ್ತಾನವೇ ಆಗಲಿ, ಯಾವುದೇ ದೇಶದ ವಿರುದ್ಧವಾದರೂ ಭಾರತ ಯುದ್ಧ ಮಾಡಿಯೇ ಸಿದ್ಧ, ಇದನ್ನು ಪ್ರತೀ ಸಂದರ್ಭದಲ್ಲೂ ಭಾರತ ಸಾಭೀತು ಮಾಡಿದೆ ಸಿದ್ದರಾಮಯ್ಯ (Cmsiddaramaiah).

[ccc_my_favorite_select_button post_id="105808"]
ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆ: ಏ. 27 ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಿಎಂ, ಡಿಸಿಎಂ ಆಗಮನ

ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆ: ಏ. 27 ಕ್ಕೆ ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಭೈರದೇನಹಳ್ಳಿ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶ

[ccc_my_favorite_select_button post_id="105775"]
ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಇನ್ನಿಲ್ಲ..!

ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಇನ್ನಿಲ್ಲ..!

ಇಸ್ರೋ ಮಾಜಿ ಅಧ್ಯಕ್ಷರಾಗಿದ್ದ ಡಾ.ಕೆ.ಕಸ್ತೂರಿ ರಂಗನ್ (Dr.K.Kasturirangan) ಅವರು ಶುಕ್ರವಾರ ನಿಧನರಾಗಿದ್ದಾರೆ.

[ccc_my_favorite_select_button post_id="105768"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

RCB ಗೆಲುವು: ನಮ್ ಹುಡುಗ್ರು ‘ಚಿನ್ನ’ ಸ್ವಾಮಿ ಎಂದ ಡಿಕೆ ಶಿವಕುಮಾರ್

RCB ಗೆಲುವು: ನಮ್ ಹುಡುಗ್ರು ‘ಚಿನ್ನ’ ಸ್ವಾಮಿ ಎಂದ ಡಿಕೆ ಶಿವಕುಮಾರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 2025ರ ಐಪಿಎಲ್ ಪಂದ್ಯದಲ್ಲಿ ಕೊನೆಗೂ ತವರು ನೆಲದಲ್ಲಿ ಉಸಿರು ಗಟ್ಟಿಸಿ, ಅಂತಿಮವಾಗಿ ಗೆದ್ದು ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.

[ccc_my_favorite_select_button post_id="105755"]
ಕೆರೆಯಲ್ಲಿ ಈಜು ಕಲಿಸಲು ಹೋಗಿ ತಂದೆ ಮಗಳ ದಾರುಣ ಸಾವು..!

ಕೆರೆಯಲ್ಲಿ ಈಜು ಕಲಿಸಲು ಹೋಗಿ ತಂದೆ ಮಗಳ ದಾರುಣ ಸಾವು..!

ಮಗಳು ಧನುಶ್ರೀಗೆ ಈಜು ಕಲಿಸಲು ಹೋಗಿದ್ದ ತಂದೆ ಕೆರೆಯಲ್ಲಿ ಮುಳುಗಿ ಮಗಳೊಡನೆ ಸಾವನ್ನಪ್ಪಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ swimming

[ccc_my_favorite_select_button post_id="105788"]
ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport) ಸಂಭವಿಸಿದ ಸರಣಿ ಅಪಘಾತಗಳು ಆತಂಕಕ್ಕೆ ಕಾರಣವಾಗಿದೆ. harithalekhani

[ccc_my_favorite_select_button post_id="105576"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!