Site icon ಹರಿತಲೇಖನಿ

ಜಿ.ಹೊಸಹಳ್ಳಿಯಲ್ಲಿ Mr.Farmer ಕಾರ್ಯಕ್ರಮದ 100ನೇ ರೈತರ ಸಂಭ್ರಮಾಚರಣೆ.!

ದೊಡ್ಡಬಳ್ಳಾಪುರ, (ಫೆ.08); ಮಂತ್ರಾಲೀ ಸ್ವಯಂಸೇವಾ ಸಂಸ್ಥೆಯ ವತಿಯಿಂದ ರೈತಾಪಿ (ಗ್ರೂಪ್ ಎಲ್) ಎಂಬ ಸಮಾಜ ಅನ್ವೇಷಣಾ ಒಕ್ಕೂಟದಿಂದ ವಿನ್ಯಾಸಗೊಳಿಸಲಾದ CSR ಕಾರ್ಯಕ್ರಮವು ತಾಪಂ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶ್ವತ್ಥನಾರಾಯಣ ಕುಮಾರ್ ನೇತೃತ್ವದಲ್ಲಿ ತಾಲೂಕಿನ ಜಿ.ಹೊಸಹಳ್ಳಿಯಲ್ಲಿ ನಡೆಸಲಾಯಿತು.

ಶ್ರೀ ರೈತ (mr.farmer) ಕಾರ್ಯಕ್ರಮದ ಮುಖ್ಯ ಉದ್ದೇಶ ರೈತರ ಸಂಪತ್ತು ವೃದ್ಧಿ ಹಾಗೂ ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸುವಂತೆ ಮಾಡುವುದಾಗಿದ್ದು ಅದನ್ನು ಸಾಧಿಸಲು ಸ್ಮಾರ್ಟ್ ಪದ್ಧತಿಗಳ ಅಳವಡಿಕೆ ಹಾಗೂ ಸಾಧನಗಳ ಅವಶ್ಯಕತೆಯನ್ನು ಪೂರೈಸುವ ನಿಟ್ಟಿನಲ್ಲಿ ಮಂತ್ರಾಲೀ ಸ್ವಯಂಸೇವಾ ಸಂಸ್ಥೆಯ ವತಿಯಿಂದ ಸಿಎಸ್‌ಆರ್ ಬೆಂಬಲದೊಂದಿಗೆ ಕಿಟ್ ಗಳನ್ನು ರೈತರಿಗೆ ವಿತರಿಸಲಾಯಿತು.

ಇದೇ ವೇಳೆ ಕಾರ್ಯಕ್ರಮದ ನೂರನೇ ಫಲಾನುಭವಿ ರೈತ ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾರ್ಗದರ್ಶಿ ವಿಜಯ್ ಮಲ್ಯ, ತಾಪಂ ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣ ಕುಮಾರ್, ಪ್ರಗತಿಪರ ರೈತ ಶಿವಪ್ಪ, ಎಂ.ಎಸ್.ಐ.ಎಫ್ ವಾಸುರವರು, ಗೋವಿಂದ್, ಜಯಂತ್, ವಿಶಾಲ್, ವೆಂಕಟೇಶ್ ಮತ್ತು ರೋಹಿಣಿ ಗೋವಿಂದರಾಜು, ಮಲ್ಲಸಂದ್ರ ನವೀನ್, ಪ್ರಕಾಶ್ ರೆಡ್ಡಿ, ಮಂಜುನಾಥ್ ಮತ್ತಿತರರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version