ದೊಡ್ಡಬಳ್ಳಾಪುರ, (ಜೂ.19); ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಳೆ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ ಖ್ಯಾತ ವೈದ್ಯರಾದ ಡಾ.ಮಂಜುನಾಥ್ ಅವರು ದಿಢೀರ್ ಬೆಳವಣಿಗೆಯಲ್ಲಿ ವರ್ಗಾವಣೆಗೊಂಡಿದ್ದಾರೆ.
ಹಲವು ವರ್ಷಗಳಿಂದ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಾ, ಸ್ನೇಹ ಜೀವಿ ವೈದ್ಯರೆಂಬ ಖ್ಯಾತಿಗಳಿಸಿದ್ದ ಮಂಜುನಾಥ್ ಅವರನ್ನು ಅಚ್ಚರಿಯ ಬೆಳವಣಿಗೆಯಲ್ಲಿ ಹೊಸಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ.
ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆ ತಾಲೂಕು ಮಟ್ಟದ ಆಸ್ಪತ್ರೆಯಾದರೂ ಜಿಲ್ಲಾ ಮಟ್ಟದ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದರ ಜವಾಬ್ದಾರಿಯನ್ನು ಡಾ.ರಮೇಶ್, ಡಾ.ಮಂಜುನಾಥ್, ಡಾ.ರಾಜು ಹೆಚ್ಚೋ ಕಡಿಮೆಯೋ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಆದರೆ ಇತ್ತೀಚೆಗಷ್ಟೇ ಡಾ.ರಾಜು ನಿವೃತ್ತಿ ಹೊಂದಿದರೆ, ದಿಢೀರ್ ಬೆಳವಣಿಗೆಯಲ್ಲಿ ಡಾ.ಮಂಜುನಾಥ್, ಇಎನ್ಟಿ ತಜ್ಞ ಸಂತೋಷ್, ವರ್ಗಾವಣೆಯಾಗಿರುವುದು ಆಸ್ಪತ್ರೆಯ ಸಿಬ್ಬಂದಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಮಾರ್ಗದರ್ಶಕರಾಗಿ, ವೈದ್ಯರಾಗಿ, ಆಸ್ಪತ್ರೆಯ ಎಲ್ಲಾ ವಿಭಾಗಗಳ ಹಿರಿಯಣ್ಣನಂತಿದ್ದ ಮಂಜುನಾಥ್ ವರ್ಗಾವಣೆ ಸುದ್ದಿ ತಾಲೂಕಿನ ಜನರಿಗೆ ಆತಂಕಕ್ಕೆ ಕಾರಣವಾಗಲಿದೆ.
ಕೂಡಲೇ ಡಾ.ಮಂಜುನಾಥ್ ಅವರ ವರ್ಗಾವಣೆಯನ್ನು ತಡೆಯುವ ನಿಟ್ಟಿನಲ್ಲಿ ಚುನಾಯಿತ ಜನಪ್ರತಿನಿದಿಗಳು ಕ್ರಮಕೈಗೊಳ್ಳುತ್ತಾರೆಯೆ ಕಾದು ನೋಡಬೇಕಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….