ಇದು ಬುದ್ಧನ ಜಾತಕ ಕಥೆಗಳಲ್ಲಿ ಬರುತ್ತದೆ. ಬುದ್ಧನ ಜಾತಕ ಕಥೆಗಳು ಅಂದರೆ ಜ್ಞಾನವನ್ನು ಪಡೆದು ‘ಬುದ್ಧ ಮಹಾಜ್ಞಾನಿಯಾಗಿ ಬೋಧಿ’ ಆಗಿದ್ದು ಬುದ್ಧ ಬೋಧಿಯಾಗಲು ಒಂದು ಜನ್ಮ ದ ಪುಣ್ಯ ತಪಸ್ಸು ಸಾಕಾಗುವುದಿಲ್ಲ. ಹಲವಾರು ಜನ್ಮಗಳ ನಿರಂತರ ಪ್ರಯತ್ನ ಮತ್ತು ಆಧ್ಯಾತ್ಮ ಸಾಧನೆಗಳ ಮೂಲಕ ಬುದ್ಧ ಭೋದಿಯಾಗಿ ಕೋಟಿ ಸೂರ್ಯರ ತೇಜಸ್ಸಿನ ಜ್ಞಾನ ಪಡೆದನು.
ಇಂಥ ಸಾಧನೆಯನ್ನು ಹಿಂದಿನ ಹಲವಾರು ಜನುಮಗಳಲ್ಲಿ ಜ್ಞಾನವನ್ನು ಸಂಪಾದಿಸಲು ನಿರಂತರ ಪ್ರಯತ್ನ ಮಾಡುತ್ತಲೇ ಬಂದು ಕೊನೆಗೆ ಜ್ಞಾನ ಪಡೆದು ಜಗತ್ತಿಗೆ ತೋರಿಸಿ ಗೌತಮ ಬುದ್ಧ ‘ಬೋಧಿಸತ್ವ’ನಾದನು. ಬುದ್ಧನ ಹಿಂದಿನ ಜನ್ಮದ ಕಥೆಗಳೇ ‘ಬುದ್ಧನ ಜಾತಕ’ ಕಥೆಗಳು ‘ಬೋಧಿ ಸತ್ವನ’ ಕಥೆಗಳು ಎಂದು ಕರೆಯಲ್ಪಟ್ಟಿತು.
ಬಹಳ ಹಿಂದೆ ಕಾಶಿರಾಜ್ಯವನ್ನು ಒಬ್ಬ ರಾಜ ಆಳುತ್ತಿದ್ದ. ರಾಜನಿಗೆ ಬೇಟೆ ಆಡುವುದರಲ್ಲಿ ತುಂಬಾ ಆಸಕ್ತಿ. ಸಮಯ ಸಿಕ್ಕಾಗಲೆಲ್ಲ ತನ್ನ ಪರಿವಾರದ ಜೊತೆ ಬೇಟೆಯಾಡಲು ಕಾಡಿಗೆ ಹೋಗುತ್ತಿದ್ದ. ಒಮ್ಮೆ ಬೇಟೆಗೆ ಹೋದನು. ಜೊತೆಗಾರರು ಬೇಟೆ ಎಲ್ಲಿ ಸಿಗುತ್ತವೆ ಎಂಬ ಮಾಹಿತಿ ಕೊಡುತ್ತಾರೆ. ಈ ಸಲ ಅವರು ಜಿಂಕೆ ತಾಣದ ಒಂದು ಜಾಗವನ್ನು ರಾಜನಿಗೆ ತಿಳಿಸಿದರು.
ಆ ಜಾಗವನ್ನೇ ಅರಸುತ್ತ ಹೋದನು. ಸೇವಕರು ಜಿಂಕೆಗಳು ಹೊರಗೆ ಬರಲೆಂದು ತಮಟೆ, ಡೋಲು ಬಾರಿಸಿ ಗಲಾಟೆ ಮಾಡಿದರು. ಅವಿತಿದ್ದ ಜಿಂಕೆಗಳು ಈಚೆಗೆ ಬಂದು ಗುಂಪಾಗಿ ಓಡತೊಡಗಿದವು. ಅದರಲ್ಲಿ ಒಂದು ಜಿಂಕೆ ಆಕಸ್ಮಿಕವಾಗಿ ತಪ್ಪಿ ರಾಜನಿದ್ದ ಕಡೆಗೆ ಬರುತ್ತಿತ್ತು. ರಾಜನು ಗುರಿ ಇಟ್ಟು ಜಿಂಕೆ ಮೇಲೆ ಬಾಣ ಪ್ರಯೋಗಿಸಿದ. ಅದು ಜಾಣ ಜಿಂಕೆ ಸತ್ತಂತೆ ನಟಿಸುತ್ತಾ ಮಲಗಿತು.
ರಾಜ ಅದನ್ನು ಹಿಡಿಯಲು ಬಂದಾಗ ಚಂಗನೆ ಹಾರಿ ಓಡಿಹೋಯಿತು. ಬೇಟೆ ತಪ್ಪಿದರೆ ರಾಜ ಸಿಟ್ಟಾಗುತ್ತನೆಂದು ಪರಿವಾರ ಹೆದರಿ ನಡುಗಿತು. ನಿಜಕ್ಕೂ ರಾಜಗೆ ಸಿಟ್ಟು ಬಂದಿತು. ಕೋಪದಿಂದ ಕುದುರೆಯ ವೇಗ ಹೆಚ್ಚಿಸಿ ಜಿಂಕೆಯನ್ನು ಹಿಂಬಾಲಿಸಿದ. ಏಟು ತಿಂದಿದ್ದ ಜಿಂಕೆಯು ಓಡಿ ಸುಸ್ತಾಗಿ ಒಂದೆಡೆ ನಿಂತಿತು.
ರಾಜ ಗುರಿಯಿಟ್ಟು ಬಾಣ ಹೊಡೆದ ಜಿಂಕೆ ಸತ್ತಿತು.ಅವನ ಪರಿವಾರ ಬಹಳ ಹಿಂದೆ ಉಳಿದಿತ್ತು. ರಾಜನಿಗೆ ಬೇಟೆ ಸಿಕ್ಕಿತೆಂದು ಖುಷಿಯಾಯಿತು. ಅವನೇ ಮರದ ಕೋಲಿಗೆ ಜಿಂಕೆಯನ್ನು ಕಟ್ಟಿ ಭುಜದ ಮೇಲೆ ಹಾಕಿ ಹೊರಟನು. ಒಂದಷ್ಟು ದೂರ ಹೋದಾಗ ಅವನಿಗೂ ಆಯಾಸ ವಾಯಿತು ಅಲ್ಲಿದ್ದ ದೊಡ್ಡ ಆಲದ ಮರದ ಕೆಳಗೆ ಜಿಂಕೆಯನ್ನು ಇಟ್ಟು, ನೆರಳಲ್ಲಿ ಮಲಗಿ ನಿದ್ದೆ ಹೋದನು.
ಕುಬೇರನ ಅಧೀನದಲ್ಲಿದ್ದ ಒಬ್ಬ ಯಕ್ಷ ಆ ಆಲದ ಮರದಲ್ಲಿದ್ದ. ಕುಬೇರ ಯಕ್ಷನಿಗೆ ಹೇಳಿದ್ದ. ಈ ಮರದ ನೆರಳಲ್ಲಿ ಯಾರೇ ಬಂದರೂ ನೀನು ಆಹಾರ ವಾಗಿ ಸೇವಿಸಬಹುದು ಎಂದು. ರಾಜ ನಿದ್ದೆ ಮುಗಿಸಿ ಎದ್ದು ಹೊರಡಲು ತಯಾರಾದ ಆ ಸಮಯಕ್ಕೆ ಅವನ ಕೈಯನ್ನು ಬಲವಾಗಿ ಯಾರೊ ಹಿಡಿದು ಕೊಂಡಂತೆ ಅನಿಸಿತು ಯಾರು ಎಂದು ನೋಡಿದರೆ ರಾಕ್ಷಸಾಕಾರದ ನೆರಳಿ ನಂತಿರುವ ಒಂದು ಆಕೃತಿ ಕಂಡು ಭಯಗೊಂಡನು. ಆದರೂ ಧೈರ್ಯ ದಿಂದ ನೀನು ಯಾರು ಎಂದು ಕೇಳಿದ. ನಾನೊಬ್ಬ ಯಕ್ಷ ಕುಬೇರನ ಅಧೀನದಲ್ಲಿ ರುವೆ ಈ ಮರದ ನೆರಳಿನಲ್ಲಿ ಯಾರೇ ಬಂದರೂ ನಾನು ಅವರನ್ನು ತಿನ್ನ ಬಹುದು ಈಗ ನನಗೆ ಹಸಿವಾಗಿದೆ ನಿನ್ನನ್ನೇ ತಿನ್ನುವೆ ಎಂದು ರಾಜನಿಗೆ ಹೇಳಿತು.
ರಾಜ ಯೋಚಿಸಿ ನಾಳೆ ದಿನ ನಿನಗೆ ಆಹಾರ ಸಿಕ್ಕರೆ ತಿನ್ನುವೆಯಾ? ಎಂದು ಕೇಳಿದ. ಸಿಕ್ಕರೆ ತಿಂದು ತೇಗುತ್ತೇನೆ ಎಂದಿತು. ಹಾಗಾದರೆ ಇಂದು ಜಿಂಕೆಯನ್ನು ಆಹಾರವಾಗಿ ಸೇವಿಸು ನಾಳೆಯಿಂದ ನಿನಗೆ ಆಹಾರ ಕಳಿಸುತ್ತೇನೆ ಎಂದು ವಚನ ಕೊಟ್ಟನು. ಯಕ್ಷ ಹೇಳಿತು ನೀನು ಮಾತಿಗೆ ತಪ್ಪಿದರೆ ನಿನ್ನನ್ನೇ ತಿನ್ನು ತ್ತೇನೆ. ರಾಜ ಹೇಳಿದ ನಾನು ಕಾಶಿರಾಜ ಮಾತಿಗೆ ತಪ್ಪುವನಲ್ಲ ಮಾತಿಗೆ ತಪ್ಪಿ ದರೆ ನನ್ನನ್ನೇ ಆಹಾರವಾಗಿ ಕೊಡುತ್ತೇನೆ ಎಂದನು.
ರಾಜನು ಅರಮನೆಗೆ ಬಂದು ಸಭೆ ಕರೆದು ಯಕ್ಷನ ಕುರಿತು ಹೇಳಿ ನಿತ್ಯವೂ ಒಬ್ಬ ಮನುಷ್ಯನನ್ನು ಆಹಾರ ಕಳಿಸಬೇಕು ಏನು ಮಾಡಲಿ ಎಂದಾಗ, ಸೆರೆಮನೆಯಲ್ಲಿರುವ ಮನುಷ್ಯನನ್ನು ಕಳುಹಿಸೋಣ ಎಂದು ಮಂತ್ರಿ ಹೇಳಿದ ಮಾತಿಗೆ ರಾಜನು ಒಪ್ಪಿದನು. ಅದೇ ರೀತಿ ಸೆರೆಮನೆಯಲ್ಲಿರುವ ಒಬ್ಬೊಬ್ಬ ಮನುಷ್ಯನನ್ನು ಅವರಿಗೆ ಹೇಳದಂತೆ ಆಹಾರ ಕೊಟ್ಟು ಯಕ್ಷನ ಹತ್ತಿರ ಕಳಿಸುತ್ತಿದ್ದರು. ಯಕ್ಷ ಮನುಷ್ಯನ ಸಮೇತ ಆಹಾರ ತಿನ್ನುತ್ತಿದ್ದ. ಖೈದಿಗಳೆಲ್ಲ ಖಾಲಿಯಾದರು. ಯಕ್ಷ ತನ್ನನ್ನೇ ತಿನ್ನುತ್ತಾನೆ ಎಂದು ರಾಜನಿಗೆ ಹೆದರಿಕೆಯಾಯಿತು, ಮನುಷ್ಯನನ್ನು
ಎಲ್ಲಿಂದ ತಂದು ಕಳಿಸುವುದು ಎಂದು ಚಿಂತಿಸಿದಾಗ ಮಂತ್ರಿಯು ಸಲಹೆ ಕೊಟ್ಟ ನಮ್ಮಲ್ಲಿ ಸಂಪತ್ತು ಇದೆ. ಬಡವರು ಸಿಗುತ್ತಾರೆ ತಂದೆ-ತಾಯಿಯೇ ಮಕ್ಕಳನ್ನು ಕೊಡುತ್ತಾರೆ ಎಂದನು ಅದರಂತೆ ಸಾವಿರ ಚಿನ್ನದ ವರಹಗಳನ್ನು ಇಟ್ಟುಕೊಂಡು ಯಾರು ಯಕ್ಷನಿಗೆ ಆಹಾರವಾಗುತ್ತಿರಿ ಅವರಿಗೆ ಲಕ್ಷ ವರಹ ಎಂದು ಸಾರಿದರು. ಆ ಹಳ್ಳಿಯಲ್ಲಿ ಒಬ್ಬ ಯುವಕ ತನ್ನ ತಾಯಿಯೊಡನೆ ವಾಸವಾಗಿದ್ದ ತಂದೆಯಂತೆ ಕೂಲಿ ಮಾಡುತ್ತಿದ್ದ.
ಅವನಿಗೆ ತಾಯಿಯನ್ನು ಸುಖವಾಗಿ ಇರುವಂತೆ ಮಾಡಬೇಕು ಎಂಬ ಆಸೆ. ಆದರೆ ಬಡತನ. ಆ ಹುಡುಗ ಯೋಚಿಸಿ ಅಮ್ಮನಿಗೆ ಲಕ್ಷ ವರಹ ಸಿಗುತ್ತದೆ ನಾನು ಯಕ್ಷನಿಗೆ ಆಹಾರವಾದರೂ ಅಮ್ಮಸುಖವಾಗಿರುತ್ತಾಳೆ. ಒಂದು ವೇಳೆ ನಾನು ಆಹಾರ ವಾಗದಿದ್ದರೆ ನಾನು ಅಮ್ಮ ಸುಖವಾಗಿರಬಹುದು.ಅಮ್ಮ ಸುಖವಾಗಿರ ಬೇಕು ಎಂದರೆ. ಒಂದನ್ನು ಕೊಟ್ಟು ಇನ್ನೊಂದನ್ನು ಪಡೆಯಬೇಕು ಹೀಗೆ ಯೋಚಿಸಿ ರಾಜಭಟರಿಗೆ ಹೇಳಿದನು ಈ ಸಾವಿರ ವರಹವನ್ನು ನನ್ನ ತಾಯಿಗೆ ಕೊಡಿರಿ ಎಂದು ಮನೆ ತೋರಿಸಿದನು. ಹಾಗೂ ನನ್ನ ಕೇಳಿದರೆ, ಮಗ ಸ್ವಲ್ಪ ಹೊತ್ತಿಗೆ ಬರುತ್ತಾನೆಂದು ಹೇಳಿ ಎಂದನು. ರಾಜ ಭಟರು ಆ ಹುಡುಗನ ತಾಯಿಗೆ ಸಾವಿರ ಹೊನ್ನು ಕೊಟ್ಟರು. ತಾಯಿಗೆ ಆಶ್ಚರ್ಯವಾಯಿತು.
ಯುವಕ ರಾಜನಿದ್ದಲ್ಲಿಗೆ ಬಂದು ನಮಸ್ಕರಿಸಿದನು. ನೀನು ಯಕ್ಷನಿಗೆ ಆಹಾರವಾಗಿ ಹೋಗುವೆಯಾ ಎಂದು ರಾಜ ಕೇಳಿದನು. ಹೌದು ಎಂದಾಗ, ನಿನಗೆ ಏನು ಬೇಕು ಎಂದು ಕೇಳಿದನು. ಮಹಾರಾಜ ನನಗೆ ನಿಮ್ಮ ಚಿನ್ನದ ಪಾದರಕ್ಷೆ, ಶ್ವೇತ ಛತ್ರಿ, ಖಡ್ಗ, ನೀವು ಊಟ ಮಾಡುವ ಬಂಗಾರದ ತಟ್ಟೆ ಯಲ್ಲಿ ಭೋಜನ ಇಟ್ಟು ಕೊಡಬೇಕು. ಎಂದನು. ಇವುಗಳೆಲ್ಲ ಏಕೆ ಎಂದು ರಾಜ ಕೇಳಿದ.
ಆ ಯುವಕ ಹೇಳಿದ, ಯಕ್ಷನ ಕುರಿತು ನಾನು ಕೆಲವು ವಿಚಾರಗಳನ್ನು ಕೇಳಿರುವೆ. ಯಕ್ಷ ನೆಲದ ಮೇಲೆ ನಿಂತಿರುವವರನ್ನು ತಿನ್ನುತ್ತಾನೆ. ನಾನು ನಿಮ್ಮ ಬಂಗಾರದ ಪಾದ ರಕ್ಷೆ ಹಾಕಿ ನಿಲ್ಲುತ್ತೇನೆ. ನನ್ನನ್ನು ತಿನ್ನುವುದಿಲ್ಲ. ಎರಡನೆಯ ದು ಮರದ ನೆರಳಿನಲ್ಲಿ ನಿಂತಿರಬಾರದು ನಿಮ್ಮ ಶ್ವೇತ ಚತ್ರಿ ಹಿಡಿದುಕೊಂಡು ನಿಲ್ಲುತ್ತೇನೆ. ಮೂರನೆಯದು ಖಡ್ಗವಿದ್ದರೆ ಇವನು ಯಾರೊ ವೀರನಿರಬೇಕು
ಎಂದು ಯಕ್ಷ ಹೆದರುತ್ತಾನೆ. ಬಂಗಾರದ ತಟ್ಟೆಯಲ್ಲಿ ಭೋಜನ ಹಿಡಿದರೆ, ಈತ ಸಾಮಾನ್ಯ ಮನುಷ್ಯನಲ್ಲ ಎಂದು ಯಕ್ಷ ತಿಳಿಯುತ್ತಾನೆ. ಈ ರೀತಿ ಕೇಳಿದ್ದೇನೆ ಆದುದರಿಂದ ಇವುಗಳನ್ನು ಕೊಡಿ ಎಂದನು ರಾಜಮರು ಮಾತನಾಡದೆ ಎಲ್ಲವನ್ನು ಕೊಟ್ಟನು. ರಾಜನಿಗೆ ವಂದಿಸಿ ಅಲ್ಲಿರುವ ಎಲ್ಲಾ ಹಿರಿಯರಿಗೂ ನಮಸ್ಕರಿಸಿ ಆ ಯುವಕ ಬಂಗಾರದ ಪಾದರಕ್ಷೆ ಹಾಕಿ, ಶ್ವೇತ ಛತ್ರಿಯ ನೆರಳು ಹಾಗೂ ಕೈಯಲ್ಲಿ ಖಡ್ಗ ಹಿಡಿದು ಬಂದು ಆಲದ ಮರದ ಕೆಳಗೆ ನಿಂತನು. ಯಕ್ಷನಿಗೆ ತಿಳಿಯಿತು.
ಆಹಾರ ಬಂದಿದೆ ಎಂದು. ಯುವಕ ಕತ್ತಿಯಿಂದ ಆಹಾರದ ತಟ್ಟೆಯನ್ನು ಮರದ ಮೇಲೆ ಇಟ್ಟು. ಯಕ್ಷನಿಗೆ, ನೋಡು ರಾಜ ಊಟ ಕಳಿಸಿದ್ದಾನೆ ತಿನ್ನು ಎಂದು ಹೇಳಿದ. ಯಕ್ಷನಿಗೆ ಸಿಟ್ಟು ಬಂದಿತು ಇವನು ಯಾರೋ ದಿನಾ ಬರುವ ಮನುಷ್ಯರಂತೆ ಇಲ್ಲ ಎನಿಸಿತು. ಏಯ್ ನೀನು ನನ್ನ ಇಂದಿನ ಊಟ ಈಚೆಗೆ ಬಾ ಎಂದಿತು.
ಆ ಯುವಕ ಧೈರ್ಯದಿಂದ, ಯಕ್ಷ ನೀನು ಈ ದಿನ ನನ್ನನ್ನು ತಿಂದರೆ ನಿನಗೆ ಲಾಭವಾಗುವುದಿಲ್ಲ. ನೀನು ಬದುಕಿರುವ ತನಕ ನಿನಗೆ ಆಹಾರ ಬೇಕಾದರೆ ನನ್ನನ್ನು ಜೀವಂತವಾಗಿ ಕಳಿಸು ಎಂದನು. ಇಂದು ನೀನು ನನ್ನನ್ನು ತಿಂದರೆ ನಾಳೆಯಿಂದ ನಿನಗೆ ಯಾರು ಊಟ ತರುವುದಿಲ್ಲ. ರಾಜ ಬಲವಂತವಾಗಿ ಯಾರನ್ನಾದರೂ ಕಳಿಸಿದರೆ ಅದು ರಾಜ ಧರ್ಮಕ್ಕೆ ವಿರೋಧವಾಗುತ್ತದೆ.
ಅಲ್ಲದೆ ರಾಜನು ಪ್ರಜೆಗಳನ್ನು ಬಲಿ ತೆಗೆದುಕೊಳ್ಳುತ್ತಾನೆ ಎಂದು ಅಪವಾದ ಬಂದು ದಂಗೆ ಏಳುತ್ತಾರೆ. ನೀನು ರಾಜನನ್ನೇ ತಿಂದರೆ ಮತ್ತೊಬ್ಬರು ರಾಜ ರಾಗುತ್ತಾರೆ. ಅವರಿಂದ ನಿನಗೆ ಆಹಾರ ಸಿಗುವುದಿಲ್ಲ ಏಕೆಂದರೆ ಅವರು ನಿನಗೆ ಮಾತು ಕೊಟ್ಟಿರುವುದಿಲ್ಲ. ನೀನು ರಾಜನ ಅಂದಿನ ಪರಿಸ್ಥಿತಿಯನ್ನು ದುರುಪ ಯೋಗಪಡಿಸಿಕೊಂಡೆ, ಅಸಹಾಯಕರನ್ನು ಈ ತರಹ ಹಿಂಸಿಸುವುದು ನಿನಗೆ ಶೋಭೆ ತರುವುದಿಲ್ಲ. ಆದ್ದರಿಂದ ನನ್ನನ್ನು ವಾಪಸ್ಸು ಕಳಿಸು ನಿನಗೆ ದಿನವೂ ಭಗವಂತ ಆಹಾರ ಕೊಡುತ್ತಾನೆ ಎಂದನು.
ಯುವಕನ ಮಾತು ಕೇಳಿ ಯಕ್ಷನಿಗೆ ಜ್ಞಾನೋದಯವಾಯಿತು ಅವನು ಯುವಕನನ್ನು ವಾಪಸ್ಸು ಕಳಿಸಿದನು. ಯುವಕ ಅರಮನೆಗೆ ಬಂದು ರಾಜನಿಗೆ ಹೇಳಿದಾಗ ರಾಜನು ಬಹಳ ಸಂತೋಷಕೊಂಡು ತನ್ನ ಆಸ್ಥಾನದಲ್ಲಿ ಅವನ ಯೋಗ್ಯತೆಗೆ ತಕ್ಕಂತೆ ಹುದ್ದೆಯನ್ನು ಕೊಟ್ಟು ಇರಿಸಿಕೊಂಡನು. ಬಡತನದಲ್ಲಿ ಹುಟ್ಟಿ ಬಂದ ಯುವಕ ಇಂತಹ ಪವಾಡವನ್ನು ಮಾಡಿ ತೋರಿ ಸಿಸಾಧಿಸಿದ.
ಈ ಯುವಕನೇ ಜಾತಕ ಕಥೆಗಳಲ್ಲಿ ಬರುವ ಪೂರ್ವಜನ್ಮದ ‘ಗೌತಮಬುದ್ಧ’ ಜಗತ್ತನ್ನೇ ಬೆಳಗಿಸಿದ ಗೌತಮ ಬುದ್ಧ. ಪಂಡಿತನಾದವನು ಒಂದು ಹೆಜ್ಜೆಯನ್ನು ಮುಂದಿಡುವಾಗ, ಇನ್ನೊಂದರಲ್ಲಿ ದೃಢವಾಗಿ ನಿಲ್ಲುವನು. ಮುಂದಿನ ಸ್ಥಳವನ್ನು ಪರೀಕ್ಷಿಸದೆ ಹಿಂದಿನ ವಾಸವನ್ನು ಬಿಡುವುದಿಲ್ಲ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….