ವೇದ ಜ್ಯೋತಿಷ್ಯದ ಆಧಾರದ ಮೇಲೆ ಮಕರ ರಾಶಿಯ ಜಾತಕದಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿತಿ, ಕುಟುಂಬ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಫಲಿತಾಂಶಗಳು ಹೀಗಿದೆ.
ರಾಶಿ ಚಕ್ರದಲ್ಲಿ ಹತ್ತನೇ ಜ್ಯೋತಿಷ್ಯ ರಾಶಿಯಾಗಿದ್ದು, ಆಕಾಶ ರೇಖಾಂಶದ 270-300 ಡಿಗ್ರಿಗಳನ್ನು ವ್ಯಾಪಿಸಿದೆ.
ಮಕರ ರಾಶಿ: ಈಗ ನಿಮಗೆ ಕಳೆದ ದಿನಗಳಷ್ಟು ಮನಃಕ್ಲೇಶ ಹಣದ ಅಭಾವ ಇರುವುದಿಲ್ಲ. ನಿಂತು ಹೋಗಿದ್ದ ಕೆಲಸಗಳು ಈಗ ವೇಗ ಪಡೆದುಕೊಳ್ಳುತ್ತದೆ. ಸಾಡೆಸಾತಿಯ ಪ್ರಭಾವದಿಂದ ಸಹ ನೀವು ಬಹಳ ಮುಂದೆ ಬಂದಿದ್ದೀರಿ. ಮೊದಲಿನಷ್ಟು ಈಗ ಶನಿಯ ದುಷ್ಟ ಪ್ರಭಾವ ಈಗ ಇರುವುದಿಲ್ಲ.
ರಾಹು ಮೂರನೇ ಮನೆಯಾದ ಪರಾಕ್ರಮ ಸ್ಥಾನದಲ್ಲಿ ಬಂದಿದ್ದಾನೆ. ಇದು ನಿಮಗೆ ಮನೋಬಲವನ್ನು ವೃದ್ಧಿಸುತ್ತದೆ. ಪರಾಕ್ರಮವನ್ನು ಹೆಚ್ಚಿಸುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಯಾವುದೇ ಕೆಲಸ ಈಗ ಪ್ರಗತಿಯಲ್ಲಿ ಮುಂದುವರೆಯುತ್ತದೆ. ಹಣದ ಹರಿವು ಉತ್ತಮವಾಗುತ್ತದೆ. 16ರ ವರೆಗೂ ಸೂರ್ಯ ಹನ್ನೊಂದನೇ ಮನೆಯಲ್ಲಿ ಇದ್ದು ನಿಮಗೆ ಲಾಭ ತಂದುಕೊಡುತ್ತಾನೆ.
24 ಕ್ಕೆ ಶುಕ್ರ ಹನ್ನೊಂದನೇ ಮನೆಗೆ ಪ್ರವೇಶವಾದಾಗಲೂ ನಿಮಗೆ ಒಳ್ಳೆಯ ಫಲಗಳು ಸಿಗಲಿದೆ. 5 ವರ್ಷದಿಂದ ಸಾಡೆಸಾತಿ ಶನಿಯ ಪ್ರಭಾವದಲ್ಲಿ ಬಹಳ ಬಳಲಿದ್ದೀರಿ. ಈಗ ಒಂದೊಂದಾಗಿ ಶುಭ ಫಲಗಳನ್ನು ಕಾಣಲಿದ್ದೀರಿ. ಮುಂದೆ ನಿಮಗೆ ಒಳ್ಳೆಯ ದಿನಗಳ ಸರಮಾಲೆಯೇ ಬರಲಿದೆ. ಸಾಲ ಸಂದಾಯ ಮಾಡುವುದು, ಹೊಸ ವಾಹನ ಕೊಳ್ಳುವುದು, ಆಸ್ತಿ ಕೊಳ್ಳುವುದು ಮುಂತಾದ ಶುಭ ಸಂಗತಿಗಳು ಇವೆ. ಮನಸ್ಸಿಗೆ ಕವಿದಿದ್ದ ಚಿಂತೆಗಳು ದೂರವಾಗುತ್ತವೆ.
ಮಕರ ರಾಶಿ: ಉತ್ತರಾಷಾಡ (2, 3 ಮತ್ತು 4 ಪಾದಗಳು), ಶ್ರವಣ ನಕ್ಷತ್ರ (4 ಪಾದಗಳು), ಧನಿಷ್ಠ ನಕ್ಷತ್ರ (1 ಮತ್ತು 2 ನೇ ಪಾದಗಳು) ಮಕರ ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ರಾಶಿ ಅಧಿಪತಿ ಶನಿ.
ಮಕರ ರಾಶಿಗೆ ಸೂಚಿಸಲಾದ ಅಕ್ಷರಗಳು: ಬೊ, ಜ, ಜೆ, ಶಿ, ಶೂ, ಶೆ, ಶೋ, ಗ, ಗಿ.
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….