ದೊಡ್ಡಬಳ್ಳಾಪುರ, (ಮೇ.16); ತಾಲೂಕಿನ ವಡ್ಡರಹಳ್ಳಿ ಮತ್ತು ಮಾಕಳಿದುರ್ಗ ರೈಲು ನಿಲ್ದಾಣಗಳ ನಡುವಿನ ಘಾಟಿ ಗೋಶಾಲೆ ಹತ್ತಿರ ಅಪರಿಚಿತ ಗಂಡಸು ಸುಮಾರು 30 ವರ್ಷದ ಪುರುಷ ರೈಲಿಗೆ ಸಿಲುಕ್ಕಿ ಮೃತಪಟ್ಟಿದ್ದು ಯಶವಂತಪುರ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮೃತನ ಹೆಸರು ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲ.
ಚಹರೆ; 5.5ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ತಲೆಯಲ್ಲಿ ಸುಮಾರು 1 ಇಂಚು ಉದ್ದದ ಕಪ್ಪು ಕೂದಲು, ದುಂಡು ಮುಖ ಇದ್ದು ಸಾಧಾರಣವಾದ ಮೈಕಟ್ಟು,ಹೊಂದಿರುತ್ತಾರೆ.
ಬಟ್ಟೆಗಳು: ಬಿಳಿ ಬಣ್ಣದ ಹೂ ಡಿಸೈನ್ ಶರ್ಟ್, ಬೂದು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಗಿಳಿ ಹಸಿರು ಬಣ್ಣದ ಒಳ ಟೀ ಶರ್ಟ್ ಧರಿಸಿರುತ್ತಾರೆ.
ಮೃತ ದೇಹದ ಬಳಿ ಮೊಬೈಲ್ ದೊರೆತಿದ್ದು, ಅದರಲ್ಲಿ ಈ ವರದಿಗೆ ಬಳಸಿರುವ ಪೋಟೋ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. (ಮೃತನ ಕುಟುಂಬಸ್ಥರ ಮಾಹಿತಿ ನೀಡಲು ಈ ಪೋಟೋ ಬಳಸಲಾಗಿದೆ)
ವಾರಸುದಾರರು ಯಾರಾದರು ಕಂಡು ಬಂದಲ್ಲಿ ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ 9480802143, ಸಂಪರ್ಕಿಸುವಂತೆ ರೈಲ್ವೆ ಪೊಲೀಸರು ಮನವಿ ಮಾಡಿದ್ದಾರೆ
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….