Site icon ಹರಿತಲೇಖನಿ

ಉಪೇಂದ್ರ ಸಿನಿಮಾ ನಾಯಕಿ ರವೀನಾ ಟಂಡನ್ ಮೇಲೆ ಜನರಿಂದ ಹಲ್ಲೆ..!: ದಯವಿಟ್ಟು ನನ್ನ ಹೊಡೀಬೇಡಿ ಎಂದು ಬೇಡಿದ ರವಿನಾ| ವಿಡಿಯೋ ನೋಡಿ

ಮುಂಬೈ, (ಜೂ.02): ಬಾಲಿವುಡ್ ನಟಿ, ಉಪೇಂದ್ರ ಸಿನಿಮಾ ನಾಯಕಿ ರವೀನಾ ಟಂಡನ್ ಅವರ ಮೇಲೆ ಜನರು ಗುಂಪು ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದ ಮುಂಬೈನ ಬಾಂದ್ರಾದಲ್ಲಿ ಶನಿವಾರ ರಾತ್ರಿ ನಡೆದಿದೆ.

ಈ ಘಟನೆಯನ್ನು ಪೊಲೀಸರು ಕೂಡ ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ. ಅಜಾಗರೂಕತೆಯ ಕಾರು ಚಾಲನೆ ಜನರ ಆಕ್ರೋಶಕ್ಕೆ ಕಾರಣ ಎಂದು ತಿಳಿದುಬಂದಿದೆ.

ಈ ಕುರಿತು ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಖಾರ್ ಪೊಲೀಸ್ ಠಾಣೆಯ ಡೈರಿಯಲ್ಲಿ ಘಟನೆಯನ್ನು ನಮೂದಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ನಟಿ ರವೀನಾ ಕೂಡಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರವಿನಾ ಕಾರು​ ಚಾಲಕ ಮೂವರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಲಾಗಿದೆ. ಇದರಿಂದ ಕೋಪಗೊಂಡ ಜನರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಕಾರಿನಿಂದ​ ಕೆಳಗಿಳಿದು ಬಂದ ತಕ್ಷಣವೇ ಜನರು ರವೀನಾರನ್ನು ತಳ್ಳಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ದಯವಿಟ್ಟು ನನ್ನ ಹೊಡಿಯಬೇಡಿ” ಎಂದು ರವೀನಾ ಹೇಳುತ್ತಿರುವುದು ಕೇಳಿಬಂದಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version