ಬೆಂಗಳೂರು, (ಫೆ.12); ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳು ಕಳೆದಿದ್ದು, ಅವರ ಅಭಿಮಾನಿಗಳು ‘ಬೆಳ್ಳಿ ಪರ್ವ’ ಆಚರಣೆಗೆ ಮುಂದಾಗಿದ್ದಾರೆ. ಮಂಡ್ಯ ಜಿಲ್ಲೆಯ ಶ್ರಿರಂಗಪಟ್ಟಣದಲ್ಲಿ ಫೆ.17 ರಂದು ಸಮಾರಂಭ ಅದ್ದೂರಿಯಾಗಿ ನಡೆಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ.
ಹಿರಿಯ ನಟ ದಿ.ತೂಗೂದೀಪ ಶ್ರೀನಿವಾಸ್ ಅವರ ಮಗನಾದರೂ.. ಲೈಟ್ ಬಾಯ್ ಆಗಿ ಸಿನಿಮಾ ರಂಗಕ್ಕೆ ಬಂದ ದರ್ಶನ್ 1997ರಲ್ಲಿ ಮಹಾಭಾರತ ಚಿತ್ರದಲ್ಲಿ ನಟಿಸಿದರು. 2000ನೇ ಇಸವಿಯಲ್ಲಿ ನಟ ದರ್ಶನ್ ಅವರು ಶಿವರಾಜ್ಕುಮಾರ್, ಅಂಬರೀಷ್ ನಟನೆಯ ‘ದೇವರ ಮಗ’ ಸಿನಿಮಾದಲ್ಲಿ ನಟಿಸಿದರು.ದರ್ಶನ್ ಹೆಸರಿನ ಪಾತ್ರದಲ್ಲಿಯೇ ಕಾಣಿಸಿಕೊಂಡರು ಚಾಲೆಂಜಿಂಗ್ ಸ್ಟಾರ್.
ನಂತರ ವಲ್ಲರಸು ಚಿತ್ರದಲ್ಲಿ ಅವರು ನಟಿಸಿದರು. ಇದು ತಮಿಳು ಸಿನಿಮಾ. ನಂತರ ಕೆಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದರು. ಮೆಜೆಸ್ಟಿಕ್ ಚಿತ್ರದಲ್ಲಿ ದರ್ಶನ್ ಹೀರೋ ಆಗಿ ಮಿಂಚಿದರು. ಅಲ್ಲಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ.
ದರ್ಶನ್ ಅವರ ಇತ್ತೀಚೆಗೆ ಬಿಡುಗಡೆಯಾದ ಕಾಟೇರ ಚಿತ್ರ ಬ್ಲಾಕ್ ಬಾಸ್ಟರ್ ಹಿಟ್ ಆಗಿದ್ದು, ಮೆಚ್ಚುಗೆ ಪಡೆದಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇತ್ತೀಚೆಗೆ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….