ಬೆಂಗಳೂರು, (ಮೇ.16); ಇದೇ ತಿಂಗಳ 20 ರಿಂದ 25ರ ವರೆಗೆ ನಡೆಯಬೇಕಿದ್ದ 2022-23, 2023-24 ಸಾಲಿನ ವಿವಿಧ ಆಗಮ ಪ್ರವರ ಮತ್ತು ಪ್ರವೀಣ ಪ್ರಸಿದ್ದ ಪರೀಕ್ಷೆಗಳನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ.
ಈ ಕುರಿತು ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಹಾಗೂ ಕರ್ನಾಟಕ ರಾಜ್ಯ ಆಗಮ ಶಿಕ್ಷಣಾ ಮತ್ತು ಪರೀಕ್ಷಾ ಸಮಿತಿಯ ಅಧ್ಯಕ್ಷರು ಪರೀಕ್ಷೆ ಮುಂದೂಡಿರುವ ಕುರಿತು ಪತ್ರ ಬರೆದಿದ್ದಾರೆ.
ಇದರನ್ವಯ ಮೇ.20ರಿಂದ 25ರ ವರೆಗೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಜೂ.10 ರಿಂದ 15 ರವರೆಗೆ ನಡೆಸಲು ತೀರ್ಮಾನಿಸಿದ್ದು, ಈ ಸಂಬಂಧ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….