ಬೆಂಗಳೂರು, (ಮೇ.16): ಕೌಟುಂಬಿಕ ಕಲಹಕ್ಕೆ ಬೇಸತ್ತು ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಮೃತಪಟ್ಟಿರುವ ಆಘಾತಕಾರಿ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ ಮೂಲದ ಅಮಿತ್ ಕುಮಾರ್ (28 ವರ್ಷ) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಅಮಿತ್ ಕುಮಾರ್ ಜಿಮ್ ಟ್ರೈನರ್ ಆಗಿದ್ದು, 10 ವರ್ಷದ ಹಿಂದೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದ ಒಂದು ವರ್ಷದ ಹಿಂದೆ ಜಿಮ್ ಸಮೀಪವೇ ಯುವತಿಯನ್ನು ಪ್ರೀತಿಸಿದ್ದ ಪೋಷಕರ ವಿರೋಧದ ನಡುವೆ ಸಹ ಆ ಯುವತಿಯನ್ನು ವಿವಾಹವಾಗಿದ್ದರು.
ಪತ್ನಿ ನರ್ಸಿಂಗ್ ಕೋರ್ಸ್ ಸೇರಿದ ಬಳಿಕ ಪತಿಗೆ ಸಮಯ ನೀಡುತ್ತಿರಲಿಲ್ಲ ಎನ್ನಲಾಗುತ್ತಿದ್ದು, ಫ್ರೆಂಡ್ಸ್ ಜೊತೆ ಪದೇ ಪದೇ ಫೋನ್‌ನಲೇ ಮೈಮರೆಯುತ್ತಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಹೀಗಾಗಿ ಪತಿ ತೊರೆದ ಪತ್ನಿ ಬೇರೆಡೆ ವಾಸವಿದ್ದರು. ಮನೆಗೆ ಪತ್ನಿ ವಾಪಸ್ ಬರುವಂತೆ ಪತಿ ಅಮಿತ್ ಪದೇಪದೆ ಕರೆ ಮಾಡಿ ಮನವಿ ಮಾಡುತ್ತಿದ್ದ.
ಬುಧವಾರ ಕೂಡ ವಿಡಿಯೋ ಕಾಲ್‌ನಲ್ಲಿರುವಾಗಲೇ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ ಎಂದು ವರದಿಯಾಗಿದೆ.
ಬಾಗಲಗುಂಟೆಯ ಪತಿ ಮನೆಯಲ್ಲಿ ನೇಣುಬಿಗಿದಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆ ಆಗಿದೆ. ಈ ಬಗ್ಗೆ ಸುದ್ದಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….