Site icon Harithalekhani

ಬಿಜೆಪಿ ಸಂಸದೆಗೆ ಕಪಾಳ ಮೋಕ್ಷ ಮಾಡಿದ ಮಹಿಳಾ ಪೇದೆ ಬೆಂಬಲಕ್ಕೆ ನಿಂತ ರೈತ ಸಂಘಟನೆಗಳು

ಚಂಡೀಗಢ, (ಜೂ.08): ರೈತ ಹೋರಾಟವನ್ನು ಅವಹೇಳನ‌ ಮಾಡಿ, ರೈತರನ್ನು ಕೀಳಾಗಿ ಟ್ವಿಟ್ ಮಾಡಿದ್ದರೆಂದು ಬಿಜೆಪಿಯ ನೂತನ ಸಂಸದೆ ಮತ್ತು ನಟಿ ಕಂಗನಾ ರಾಣಾವತ್ ಅವರಿಗೆ ಕಪಾಳಮೋಕ್ಷ ಮಾಡಿದ ಕಾರಣ ಸಿಐಎಸ್ಎಫ್ ಮಹಿಳಾ ಪೇದೆ ಕುಲ್ವಿಂದರ್ ಕೌರ್ ಅವರನ್ನು ಅಮಾನತು ಮಾಡಲಾಗಿದೆ.

ಈ ಘಟನೆಯು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದು, ಇದೀಗ ಮಹಿಳಾ ಪೇದೆ ಪರ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಬೆಂಬಲ ವ್ಯಕ್ತಪಡಿಸಿವೆ.

ಮಹಿಳಾ ಪೇದೆ ಅಮಾನತನ್ನು ಖಂಡಿಸಿ ಜೂ.9ರಂದು ಮೊಹಾಲಿಯಲ್ಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ನ್ಯಾಯಕ್ಕಾಗಿ ನಡಿಗೆ (ಇನ್ಸಾಫ್ ಮಾರ್ಚ್) ಹಮ್ಮಿಕೊಂಡಿರುವುದಾಗಿ ಸಂಘಟನೆಗಳು ಹೇಳಿವೆ.

ಇನ್ನು ಪೇದೆಗೆ ಯಾವುದೇ ಅನ್ಯಾಯವಾಗಬಾರದು.. ನಾವು ಸರಿಯಾದ ತನಿಖೆಗೆ ಒತ್ತಾಯಿಸುತ್ತೇವೆ ಎಂದು ರೈತ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ದೆಹಲಿಗೆ ತೆರಳಲು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗಾನಾ ಬಂದಿದ್ದ ವೇಳೆ ಈ ಮುಂಚೆ ರೈತರು ನಡೆಸಿದ್ದ ಹೋರಾಟದ ಕುರಿತಾಗಿ ಕಂಗನಾ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ತಾನು ಕಪಾಳ ಮೋಕ್ಷ ಮಾಡಿದ್ದೇನೆ ಎಂದು ಪೇದೆ ಹೇಳಿದ್ದರು.

ಅಲ್ಲದೇ 100 ರೂಪಾಯಿ ಆಸೆಗೆ ರೈತರ ವೇಷದಲ್ಲಿ ಪ್ರತಿಭಟನೆಗೆ ಕುಳಿತಿದ್ದಾರೆ ಎಂದು ಕಂಗನಾ ಹೇಳಿದ್ದರು. ಅವರು ಈ ರೀತಿ ಹೇಳಿಕೆಯನ್ನು ನೀಡಿದಾಗ ನನ್ನ ತಾಯಿ ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಕುಲ್ವಿಂದರ್ ಕೌರ್ ಹೇಳಿಕೆ ನೀಡಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version