Site icon ಹರಿತಲೇಖನಿ

ಶಾಸಕ ಪ್ರದೀಪ್ ಈಶ್ವರ್ ಜನ್ಮದಿನ: ಸಿಎಂ ಆಶೀರ್ವಾದ.., ವಿಶೇಷ ಮನವಿ.!

ಚಿಕ್ಕಬಳ್ಳಾಪುರ, (ಫೆ.08); ಶಾಸಕ ಪ್ರದೀಪ್ ಈಶ್ವರ್ ಅವರು ಇಂದು ತಮ್ಮ 39ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ.

ಈ ಹಿನ್ನಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದು, ಇದೇ ವೇಳೆ ಅನಾಥ ಮಕ್ಕಳಿಗೆ ವಿಶೇಷ ಯೋಜನೆ ರೂಪಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ  ಪ್ರಭಾವಿ ರಾಜಕಾರಣಿ, ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ಅಚ್ಚರಿಯ ರೀತಿ ಪರಾಭವಗೊಳಿಸಿ ಶಾಸಕರಾಗಿ ಆಯ್ಕೆಯಾದ ಪೆರೇಸಂದ್ರದ ಪ್ರದೀಪ್‌ ಈಶ್ವರ್‌. ವಾಟ್ಸ್‌ಆಪ್‌ನಲ್ಲೋ, ಫೇಸ್‌ಬುಕ್‌ನಲ್ಲೋ, ಯೂಟ್ಯೂಬ್‌ನಲ್ಲೋ ಅವರ ಮಾತುಗಳ ವಿಡಿಯೋ ಬಂತೆಂದರೆ ಕೂಡಲೇ ಅದನ್ನೊಮ್ಮೆ ನೋಡಿ ಬಿಡೋಣ ಎಂಬ ಸಹಜ ಕುತೂಹಲ ಸೃಷ್ಟಿಸಿಬಿಟ್ಟಿದ್ದಾರೆ.

ಶಾಸಕರಾದ ಬಳಿಕ ಪ್ರದೀಪ್ ಈಶ್ವರ್ ಅವರ ಮೋಟಿವೇಶನ್ ಸ್ಪೀಚ್ ವೈರಲ್ ಆಗಿದೆ. ಇದು ವಿರೋಧ ಪಕ್ಷಗಳು, ಟ್ರೋಲ್ ಪೇಜ್ ಗಳು ಪ್ರದೀಪ್ ಈಶ್ವರ್ ಅವರನ್ನು ಬಹಳಷ್ಟು ಟ್ರೋಲ್ ಮಾಡಿದರು…ಇತ್ತೀಚೆಗೆ ಅವರೇ ಹೇಳಿದಂತೆ ಟ್ರೋಲ್ ಮಾಡಿ ಮಾಡಿ ನನ್ನ ರಾಜ್ಯದ  ಜನರಿಗೆ ಪರಿಚಯ ಮಾಡಿದ್ದೀರಿ ಧನ್ಯವಾದಗಳು ಎಂಬಂತೆ.

ಯಾವ ಮಟ್ಟಕ್ಕೆ ಪ್ರದೀಪ್ ಈಶ್ವರ್ ರಾಜ್ಯದಲ್ಲಿ ಮನೆ ಮಾತಾಗಿದ್ದಾರೆ ಎಂದರೆ, ಕ್ಷೇತ್ರದಲ್ಲಿ ಇದ್ದರೆ ಇಂತಹ ಶಾಸಕ ಇರಬೇಕು ಎಂಬ ಭಾವನೆ ಉಳಿದ ಕ್ಷೇತ್ರಗಳ ಮತದಾರರಲ್ಲೂ ಮೂಡತೊಡಗಿದೆ. ಕಾರಣ ಅವರ ನುಡಿ ಮತ್ತು ನಡೆ. ಹೌದು, ಮಾತೇ ಅವರ ಬಂಡವಾಳ. ಅದಕ್ಕೆ ಪೂರಕ ಅವರ ಧನಾತ್ಮಕ ಚಿಂತನೆ, ಮನಸ್ಥಿತಿ. ಅದು ಅವರ ಮಾತು ಮಾತಿನಲ್ಲೂ ದೃಢವಾಗುತ್ತ ಸಾಗುತ್ತದೆ.

ಅವರ ಮೇಲೆ ಅವರಿಗೇ ಇರುವಂತಹ ಆ ಅದಮ್ಯ ವಿಶ್ವಾಸ ಅದು ಒಮ್ಮೆಲೇ ಬಂದಿರುವಂಥದ್ದಲ್ಲ. ಅವರ ಮಾತುಗಳಲ್ಲೇ ಅದು ವ್ಯಕ್ತವಾಗುತ್ತದೆ. ಪಿಯುಸಿ ಓದಿ, ಪದವಿ ಪೂರ್ಣಗೊಳಿಸಲಾಗದೇ ಇದ್ದರೂ ಹೊಟ್ಟೆಪಾಡಿಗಾಗಿ ಟ್ಯೂಷನ್‌ ವೃತ್ತಿ ಆರಂಭಿಸಿದವರು. ಕಾಲಾನುಕ್ರಮದಲ್ಲಿ ಅದರಲ್ಲಿ ಯಶಸ್ವಿಯಾಗಿ, ಪರಿಶ್ರಮ ನೀಟ್‌ ಅಕಾಡೆಮಿ ಶುರುಮಾಡಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಪ್ರದೀಪ್‌.

ಇಂತಹ ಶಾಸಕ ಓದಲ್ಲಿ ಬಂದಲ್ಲಿ ನಾನು ಅನಾಥ, ನಾನು ಅನಾಥ ಎಂದುಕೊಳ್ಳುತ್ತಲೆ…ಇಂದು ತಮ್ಮ ಜನ್ಮದಿನದ ಸಂಭ್ರಮದಲ್ಲಿ ಅನಾಥ ಮಕ್ಕಳಿಗೆ ವಿಶೇಷ ಯೋಜನೆ ರೂಪಿಸಲು ಸಿಎಂಗೆ ಮನವಿ ಸಲ್ಲಿಸುವ ಮೂಲಕ ಮತ್ತೊಮ್ಮೆ ಜನರ ಮನ ಗೆದ್ದಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version