ಪಾಟ್ನಾ, (ಫೆ.12): ಮೋದಿ ಕಿ ಗ್ಯಾರಂಟಿ ಸ್ಟ್ರಾಂಗ್ ಅಲ್ವಾ.. ಹೌದು ತಾನೆ..? ಮತ್ತೆ ಕೊಡಿ ನಿತೀಶ್ ಕುಮಾರ್ ಮತ್ತೊಮ್ಮೆ ಯು-ಟರ್ನ್ ಹೊಡೆಯಲ್ಲವೆಂದು ಮೋದಿ ಕಿ ಗ್ಯಾರಂಟಿ. ಕೂಡಿ ಮತ್ತೆ.. ಮೋದಿ ಕಿ ಗ್ಯಾರಂಟಿ ಯು-ಟರ್ನ್ ಹೊಡೆಯಲ್ಲವೆಂದು ಎಂದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರು, ಬಿಹಾರ ವಿಧಾನಸಭೆಯಲ್ಲಿ ಇಂದು ವಿಶ್ವಾಸಮತ ಗೆದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕುರಿತು ಲೇವಡಿ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಇಂದು ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಗೂ ಮುನ್ನ ತೇಜಸ್ವಿ ಯಾದವ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಬುದ್ಧ ಮಾತುಗಳೆಂದು ನೆಟ್ಟಿಗರು, ವಿರೋಧ ಪಕ್ಷಗಳು ಪ್ರಶಂಸೆ ವ್ಯಕ್ತಪಡಿಸಿವೆ.
ನಿತೀಶ್ ಕುಮಾರ್ ನಿರ್ಣಯದ ಕುರಿತು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ತೇಜಸ್ವಿ ಯಾದವ್, ನಿತೀಶ್ ಕುಮಾರ್ ಅವರನ್ನು ನಾನು ಯಾವಾಗಲೂ ‘ದಶರಥ್’ ಮತ್ತು ತಂದೆ ಸಮಾನ ಎಂದು ಪರಿಗಣಿಸಿದ್ದೇನೆ. ಆದರೆ ಮಹಾಘಟಬಂಧನ್ ಕೈಬಿಟ್ಟು ಎನ್‌ಡಿಎಗೆ ಮರಳಲು ಅವರನ್ನು ಒತ್ತಾಯಿಸಿದ್ದು ಯಾರು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈ ಮುಂಚೆ ಎನ್‌ಡಿಎ ಬಿಟ್ಟು ಬಂದಾಗ ನಮ್ಮ ಪಕ್ಷವನ್ನು ಒಡೆಯುತ್ತಿದ್ದಾರೆ ಎಂದು ಎನ್‌ಡಿಎ ಮೇಲೆ ಆರೋಪ ಮಾಡುದ್ರಿ..ಅವಾಗ್ ನೀವ್ ಹೇಳಿದ್ರಿ, ಸತ್ತೋಗ್ತಿನಿ, ಮಣ್ಣಾಗ್ತಿನಿ.. ಇದ್ ಬಿಡಿ ಯಾವಾಗ್ಲೂ ಹೇಳ್ತಾನೆ ಇರ್ತೀರಾ..ಅದರ ಬಗ್ಗೆ ನಾ ಮಾತಾಡಲ್ಲ. ಆದರೆ ನೀವ್ ಹೇಳಿದ್ರಿ ನಮ್ಮ ಗುರಿ ಒಂದೇ ನನಗೆ ಪ್ರಧಾನಿ ಸ್ಥಾನ ಬೇಡ, ಮುಖ್ಯಮಂತ್ರಿ ಸ್ಥಾನ ಬೇಡ.. ಆದರೆ ದೇಶದಲ್ಲಿರುವ ವಿರೋಧ ಪಕ್ಷಗಳ ಬಾಗಿಲು ಬಂದ್ ಮಾಡಿರುವ ಸರ್ವಾಧಿಕಾರಿಯ ಮತ್ತೆ ಅಧಿಕಾರಕ್ಕೆ ಬರಲು ಬಿಡುವುದು ಬೇಡ ಅಂತ ಅಲ್ವಾ ನೀವ್ ಬಂದಿದ್ದು.
ಕಳೆದ ಐದು ವರ್ಷಗಳ ಅವಧಿಯಲ್ಲಿ ಮೂರನೇ ಬಾರಿಗೆ ನಿತೀಶ್ ಕುಮಾರ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, “ನಾನು ಈ ಹೊಸ ಸರ್ಕಾರದ ವಿರುದ್ಧ ನಿಂತಿದ್ದೇನೆ. ಒಂಬತ್ತು ಬಾರಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಕ್ಕಾಗಿ ಸಿಎಂ ನಿತೀಶ್ ಕುಮಾರ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದರು.
ಜೆಡಿಯು ಶಾಸಕರ ಬಗ್ಗೆ ನನಗೆ ಬೇಸರವಾಗಿದೆ. ಏಕೆಂದರೆ ಅವರು ಸಾರ್ವಜನಿಕರ ನಡುವೆ ಹೋಗಿ ಉತ್ತರಿಸಬೇಕಾಗುತ್ತದೆ. ಯಾರಾದರೂ ನಿತೀಶ್ ಕುಮಾರ್ ಮೂರು ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದು ಏಕೆ ಎಂದು ಕೇಳಿದರೆ ನೀವು ಏನು ಹೇಳುತ್ತೀರಿ? ನೀವು ಮೊದಲು ಬಿಜೆಪಿಯವರನ್ನು ಟೀಕಿಸಿದ್ದೀರಿ ಮತ್ತು ಈಗ ಅವರನ್ನು ಹೊಗಳುತ್ತಿದ್ದೀರಿ. ನೀವು ಜನರಿಗೆ ಏನು ಹೇಳುತ್ತೀರಿ?, ನಾವು ಉದ್ಯೋಗಗಳನ್ನು ನೀಡಿದ್ದೇವೆ ಎಂದು ಹೇಳುತ್ತೇವೆ ಎಂದರು.
ನಿತೀಶ್ ಅವರನ್ನು ತಮ್ಮ ಕುಟುಂಬದ ಸದಸ್ಯ ಎಂದು ಭಾವಿಸಿರುವುದಾಗಿ ಹೇಳಿ, ನಾವು ಸಮಾಜವಾದಿ ಕುಟುಂಬದಿಂದ ಬಂದವರು… ಕೆಲವು ದಿನಗಳ ಹಿಂದಷ್ಟೇ ದೇಶದಲ್ಲಿ ಮೋದಿಯನ್ನು ತಡೆಯಲು ನೀವು ಧ್ವಜ ಹಿಡಿದಿದ್ದೀರಿ; ಈಗ ನಿಮ್ಮ ಸೋದರಳಿಯ ಬಿಹಾರದಲ್ಲಿ ಮೋದಿಯನ್ನು ತಡೆಯುವ ಧ್ವಜ ಹಿಡಿಯುತ್ತಾರೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….