ಕಟ್ಟೆ ಪಂಚಾಯಿತಿ ಮೂಲಕ ಬಾವ – ಬಾಮೈದನ ನಡುವಿನ ಕಲಹ ದೂರಾಗಿಸಿದ ದೊಡ್ಡಬೆಳವಂಗಲ ಪೊಲೀಸರು…! ರೈತ ಸಂಘದ ನೆರವು

ದೊಡ್ಡಬಳ್ಳಾಪುರ, (ಜೂ.01); ರಸ್ತೆ ವಿಚಾರವಾಗಿ ಆರಂಭವಾಗಿದ್ದ ಸಂಬಂಧಿಕರ ನಡುವೆ ಉಂಟಾಗಿದ್ದ ಕಲಹ ದೊಡ್ಡಬೆಳವಂಗಲ ಪೊಲೀಸರು ಹಾಗೂ ರೈತ ಸಂಘದ ಮುಖಂಡರು ನಡೆಸಿದ ಕಟ್ಟೆ ಪಂಚಾಯಿತಿಯಿಂದಾಗಿ  ಒಂದಾಗಿ ಬಾಳುವುದಾಗಿ ಬಾವ – ಬಾಮೈದ ಪ್ರಮಾಣ ಮಾಡಿರುವ ಘಟನೆ ತಾಲೂಕಿನ ಗಾಣದಾಳು ಗ್ರಾಮದಲ್ಲಿ ನಡೆದಿದೆ.

ದೂರು – ಪ್ರತಿ ದೂರಿನ ಮೂಲಕ ನ್ಯಾಯಲಯದ ಬಾಗಿಲಿಲು ತಟ್ಟುವ ಪರಿಸ್ಥಿತಿಯಲ್ಲಿದ್ದ ಬಾವ – ಬಾಮೈದ ನಡುವಿನ ಕಲಹಕ್ಕೆ ಪೊಲೀಸರು, ರೈತ ಸಂಘದವರು ಸಂಧಾನ ನಡೆಸಿ, ಮುಂದೆ ಬೆಳೆಯುತ್ತಲೇ ಹೋಗುತ್ತಿದ್ದ ಕಲಹವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಗಾಣದಾಳು ಗ್ರಾಮದಲ್ಲಿ ಬಾವ – ಬಾಮೈದರಾದ ಮಂಜುನಾಥ ಮತ್ತು ಶಂಕರ್ ನಡುವೆ ರಸ್ತೆ ವಿಚಾರವಾಗಿ ಜಗಳ ಮಾಡಿಕೊಂಡಿದ್ದರು. ಇದರ ನಡುವೆ ಶಂಕರ ಅವರು ತೋಟ ಮಾಡಿಕೊಂಡಿದ್ದ 53 ಅಡಕೆ ಗಿಡಗಳನ್ನು ಅಪರಿಚಿತ ದುಷ್ಕರ್ಮಿಗಳು ಕತ್ತರಿಸಿಹಾಕಿದ್ದರು‌.

ಇದು ಮಂಜುನಾಥ್ ಮಾಡಿರುವ ಕೃತ್ಯವೆಂದು ಶಂಕರ ದೂರು ನೀಡಿದರೆ, ಶಂಕರ ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆಂದು ಮಂಜುನಾಥ್ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿತ್ತು.

ಕೇವಲ ರಸ್ತೆ ವಿಚಾರವಾಗಿ ಆರಂಭವಾದ ಬಾವ – ಬಾಮೈದ ನಡುವಿನ ಕಲಹ ತೀವ್ರ ಸ್ವರೂಪ ಪಡೆಯುತ್ತಿದ್ದು, ಈ ವಿಚಾರ ತಿಳಿದ ದೊಡ್ಡಬೆಳವಂಗಲ ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್, ರೈತ ಸಂಘದ ಪದಾಧಿಕಾರಿಗಳೊಂದಿಗೆ ಗಾಣದಾಳು ಗ್ರಾಮಕ್ಕೆ ತೆರಳಿ ಮಂಜುನಾಥ ಮತ್ತು ಶಂಕರ್ ಅವರ ಜೊತೆ ಈ ಹಿಂದಿನ ಕಾಲದಂತೆ ಕಟ್ಟೆ ನ್ಯಾಯ ಪಂಚಾಯಿತಿ ಮಾಡಿಸಿದರು.

ಈ ವೇಳೆ ಶಂಕರನ ತೆಂಗಿನ ಗಿಡಗಳನ್ನು ಕತ್ತರಿಸಿಲ್ಲ ಎಂದು ಮಂಜುನಾಥ್ ದೇವರ ಮೇಲೆ ಪ್ರಮಾಣ ಮಾಡಿದರು. ಇದರಿಂದಾಗಿ ಶಂಕರನಲ್ಲಿದ್ದ ಸಂದೇಹ ದೂರಾದಂತೆ ಕಂಡು ಬಂತು. ನಂತರ ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ ಅವರು ದ್ವೇಷದಿಂದ ಉಂಟಾಗುತ್ತಿರುವ ಅವಾಂತರಗಳ ಕುರಿತು ವಿವರಿಸಿ, ಕೆಲ ಸಂದೇಶಗಳನ್ನು ಹೇಳಿ, ದ್ವೇಷ, ಕೋಪ, ಅಸೂಯೆ ತೊರೆದು ಶಾಂತಿ ಸಹಬಾಳ್ವೆಯಿಂದ ಜೀವನ ಮಾಡುವಂತೆ ಸಲಹೆ ನೀಡಿದರು. 

ಇದಕ್ಕೆ ಸಾಥ್ ನೀಡಿದ ಸ್ಥಳೀಯ ರೈತ ಸಂಘದ ಮುಖಂಡರೂ ಕೂಡ ಸಹೋದರರಿಗೆ ತಿಳಿಹೇಳಿ ಸಹಬಾಳ್ವೆಯ ಪಾಠ ಮಾಡಿದರು. ಬುದ್ದಿ ಮಾತಿಗೆ ಸಮ್ಮತಿ ಸೂಚಿಸಿದ ಬಾವ – ಬಾಮೈದ ಪರಸ್ಪರ ಕೈಕುಲುಕಿ ಅನೋನ್ಯವಾಗಿ ಜೀವನ ನಡೆಸುವ ವಾಗ್ದಾನ ಮಾಡಿದರು. 

ಇದೇ ವೇಳೆ ನಾಶವಾಗಿದ್ದ ಶಂಕರನ ಗಿಡಗಳ ಜಾಗದಲ್ಲಿ ಮತ್ತೆ ಗಿಡಗಳನ್ನು ನೆಟ್ಟು ಪೊಲೀಸರು, ರೈತ ಸಂಘದವರು, ಶಂಕರಿಗೆ ಆಗಿದ್ದ ಸಮಯ, ಹಣದ ನಷ್ಟವನ್ನು ಬರಿಸುವ ಪ್ರಯತ್ನ ಮಾಡಿ ಪ್ರಶಂಸಗೆ ಪಾತ್ರರಾದರು.

ಒಟ್ಟಾರೆ ಪೊಲೀಸ್ ಠಾಣೆ ಮೆಟ್ಟಿಲೇರಿ ಕೋರ್ಟು, ಕಚೇರಿ ಅಲೆಯ ಬೇಕಾಗಿದ್ದ ಬಾವ – ಬಾಮೈದರಿಬ್ಬರು ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ ಹಾಗೂ ರೈತ ಸಂಘದ ಕಾಳಜಿಯಿಂದ ಅನೋನ್ಯವಾಗಿ ಬಾಳುವಂತಾಗಿದ್ದು ಪ್ರಶಂಸೆಗೆ ಕಾರಣವಾಯಿತು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಸಂಸದ ಡಾ.ಕೆ ಸುಧಾಕರ್ ಅವರಿಂದ ಬಸ್ ನಿಲ್ದಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಸಂಸದ ಡಾ.ಕೆ ಸುಧಾಕರ್ ಅವರಿಂದ ಬಸ್ ನಿಲ್ದಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ

ನೂತನ ಬಸ್ ನಿಲ್ದಾಣ ನಿರ್ಮಿಸುವ ಕಾಮಗಾರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸಂಸದರಾದ ಡಾ.ಕೆ ಸುಧಾಕರ್ (Dr.k.Sudhakar) ಅವರು ಗುದ್ದಲಿಪೂಜೆ Dr k Sudhakar

[ccc_my_favorite_select_button post_id="105412"]
ಜಾತಿ ಸಮೀಕ್ಷೆ: ಸಿಎಂ ಸಿದ್ದರಾಮಯ್ಯ ಹೇಳಿದ್ದು ಇಷ್ಟು

ಜಾತಿ ಸಮೀಕ್ಷೆ: ಸಿಎಂ ಸಿದ್ದರಾಮಯ್ಯ ಹೇಳಿದ್ದು ಇಷ್ಟು

ಚನ್ನಗಿರಿ ಶಾಸಕರು ಜಾತಿ ಗಣತಿ ಬಗ್ಗೆ ಲಿಂಗಾಯತ ಶಾಸಕರು ರಾಜಿನಾಮೆ ನೀಡುವಂತೆ ಹೇಳಿಕೆ ನೀಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ Cmsiddaramaiah

[ccc_my_favorite_select_button post_id="105401"]
ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ

[ccc_my_favorite_select_button post_id="105011"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಚೆಸ್ ಮೈಗೂಡಿಸಿಕೊಳ್ಳುವ ಮಕ್ಕಳು ಶಿಸ್ತನ್ನು ಕಲಿಯುತ್ತಾರೆ: ಡಿಕೆ ಶಿವಕುಮಾರ್

ಚೆಸ್ ಮೈಗೂಡಿಸಿಕೊಳ್ಳುವ ಮಕ್ಕಳು ಶಿಸ್ತನ್ನು ಕಲಿಯುತ್ತಾರೆ: ಡಿಕೆ ಶಿವಕುಮಾರ್

ರಾಜಕೀಯ ಚೆಸ್ ಆಟವಿದ್ದಂತೆ ಎಂದು ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ನಾವು ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆಯಿಂದ ಇರಬೇಕು. ರಾಜಕೀಯದಲ್ಲಿ DK Shivakumar

[ccc_my_favorite_select_button post_id="105178"]
ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಬರ್ಬರ ಕೊಲೆ

ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಬರ್ಬರ ಕೊಲೆ

ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಯುವತಿಯೋರ್ವಳ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿರುವ (Murder) ಘಟನೆ ಚಿತ್ರದುರ್ಗದಲ್ಲಿ.harithalekhani

[ccc_my_favorite_select_button post_id="105392"]
ದೊಡ್ಡಬಳ್ಳಾಪುರ: ಚಾಲಕನ‌ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ

ದೊಡ್ಡಬಳ್ಳಾಪುರ: ಚಾಲಕನ‌ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ

ಬೆಂಗಳೂರು ನಿಂದ ಹಿಂದೂಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್ ಇದಾಗಿದ್ದು, ಕೆಲ ಪ್ರಯಾಣಿಕರಿಗೆ ಕೈ ಕಾಲು ಮುರಿತ ಸಣ್ಣ ಪುಟ್ಟ. Harithalekhani accident

[ccc_my_favorite_select_button post_id="105419"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!