Site icon ಹರಿತಲೇಖನಿ

ಹಮ್ ದೋ ಹಮಾರೆ ಬಾರಾ ಸಿನಿಮಾ‌ ವಿರೋಧಿಸಿ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ

ದೊಡ್ಡಬಳ್ಳಾಪುರ, (ಮೇ.31); ಜೂನ್ 7 ರಂದು ಬಿಡುಗಡೆಯಾಗುತ್ತಿರುವ “ಹಮ್ ದೋ ಹಮಾರೆ ಬಾರಾ” ಹಿಂದಿ‌ ಸಿನಿಮಾ‌ ವಿರೋಧಿಸಿ ದೊಡ್ಡಬಳ್ಳಾಪುರ ನಗರದಲ್ಲಿ ದೊಡ್ಡಬಳ್ಳಾಪುರ ಊರಿನ ಹಿಂದು, ಮುಸ್ಲಿಂ ಬಾಂಧವರ ಸೌಹಾರ್ದ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ತಹಶಿಲ್ದಾರ್ ಅವರಿಗೆ ಮನವಿ ಪತ್ರ ನೀಡಿದ ಮುಖಂಡರು “ಹಮ್ ದೋ ಹಮಾರೆ ಬಾರಾ” ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆ ಮಾಡದಂತೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ಇತ್ತಿಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು, ಇದರಲ್ಲಿ ನಮ್ಮ ಪವಿತ್ರ ಗ್ರಂಥದಲ್ಲಿರುವ ಅಂಶಗಳನ್ನು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ತಪ್ಪಾಗಿ ಗ್ರಹಿಸಿ, ಅಪಾರ್ಥ ಸೃಷ್ಠಿಸಿದ್ದಾರೆ. ಪ್ರಚೋದನಾತ್ಮಕ ಹಾಗೂ ಅವಹೇಳನಕಾರಿಯಾಗಿ ಚಿತ್ರಿಸಿ ಸಮಾಜದಲ್ಲಿ ಧರ್ಮಗಳ ಮಧ್ಯೆ ಗೊಂದಲ ಉಂಟು ಮಾಡಿದ್ದಾರೆ. ನಮ್ಮ ಧರ್ಮವನ್ನು ತಾಳ್ಮೆಯಿಲ್ಲದ ಧರ್ಮವೆಂದು ತೋರಿಸಲಾಗಿದೆ. ಇದರಿಂದ ಸಮಾಜದಲ್ಲಿ ಸಾಮರಸ್ಯ ಕದಡುವ ಸಾಧ್ಯತೆಯಿದೆ ಎಂದು ಆರೋಪಿಸಿದರು.

ಈ ವೇಳೆ ನಿವೃತ್ತ ಪ್ರೊಫೆಸರ್ ಅಬ್ದುಲ್ ರವೂಫ್, ಮುಖಂಡರಾದ ಶ್ರೀನಗರ ಬಶೀರ್, ಮೊಹಮ್ಮದ್ ಇನಾಯತ್ ಉಲ್ಲ, ಎಂಡಿ ಇಮ್ರಾನ್, ಇಫ್ತೇಖರ್, ಫಯಾಜ್ಖಾನ್, ಜೋಹರ್, ರಿಯಾಝ್, ಇಬ್ರಾಹಿಂ ಮತ್ತಿತರರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version