Site icon Harithalekhani

ಕೌಟುಂಬಿಕ ಕಲಹ: ದಂಪತಿ ಆತ್ಮಹತ್ಯೆ..!

ಶ್ರೀರಂಗಪಟ್ಟಣ, (ಜೂ.08): ಕೌಟುಂಬಿಕ ಕಲಹದಿಂದ ದಂಪತಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕಿರಂಗೂರು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಪ್ರಭಾವತಿ (45 ವರ್ಷ) ಮತ್ತು ದಿಲೀಪ್ (45 ವರ್ಷ) ಎಂದು ಗುರುತಿಸಲಾಗಿದೆ.

ಇಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಹಾಗಾಗಿ ಕಳೆದ ರಾತ್ರಿ ಪ್ರಭಾವತಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿ ಸಾವಿನಿಂದ ನೊಂದು ಬೆಳಗ್ಗೆ ಪತಿ ದಿಲೀಪ್ ಬಾಬುರಾಯನ ಕೊಪಲು ಬಳಿ ಜಮೀನೊಂದರಲ್ಲಿ​ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸುದ್ದಿ ತಿಳಿದ ಶ್ರೀರಂಗಪಟ್ಟಣ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version