ದಾವಣಗೆರೆ, (ಜೂ.17): ಸಾಕು ನಾಯಿಗಳು ರೈತನ ಜೀವ ಉಳಿಸಿದ ಘಟನೆ ಜಗಳೂರು ತಾಲೂಕಿನ ಬೈರನಾಯಕನ ಹಳ್ಳಿಯಲ್ಲಿ ನಡೆದಿದೆ.
ಜಮೀನಿನಲ್ಲಿ ರೈತ ಹನು ಮಂತಪ್ಪ ಎಂಬವರು ಕೆಲಸ ಮಾಡುವಾಗ ನಾಲ್ಕು ಕರಡಿಗಳು ಏಕಕಾಲದಲ್ಲಿ ದಾಳಿ ಮಾಡಿವೆ. ಇದನ್ನು ಗಮನಿಸಿದ ಸಾಕು ನಾಯಿ ಗಳು ಜೋರಾಗಿ ಬೊಗಳಿ ಕರಡಿಗಳನ್ನು ಬೆದರಿಸಿ ರೈತನನ್ನು ರಕ್ಷಿಸಿವೆ.
ಕರಡಿಗಳ ದಾಳಿಯಿಂದ ಗಂಭೀರವಾಗಿ ಗಾಯ ಗೊಂಡ ರೈತ ಹನುಮಂತಪ್ಪನನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ರಂಗಯ್ಯನ ದುರ್ಗ ಅರಣ್ಯಕ್ಕೆ ಹೊಂದಿಕೊಂಡ ಜಮೀನಿನಲ್ಲಿ ಈ ಘಟನೆ ನಡೆದಿದೆ.
ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಕರಡಿಗಳಿದ್ದು, ಇಲ್ಲೊಂದು ಕರಡಿಧಾಮ ಮಾಡುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….