Site icon Harithalekhani

ಮೋದಿ ಸರಕಾರದಲ್ಲಿ ಕುಮಾರಸ್ವಾಮಿಗೆ ಕೃಷಿ ಅಥವಾ ನೀರಾವರಿ ಖಾತೆ; ಹರೀಶ್ ಗೌಡ ವಿಶ್ವಾಸ

ದೊಡ್ಡಬಳ್ಳಾಪುರ, (ಜೂ.08); ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ದಾಖಲೆ ಮತಗಳ ಅಂತರದಿಂದ ಗೆದ್ದಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಕೃಷಿ ಖಾತೆ ನೀಡುವ ವಿಶ್ವಾಸವಿದೆ ಎಂದು ಜೆಡಿಎಸ್ ಮುಖಂಡ ಹರೀಶ್ ಗೌಡ ಹೇಳಿದರು.

ಇಂದು ದೆಹಲಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಶುಭಕೋರಿದ ಅವರು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಮೋದಿ ಸರ್ಕಾರದಲ್ಲಿ ಕುಮಾರಣ್ಣ ಯಾವುದೇ ಮಂತ್ರಿ ಪದವಿಯ ಬೇಡಿಕೆ ಇಟ್ಟಿಲ್ಲವಾದರು, ಅವರಿಗೆ ಕೃಷಿ ಇಲ್ಲವೇ ನೀರಾವರಿ ಖಾತೆಯನ್ನು ನೀಡುವ ಸಾಧ್ಯತೆ ಇದೆ.

ಮುಖ್ಯಮಂತ್ರಿಯಾಗಿ ರೈತರ ಸಾಲ ಮಾನ್ನಾ ಮಾಡುವ ಮೂಲಕ ರೈತ ನಾಯಕ ಎನಿಸಿರುವ ಕುಮಾರಸ್ವಾಮಿ ಅವರು ಮಣ್ಣಿನ ಮಗ ದೇವೇಗೌಡರ ಸಲಹೆ ಸೂಚನೆಯಿಂದ ಯಾವ ಖಾತೆ ನೀಡಿದರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದರು.

ಈ ವೇಳೆ ಶಾಸಕರಾದ ಸಾರಾ ಮಹೇಶ್, ಬಂಡೆಪ್ಪ ಮಾಣಿಕಪ್ಪ ಕಾಶೆಂಪೂರ್, ಎ.ಮಂಜುನಾಥ್ ಮತ್ತಿತರರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version