ಚಾರಿತ್ರಿಕ ಉದ್ಯೋಗ ಮೇಳ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ: 580 ಉದ್ಯಮಿಗಳು/ಕಂಪನಿಗಳು ಹಾಗೂ ಒಂದು ಲಕ್ಷದಷ್ಟು ವಿದ್ಯಾರ್ಥಿಗಳು ಮೇಳದಲ್ಲಿ ಭಾಗಿ

ಬೆಂಗಳೂರು, (ಫೆ 27): ನಿರುದ್ಯೋಗಿ ಯುವಕರಿಗೆ ಯುವ ನಿಧಿ ಕೊಡುವ ಜತೆಗೆ ಇವರಿಗೆ ಉದ್ಯೋಗ ಸೃಷ್ಟಿಸುವ ಮತ್ತು ಉದ್ಯೋಗ ಮಾಡಲು ಅಗತ್ಯವಾದ ತರಬೇತಿಗಳನ್ನೂ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು. 

ಅರಮನೆ ಮೈದಾನದಲ್ಲಿ ನಡೆದ ಬೃಹತ್ ಯುವ ಸಮೃದ್ಧಿ ಸಮ್ಮೇಳನ ಮತ್ತು ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. 

ನಿರುದ್ಯೋಗ ದೇಶದ ಪ್ರಮುಖ ಸಮಸ್ಯೆಯಾಗಿದೆ. ಕಳೆದ 10 ವರಗಷಗಳಲ್ಲಿ ನಿರುದ್ಯೋಗ ಪ್ರಮಾಣ ಬೃಹತ್ತಾಗಿ ಬೆಳೆದಿದೆ. 2014 ರಲ್ಲಿ ಪ್ರಧಾನಿ ಮೋದಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೀನಿ ಎಂದು ಭರವಸೆ ನೀಡಿ ಯುವ ಸಮೂಹದ ಮತ ಗಳಿಸಿದರು. ಈ 10 ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಸಬೇಕಿದ್ದ ಮೋದಿಯವರು, ಇರುವ ಯದ್ಯೋಗಗಳನ್ನೂ ಕಸಿದುಕೊಂಡಿದ್ದಾರೆ. ಹೀಗಾಗಿ ಪ್ರತೀ ವರ್ಷ ನಿರುದ್ಯೋಗ ಪ್ರಮಾಣ ಬೃಹತ್ತಾಗಿ ಬೆಳೆಯುತ್ತಾ 8.40 ಶೇ ಏರಿಕೆಯಾಗಿದೆ ಎಂದು ಅಂಕಿ ಅಂಶಗಳ‌ ಸಮೇತ ವಿವರಿಸಿದರು. 

ನಾವು ಯುವ ನಿಧಿಯನ್ನೂ ಕೊಡ್ತೀವಿ. ಉದ್ಯೋಗವನ್ನೂ ಸೃಷ್ಟಿಸುತ್ತೇವೆ, ಉದ್ಯೋಗಕ್ಕೆ ಬೇಕಾದ ಕೌಶಲ್ಯ ತರಬೇತಿಯನ್ನೂ ನೀಡುತ್ತೇವೆ. ಇದು ನಮ್ಮ ಸರ್ಕಾರ ವಿದ್ಯಾರ್ಥಿ ಯುವಜನರಿಗೆ ಮಾಡುವ ಅಭಯ ಎಂದು ಭರವಸೆ ನೀಡಿದರು. 

ಹೊಸ ಹೊಸ ಉದ್ಯೋಗ ಸೃಷ್ಟಿ ಮತ್ತು ತರಬೇತಿಗಾಗಿ ಈಗಿರುವ GTDC ಗಳ ಜತೆಗೆ ಹೊಸದಾಗಿ ಇನ್ನಷ್ಟು GTDC ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಮಹತ್ವದ ಘೋಷಣೆ ಮಾಡಿದರು. 

ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ್ ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೌಶಲ್ಯ ಅಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳು, ನೂರಾರು ಉದ್ಯಮಿಗಳು, ಸುಮಾರು 80 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಮಹಿಳೆಯರೇ.. ನಿಮ್ಮ ಗ್ಯಾರಂಟಿ ಯೋಜನೆಗಳನ್ನು ಸಹಿಸದೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಕೆ ಶಿವಕುಮಾರ್

ಮಹಿಳೆಯರೇ.. ನಿಮ್ಮ ಗ್ಯಾರಂಟಿ ಯೋಜನೆಗಳನ್ನು ಸಹಿಸದೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಕೆ ಶಿವಕುಮಾರ್

ಸಿಮೆಂಟ್, ಕಬ್ಬಿಣ, ವೆಹಿಕಲ್, ಮೊಬೈಲ್, ಟಿವಿ, ಪ್ರಿಡ್ಜ್ ಬೆಲೆ ಹೆಚ್ಚಾಗಿದೆ. ಇದೆಲ್ಲಾ ಬಿಜೆಪಿಯವರಿಗೆ‌ ಕಾಣಿಸ್ತಿಲ್ವಾ. ಏನ್ರಿ ಅಶೋಕ್ ,ವಿಜಯೇಂದ್ರ? DK Shivakumar

[ccc_my_favorite_select_button post_id="105164"]
2ನೇ ಏರ್ಪೋರ್ಟ್: ಎಎಐ ವರದಿ ಬಳಿಕ ಪರಿಣತ ಸಂಸ್ಥೆಗಳಿಂದ ಅಧ್ಯಯನ – ಎಂ ಬಿ ಪಾಟೀಲ

2ನೇ ಏರ್ಪೋರ್ಟ್: ಎಎಐ ವರದಿ ಬಳಿಕ ಪರಿಣತ ಸಂಸ್ಥೆಗಳಿಂದ ಅಧ್ಯಯನ – ಎಂ

ಈಗ ದೇವನಹಳ್ಳಿ ಬಳಿ ವಿಮಾನ‌ ನಿಲ್ದಾಣವಿದೆ. 2033ರವರೆಗೂ ಇಲ್ಲಿಂದ 150 ಕಿ.ಮೀ. ಅಂತರದಲ್ಲಿ ಇನ್ನೊಂದು ಏರ್ಪೋರ್ಟ್ ಮಾಡಬಾರದು ಎನ್ನುವ ಷರತ್ತಿದೆ.MB Patila

[ccc_my_favorite_select_button post_id="105159"]
ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ

[ccc_my_favorite_select_button post_id="105011"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ನೌಕರರ ಕ್ಷೇಮಾಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಬಹಳ ಮುಖ್ಯ, ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. Sports Meet

[ccc_my_favorite_select_button post_id="104998"]
ಸಾಲ ಬಾಧೆ: ತೊಂಡೇಬಾವಿಯಲ್ಲಿ ಯುವ ರೈತ ಆತ್ಮಹತ್ಯೆ

ಸಾಲ ಬಾಧೆ: ತೊಂಡೇಬಾವಿಯಲ್ಲಿ ಯುವ ರೈತ ಆತ್ಮಹತ್ಯೆ

ಪವನ್ ತನ್ನ ತಂದೆಯ ಜೊತೆಯಲ್ಲಿ ಕೃಷಿಯಲ್ಲಿ ತೊಡಗಿದ್ದ, ಕಳೆದ ಮೂರು ವರ್ಷದಿಂದ ಸರಿಯಾಗಿ ಬೆಳೆ ಬಾರದೇ ಪವನ್ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದರು. Suicide

[ccc_my_favorite_select_button post_id="105172"]
ಕಾರು ಅಪಘಾತ: ನಾಲ್ವರ ದುರ್ಮರಣ..!

ಕಾರು ಅಪಘಾತ: ನಾಲ್ವರ ದುರ್ಮರಣ..!

ನೆಲಮಂಗಲ: ರಸ್ತೆಯ ಡಿವೈಡರ್‌ಗೆ ಕಾರು ಡಿಕ್ಕಿ (Accident) ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟ ಘಟನೆ ದಾಬಸ್‌ ಪೇಟೆಯ ಅಂಚೆಮನೆ ಕ್ರಾಸ್ ಬಳಿ ಸಂಭವಿಸಿದೆ. ಮೃತರನ್ನು ಗೋಪಾಲ್ (60 ವರ್ಷ), ದೀಪಿಕಾ (35 ವರ್ಷ),

[ccc_my_favorite_select_button post_id="105162"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!