ದೊಡ್ಡಬಳ್ಳಾಪುರ, (ಜೂ.19); ಯೋಗ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಜೂನ್ 8 ರಿಂದ 16ರವರೆಗೆ ಆನ್‌ಲೈನ್‌ನಲ್ಲಿ ನಡೆದ 8ನೇ ಫೆಡರೇಷನ್ ಯೋಗ ಸ್ಪೋರ್ಟ್ಸ್ ಕಪ್-2024 ಯೋಗ ಚಾಂಪಿಯನ್‌ಷಿಪ್ ನಲ್ಲಿ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು ವಿವಿಧ ಬಹುಮಾನಗಳನ್ನು ಗಳಿಸಿದ್ದಾರೆ.
ಕೇಂದ್ರದ ಯೋಗಪಟುಗಳಾದ ಎನ್.ಖುಷಿಪ್ರಿಯ (ಆದಿತ್ಯ ಪಬ್ಲಿಕ್ ಸ್ಕೂಲ್) ಮತ್ತು ಹಿತಕೆ.ಎಂ (ನಳಂದ ಪ್ರೌಢಶಾಲೆ) ರವರು ಬಾಲಕಿಯರ ರಿದಮಿಕ್ ಪೇರ್ ಯೋಗದಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ.
ಬಾಲಕರ ವಿಭಾಗದಲ್ಲಿ ಜೆ.ಸಿ.ಪ್ರಥಮಶೆಟ್ಟಿ (ಲಿಟ್ಲ್ ಏಂಜಲ್ ಶಾಲೆ) ಮತ್ತು ಎ.ಹಿತೇಶ್(ಸರಸ್ವತಿ ಶಾಲೆ) ರಿದಮಿಕ್ ಪೇರ್‌ಯೋಗ ಸ್ಪರ್ಧೆಯಲ್ಲಿ ನಾಲ್ಕನೆ ಸ್ಥಾನ ಪಡೆದಿದ್ದಾರೆ.
ಸಾಂಪ್ರದಾಯಿಕ ಯೋಗದಲ್ಲಿ ಎಮ್.ಆರ್.ಜಾನ್ಹವಿ (ನಾಗಾರ್ಜುನ ಪಿಯು ಕಾಲೇಜು) ಎಲ್.ನೀರಜ್ (ನಳಂದ ಪ್ರೌಢಶಾಲೆ) ೬ ನೇ ಸ್ಥಾನವನ್ನು ಪಡೆದಿದ್ದಾರೆ. ಎಸ್.ಆವಿಷ(ವಿಶ್ವವಿದ್ಯಾ ಪೀಠ) ಮಧುಶಾಲಿನಿ.ಡಿ.ಎಸ್ (ಗುರುಕುಲ ಇಂಟರ್ ನ್ಯಾಷನಲ್ ಶಾಲೆ)ಸಮಾಧಾನಕರ ಬಹುಮಾನ ಗಳಿಸಿದ್ದಾರೆ ಎಂದು ನಿಸರ್ಗ ಯೋಗ ಕೇಂದ್ರದ ಕಾರ್‍ಯದರ್ಶಿ ಎ.ನಟರಾಜ್ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….