Site icon ಹರಿತಲೇಖನಿ

ವಿಷದ ಬಾಟಲ್ ನುಂಗಿದ ಹಾವಿನ ರಕ್ಷಣೆ

ಕಾರ್ಕಳ, (ಫೆ.08): ಕೋಳಿ ಹಿಡೊಯಲು ಹೋಗಿ ವಿಷದ ಬಾಟಲ್ ನುಂಗಿದ್ದ ನಾಗರಹಾವನ್ನು ರಕ್ಷಿಸಿರುವ ಘಟನೆ ಕಾರ್ಕಳ ತಾಲೂಕಿನ ನೀರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. 

ನೀರೆ ಗ್ರಾಮದ ಜಗದೀಶ್ ಎಂಬವರು ಮನೆಯ ಹಟ್ಟಿಯನ್ನು ಹೊಕ್ಕ ಹಾವು ಕೋಳಿಯೊಂದನ್ನು ಕಚ್ಚಿ ಸಾಯಿಸಿ ಅದನ್ನು ನುಂಗಲು ಯತ್ನಿಸಿದೆ. ಈ ವೇಳೆ ಕೋಳಿಯ ಕೊರಳ ಪಕ್ಕದಲ್ಲಿಯೇ ಬಿದ್ದಿದ್ದ ವಿಷದ ಬಾಟಲಿಯು ಹಾವಿನ ಬಾಯಿಗೆ ಸಿಕ್ಕಿದ್ದು, ಅದನ್ನೇ ನುಂಗಿದೆ. 

ಈ ಬಗ್ಗೆ ಜಗದೀಶ್ ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಅವರು ಹಾವನ್ನು ಹಿಡಿದು ವಿಷದ ಬಾಟಲಿಯನ್ನು ಹೊರ ತೆಗೆದು ರಕ್ಷಣೆ ಮಾಡಿದ್ದಾರೆ. 

ಹಾವು ಅವಿತಿದ್ದ ಶೌಚಾಲಯದ ನೆಲ ಒಡೆದು, ಗುರುರಾಜ್ ಹಾವನ್ನು ಹೊರಗೆ ತಂದು ಪೂರ್ತಿ ಹೊಟ್ಟೆಯೊಳಗೆ ಸೇರಿದ್ದ ವಿಷದ ಬಾಟಲಿಯನ್ನು ಬಹಳ ಜಾಗರೂಕತೆಯಿಂದ ತಳ್ಳಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಹಾವನ್ನು ನೀರೆ ಬೈಲೂರು ಸಮೀಪ ಕಾಡಿಗೆ ಬಿಡಲಾಗಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version