ಬೆಂಗಳೂರು, (ಫೆ.28); ಮಂಗಳವಾರ ನಡೆದ ರಾಜ್ಯಸಭೆ ಚುನಾವಣೆ ಗೆಲುವಿನ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪ ಕುರಿತು ಸಂಸದ ನಾಸೀರ್ ಹುಸೇನ್ ಪ್ರತಿಕ್ರಯಿಸಿದ್ದು, ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಷ್ಟ್ರೀಯ ಸುದ್ದಿವಾಹಿನಿ ಎಎನ್ಐ ಜೊತೆ ಮಾತನಾಡಿರುವ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳ ಖರೀದಿಸಿ, CBI, ED ಬಳಸಿ ಬೆದರಿಸಿ, ಒಂದು ಹೆಚ್ಚುವರಿ ಸ್ಥಾನ ಪಡೆಯಲು ಪುಸ್ತಕದಲ್ಲಿರುವ ಎಲ್ಲಾ ತಂತ್ರಗಳನ್ನು ಬಳಸಿಯೂ ವಿಫಲವಾಗಿರುವ ಬಿಜೆಪಿಯವರ ಹತಾಶೆ ಏನೆಂಬುದು ನಾ ಅರ್ಥ ಮಾಡ್ಕೋತೀನಿ. ಹಣದ ಆಮಿಷ ಒಡ್ಡಿ ಕೂಡ ಗೆಲುವು ಸಾಧಿಸಲು ವಿಫಲರಾದರು ಇದರಿಂದ ಅವರು ತಾಳ್ಮೆ ಕಳೆದುಕೊಂಡಿದ್ದಾರೆ.
ನೆನ್ನೆ ನಡೆದ ಘಟನೆ ಬಗ್ಗೆ ಹೇಳುವುದಾದರೆ, ಚುನಾವಣೆ ಫಲಿತಾಂಶದ ನಂತರ ಅನೇಕ ಮಾಧ್ಯಮಗಳು ಪ್ರತಿಕ್ರಿಯೆ ಪಡೆದರು, ಇದೇ ಸಂದರ್ಭದಲ್ಲಿ ಅನೇಕ ಬೆಂಬಲಿಗರು ನಾಸೀರ್ ಸಾಬ್ ಜಿಂದಾಬಾದ್, ನಾಸೀರ್ ಸಾರ್ ಜಿಂದಾಬಾದ್, ನಾಸೀರ್ ಖಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ, ಆ ಸಂದರ್ಭದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿದ್ದು ಕೇಳಿಲ್ಲ. ಕೇಳಿದ್ದರೆ ಆ ಕ್ಷಣ ಆತನನ್ನ ಜೈಲಿಗೆ ಕಳುಹಿಸುತ್ತಿದ್ದೆ.
ನಾನೂ ಸ್ವಾತಂತ್ರ್ಯ ಹೋರಾಟದ ಕುಟುಂಬದಿಂದ ಬಂದವನು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷದವನು. ರಾಷ್ಟ್ರೀಯತೆ, ರಾಷ್ಟ್ರ ಭಕ್ತಿಯ ಬಗ್ಗೆ ಪಾಠ ಕಲಿಯುವ ಅವಶ್ಯಕತೆ ಇಲ್ಲ. ನಾನು ಮತ್ತು ನನ್ನ ಪಕ್ಷ ಬೇರೆಯವರಿಗಿಂತ 10 ಪಟ್ಟು ಹೆಚ್ಚಾಗಿ ರಾಷ್ಟ್ರೀಯತೆಯ ಗೌರವ, ದೇಶ ಭಕ್ತಿ ಹೊಂದಿದ್ದೇವೆ ಎಂದು ತಿರುಗೇಟು ವಿರೋಧ ಪಕ್ಷಗಳಿಗೆ ನೀಡಿದರು
ನಾ ವಿಧಾನಸೌದದಲ್ಲಿ ಇದ್ದ ವೇಳೆ ನೂರಾರು ಪತ್ರಕರ್ತರು ಅಲ್ಲಿದ್ದರು. 10,15 ಪತ್ರಕರ್ತರಿಗೆ ಪ್ರತಿಕ್ರಿಯೆ ಕೂಡ ನೀಡಿದೆ. ಅವರಲ್ಲಿ ಯಾವ ಪರ್ತಕರ್ತರೂ ಈ ಬಗ್ಗೆ ಪ್ರಶ್ನೆ ಮಾಡಲಿಲ್ಲ. ಒಬ್ಬನ ಹೊರತು ಪಡಿಸಿ, ಬೇರೆ ಯಾವ ಪತ್ರಕರ್ತರು ಘೋಷಣೆ ಕೂಗಿದ್ದು ಕೇಳಿಯೂ ಇಲ್ಲ, ಯಾವ ಪತ್ರಕರ್ತರು ರೆಕಾರ್ಡ್ ಕೂಡ ಮಾಡಿಲ್ಲ. ಯಾವ ಪತ್ರಕರ್ತರು ನಾ ವಿಧಾನಸೌಧದಲ್ಲಿ ಇರುವವರೆಗೆ ಪ್ರಶ್ನೆಕೂಡ ಮಾಡಲಿಲ್ಲ. ಸುಮಾರು 45ನಿಮಿಷದಿಂದ 1ಗಂಟೆವರೆಗೂ ಅಲ್ಲೆ ಇದ್ದೆ.
ಯಾವಾಗ ನಾ ಕಚೇರಿಗೆ ಬಂದೆ ಕೆಲ ಮಾಧ್ಯಮಗಳು ಕರೆಮಾಡಿ, ವಿಡಿಯೋ ಹರಡಿದ್ದು, ಈ ಕುರಿತು ಚರ್ಚೆಯಾಗುತ್ತಿರುವ ಕುರಿತು ಪ್ರಶ್ನಿಸಿದರು. ಅವರಲ್ಲಿ ನಾಲ್ಕೈದು ಜನ ಬಂದು ಬೈಟ್ ಪಡೆದರು. ಆಗಲೂ ಕೂಡ ಸ್ಪಷ್ಟವಾಗಿ ಹೇಳಿದ್ದೆ ಈ ರೀತಿ ಘೋಷಣೆ ನಾ ಕೇಳಿಲ್ಲ ಎಂದು.
ನಂತರ ಕೆಲ ಮೂಲ ವಿಡಿಯೋ ಪರಿಶೀಲನೆ ಮಾಡಿದಾಗ ಒಂದು ತಿರುಚಿದ ವಿಡಿಯೋ ಕಂಡು ಬಂದಿದ್ದು, ಏಕೆಂದರೆ ಈ ಮುಂಚೆ ಈ ರೀತಿಯ ತಿರಚಿದ ವಿಡಿಯೋದಿಂದ ಆದ ಅವಾಂತರ ಏನೆಂದು ಗೊತ್ತಿತ್ತು. ಈ ಘೋಷಣೆ ಬಿಜೆಪಿಯವರಿಗೆ ಅಚ್ಚುಮೆಚ್ಚಿನದಲ್ವಾ ಎಂದು ಲೇವಡಿ ಮಾಡಿದರು.
ಈ ಘಟನೆ ಕುರಿತು ನನ್ನ ಆಗ್ರಹ ಎರಡು ಈ ಘೋಷಣೆ ಯಾರಾದ್ರೂ ಕೂಗಿದ್ದರೆ ಅಂತವರ ಕಾನೂನಿನ ಅಡಿಯಲ್ಲಿ ಗಲ್ಲಿಗೆರಿಸಬೇಕು. ಒಂದು ವೇಳೆ ಘೋಷಣೆ ಕೂಗದೇ ಇದ್ದರೆ ಈ ವಿಡಿಯೋ ಸೃಷ್ಟಿಸಿದವರು, ವಿಡಿಯೋ ಹಂಚಿದವರು, ನಕಾರಾತ್ಮಕ ಪರಿಸ್ಥಿತಿ ಸೃಷ್ಟಿಸಿದ ಮಾಧ್ಯಮಗಳು ಸೇರಿದಂತೆ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಸದನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿ, ನಾ ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿಲ್ಲ ಎಂದು ಬೇಜವಬ್ದಾರಿಯಿಂದ ಮಾತನಾಡಿದ್ದಾರೆ. ಅವರು ನೋಡಿಲ್ಲ ಎನಿಸುತ್ತೆ, ಕರ್ನಾಟಕದ ಜವಬ್ದಾರಿಯುತ ಹಿರಿಯ ರಾಜಕಾರಣಿ ಜನರನ್ನು ಹಾಗೂ ಶಾಸಕರನ್ನು ದಾರಿತಪ್ಪಿಸುವ ಹೇಳಿಕೆ ನೀಡುವ, ನಕಾರಾತ್ಮಕ ಮಾಹಿತಿ ಹರಡುವ ಮುನ್ನ ಸೂಕ್ತ ಹೋಂ ವರ್ಕ್ ಮಾಡಿಕೊಂಡು ಮಾತನಾಡಬೇಕು ಎಂದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….