ನವದೆಹಲಿ, (ಜೂ.02); ಲೋಕಸಭಾ ಚುನಾವಣೆಯ ಏಳು ಹಂತದ ಮತದಾನ ಮುಗಿದು, ಶನಿವಾರ ಸಂಜೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದೆ. ಎಲ್ಲಾ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ ಡಿಎ ಗೆ ಬಹುಮತ ಬರಲಿದೆ ಎನ್ನುವುದನ್ನು ಸೂಚಿಸುತ್ತಿದ್ದು, ಸದ್ಯ ರಾಹುಲ್ ಗಾಂಧಿ ಮಾತ್ರ ಈ ಬಗ್ಗೆ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್ ಹೆಸರಿನಲ್ಲಿ ನಡೆಸಿದ ಸಮೀಕ್ಷೆ ಮೋದಿ ಮಾದ್ಯಮ ಸಮೀಕ್ಷೆ ಅಂತ ಕರೆಯಬೇಕು. ದೇಶದ ಜನರನ್ನು ದಿಕ್ಕು ತಪ್ಪಿಸಲು ಈ ರೀತಿ ಎಕ್ಸಿಟ್ ಪೋಲ್ ಹೆಸರಿನಲ್ಲಿ ಮೋಸ ಮಾಡಿದ್ದಾರೆ. ಇದು ಫ್ಯಾಂಟಸಿ ಸಮೀಕ್ಷೆ ಎಂದು ಗುಡುಗಿದ್ದಾರೆ.
ಭಾರತದಲ್ಲಿ ಐ ಎನ್ ಡಿಎ ಬರೋಬ್ಬರಿ 295 ಸ್ಥಾನವನ್ನು ಗೆಲ್ಲುವುದು ಖಚಿತ. ನೀವು ಎಕ್ಸಿಟ್ ಪೋಲ್ ಹೆಸರಿನಲ್ಲಿ ಸುಳ್ಳು ಸಮೀಕ್ಷೆ ಮಾಡುವುದು ಬಿಡಿ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….