ಬೆಂಗಳೂರು, (ಫೆ.12): ಗ್ಯಾರಂಟಿ ಪದವನ್ನೇ ಪ್ರಧಾನಿ ನರೇಂದ್ರ ಮೋದಿ ಕದ್ದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಕುರಿತು ಕೇಂದ್ರ ಸರ್ಕಾರ ಮತ್ತು ಬಿಜೆಪಿಯನ್ನು ಲೇವಡಿ ಮಾಡಿದ್ದಾರೆ.
ವಿಧಾನಸೌದದಲ್ಲಿ ರಾಜ್ಯಪಾಲರ ಭಾಷಣ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಕರ್ನಾಟಕ ಸರ್ಕಾರದ ಆಡಳಿತ ಮಾದರಿಯಾಗಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಯನ್ನೇ ತೆಗೆದುಕೊಂಡು ಅವರು ಮೋದಿ ಗ್ಯಾರಂಟಿ ಎಂದು ಶುರು ಮಾಡಿಕೊಂಡಿದ್ದಾರೆ ಎಂದು ಕಿಚಾಯಿಸಿದರು.
ಕೊಟ್ಟ ಭರವಸೆ ಈಡೇರಿಸುವ ಮೂಲಕ ನುಡಿದಂತೆ ನಡೆಯುತ್ತಿದ್ದೇವೆ. ಇದನ್ನು ಅವರ ಕಡೆಯಿಂದ ಸಹಿಸಲು ಆಗುತ್ತಿಲ್ಲ. ಇಷ್ಟು ಯೋಜನೆಗಳನ್ನು ದೇಶದಲ್ಲಿ ಅನುಷ್ಠಾನಕ್ಕೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಬಸವಣ ಎಂ ನುಡಿದಂತೆ ನಡೆಯಬೇಕು ಎಂದು ಹೇಳಿದರಲ್ವಾ..ಅದನ್ನು ನಾವು ಪಾಲನೆ ಮಾಡ್ತಾ ಇದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.
ಕೇಸರಿ ಶಾಲು ಹಾಕಿಕೊಂಡು ಸದಸ್ಯರು ಸದನಕ್ಕೆ ಆಗಮಿಸಿದ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಕೇಸರಿನಾದ್ರೂ ಹಾಕಿಕ್ಕೊಳಲಿ, ಕೇಸರಿ ಯಾರ ಆಸ್ತಿಯೂ ಅಲ್ಲ. ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಕೇಸರಿ ಯಾರ ಮನೆಯ ಆಸ್ತಿಯೂ ಅಲ್ಲ. ಯಾರು ಬೇಕಿದ್ದರೂ ಹಾಕಿಕೊಳ್ಳಬಹುದು. ಬೇಡ ಅಂದವರು ಯಾರು? ಕೇಸರಿನಾದ್ರೂ ಹಾಕಿಕ್ಕೊಳಲಿ, ಕಪ್ಪಾದ್ರೂ ಹಾಕಿಕೊಳ್ಳಲಿ ನಾವು ನಮ್ಮ ರಾಜ್ಯದ ಹಿತಕ್ಕಾಗಿ ಕೆಲಸ ಮಾಡ್ತೇವೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….