ಬೆಂಗಳೂರು, (ಫೆ.27); ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದು, ಪಕ್ಷಕ್ಕೆ ದ್ರೋಹ ಮಾಡಿದವರ ಬಗ್ಗೆ ನಾ ಮಾತನಾಡುವುದಿಲ್ಲ ಎಂದಿದ್ದಾರೆ.
ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಬಿಜೆಪಿಗೆ ತೀವ್ರ ಮುಖಭಂಗಕ್ಕೆ ಕಾರಣವಾಗಿರುವ ಎಸ್.ಟಿ.ಸೋಮಶೇಖರ್ ಕುರಿತು ವಿಧಾನಸೌದದಲ್ಲಿ ಮಾತನಾಡಿದ ಅವರು, ಅವರಿಗೆ ಅಷ್ಟು ಕಷ್ಟ ಆಗಿದ್ರೆ ಜಗದೀಶ್ ಶೆಟ್ಟರ್ ರೀತಿ ರಾಜೀನಾಮೆ ನೀಡಿ ಮತದಾನ ಮಾಡಬೇಕಿತ್ತು.
ಪಕ್ಷಕ್ಕೆ ದ್ರೋಹ ಬಗೆದವರ ಬಗ್ಗೆ ನಾ ಏನು ಮಾತನಾಡಲ್ಲ. ಕಾನೂನು ಏನಿದೆಯೋ ಅದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಶಿವಾರಾಮ್ ಹೆಬ್ಬಾರ್ ಏನ್ ನಿರ್ಣಯ ಮಾಡ್ತಾರೋ ಗೊತ್ತಿಲ್ಲ. ನಂತರ ಎರಡು ಸೇರಿ ಕಾನೂನು ತಜ್ಞರೊಂದಿಗೆ ಚರ್ಚಿಸಿ ಪಕ್ಷದ ನಿಲುವನ್ನು ತಿಳಿಸುತ್ತೇವೆ ಎಂದಿದ್ದಾರೆ.
ಕುಮಾರಸ್ವಾಮಿ ಅವರು ಹೇಳಿದಂತೆ ಕುಪ್ಪೇಂದ್ರ ರೆಡ್ಡಿಯವರ ಸ್ಪರ್ಧೆಗೆ ನಿಲ್ಲಿಸಿ ಪ್ರಯತ್ನ ಮಾಡಲಾಯಿತು. ಆದರೆ ಅದು ವಿಫಲವಾಗಿದೆ. ಇದರಲ್ಲಿ ಮುಜುಗರ ಏನಿಲ್ಲ. ಒಬ್ಬರು ಗೆದ್ದಿದ್ದಾರೆನ ಒಬ್ಬರು ಸೋತಿದ್ದಾರೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….