ಮೇಷ ರಾಶಿ: ಇತರರ ಹಿತಾಸಕ್ತಿಗಳಂತೆ ನೀವು ಕೆಲಸ ಮಾಡಲು ಸಾಧ್ಯವಿಲ್ಲ. ವೃತ್ತಿಯಲ್ಲಿ ಕೆಲಸ ಬೇಸರಗಳು ಎದುರಾಗಬಹುದು. ಕುಗ್ಗದಿರಿ ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಿ. (ಭಕ್ತಿಯಿಂದ ಸಾಲಿಗ್ರಾಮ ಸ್ವರೂಪ ಶ್ರೀ ಮಹಾ ವಿಷ್ಣು ಪ್ರಾರ್ಥನೆ ಮಾಡಿ ಒಳಿತಾಗುವುದು.)
ವೃಷಭ ರಾಶಿ: ತಪ್ಪುಗಳನ್ನು ಒಪ್ಪಿ ಕೊಂಡುಬಿಡಿ ಶಾಂತಿಯುತ ಜೀವನ ನಿಮ್ಮದಾಗಲಿದೆ. ಹಿಂಜರಿಕೆ ಬೇಡ, ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. (ಭಕ್ತಿಯಿಂದ ಶ್ರೀ ಕಾರ್ಯಸಿದ್ಧಿ ಗಣಪತಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಮಿಥುನ ರಾಶಿ: ಉತ್ತಮ ಆರಂಭಕ್ಕಾಗಿ ಭಾವನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.ದೃಢ ನಿರ್ಧಾರಗಳ ಕೈಗೊಳ್ಳಿ. ದೀರ್ಘಾವಧಿಯ ಪಾಲುದಾರಿಕೆಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯ. (ಭಕ್ತಿಯಿಂದ ಶ್ರೀ ಸುದರ್ಶನ ಮಹಾವಿಷ್ಣು ಪ್ರಾರ್ಥನೆ ಮಾಡಿ ಒಳಿತಾಗುವುದು.)
ಕಟಕ ರಾಶಿ: ವೃತ್ತಿಪರ ವ್ಯವಹಾರ ಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಜವಾಬ್ದಾರಿಗಳ ಉತ್ತಮ ನಿರ್ವಹಣೆಯಿಂದಾಗಿ ಇತರರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. (ಭಕ್ತಿಯಿಂದ ಶ್ರೀ ಕಾರ್ಯ ಸಿದ್ಧಿ ಮಹಾಗಣಪತಿ ಪ್ರಾರ್ಥನೆ ಮಾಡಿ ಶುಭ ವಾಗುವುದು.)
ಸಿಂಹ ರಾಶಿ: ಇತರರನ್ನು ಮೆಚ್ಚಿಸುವ ನಿಮ್ಮ ಸಾಮರ್ಥ್ಯವು ಪ್ರತಿಫಲವನ್ನು ತರುತ್ತದೆ.ಸ್ಪರ್ಧೆ ಹೆಚ್ಚಾದಂತೆ ಕೆಲಸದ ವೇಳಾಪಟ್ಟಿಯು ತೀವ್ರವಾಗಿರುತ್ತದೆ. ತಾಳ್ಮೆಯಿಂದಿರಲು ಪ್ರಯತ್ನಿಸಿ. ನಿಮ್ಮ ತುಟಿಗಳಲ್ಲಿ ಕಿರುನಗೆ ಇರಲಿ. ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸಿ. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಒಳಿತಾಗುವುದು.)
ಕನ್ಯಾ ರಾಶಿ: ವೈಯಕ್ತಿಕ ಜೀವನದ ಕಡೆಗೂ ಗಮನವಿರಲಿ.ಸದಾ ಕಾಲ ವ್ಯಾಪಾರ ವಹಿವಾಟುಗಳಲ್ಲೇ ಕಾರ್ಯ ನಿರತರಾಗಿರುತ್ತೀರಿ. ಕುಟುಂಬಸ್ಥರೊಂದಿಗೂ ಕಾಲ ಕಳೆಯಲು ಪ್ರಯತ್ನ ಮಾಡಿ. (ಭಕ್ತಿಯಿಂದ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ತುಲಾ ರಾಶಿ: ಹೊಸ ವ್ಯಾಪಾರ- ವಹಿವಾಟುಗಳ ಕುರಿತು ಭಯ ಬೇಡ.ಮುಂದೆ ಹೆಜ್ಜೆ ಇಡಿ, ನಿಮ್ಮ ಸಹಾಯವನ್ನು ಅರಸಿ ಬರುವವರಿಗೆ ಕೈಲಾದಷ್ಟು ಸಹಾಯಮಾಡಿ. (ಭಕ್ತಿಯಿಂದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ವೃಶ್ಚಿಕ ರಾಶಿ: ಸ್ಥಾನಮಾನದ ಬಯಕೆ ಈಡೇರಲಿದೆ.ಆದರೆ, ಅದೃಷ್ಟದಿಂದ ಎಲ್ಲವೂ ಸಾಧ್ಯವಿಲ್ಲ.ನಿಮ್ಮ ಪರಿಶ್ರಮ ಕೂಡ ಮುಖ್ಯವಾಗುತ್ತದೆ. (ಭಕ್ತಿಯಿಂದ ಶ್ರೀ ಧನ್ವಂತರಿ ಮಹಾವಿಷ್ಣು ಪ್ರಾರ್ಥನೆ ಮಾಡಿ ಶುಭವಾಗುವುದು.)
ಧನಸ್ಸು ರಾಶಿ: ಆತ್ಮವಿಶ್ವಾಸವಿರಲಿ. ನೀವು ಕೈಹಾಕುವ ಕೆಲಸಗಳು ಕಾರ್ಯ ಸಾಧ್ಯವಾಗಲಿದೆ. ಆದರೆ, ಒತ್ತಡ ಜೀವನದಿಂದ ದೂರ ಇರಲು ಪ್ರಯತ್ನಿಸಿ. (ಭಕ್ತಿಯಿಂದ ಶ್ರೀ ಅನಂತ ಪದ್ಮನಾಭ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಮಕರ ರಾಶಿ: ಈ ದಿನ ನಿಮ್ಮ ಬಹುತೇಕ ಗಮನ ವ್ಯಾಪಾರ ಹಾಗೂ ವ್ಯವಹಾರಗಳ ಮೇಲಿರಲಿದೆ. ಉದ್ಯೋಗಗಳನ್ನು ಹುಡುಕುತ್ತಿರುವವರು ಇಂದು ಕೆಲವು ಒಳ್ಳೆಯ ಸುದ್ದಿಯನ್ನು ಪಡೆಯಬಹುದು. (ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಕುಂಭ ರಾಶಿ: ಮಕ್ಕಳ ಮೇಲೆ ಹೆಚ್ಚಿನ ಕಾಳಜಿವಹಿಸಿ.ನಿಮ್ಮನ್ನು ಹುಡುಕಿ ಬರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಸಮಯವನ್ನು ಉತ್ತಮವಾಗಿ ಬಳಕೆ ಮಾಡಿ. (ಭಕ್ತಿಯಿಂದ ಶ್ರೀ ಬದರೀನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮೀನ ರಾಶಿ: ಹೊಸ ಯೋಜನೆ, ವ್ಯಾಪಾರ ವಹಿವಾಟುಗಳಿಗೆ ನಿಮ್ಮ ಹೆಚ್ಚಿನ ಪ್ರಯತ್ನ ಅಗತ್ಯವಿದೆ. ಪ್ರಗತಿಯ ಕ್ಷೇತ್ರದಲ್ಲಿ ಹಲವು ಮಾರ್ಗಗಳು ತೆರೆದುಕೊಳ್ಳುತ್ತವೆ ಮತ್ತು ನಿಮ್ಮ ಕೆಲಸ ಪೂರ್ಣಗೊಳ್ಳುತ್ತದೆ. (ಭಕ್ತಿಯಿಂದ ಕುಲದೇವರ ಪ್ರಾರ್ಥನೆ ಮಾಡಿ ಒಳಿತಾಗುವುದು.)
ತಿಥಿ: ತ್ರಯೋದಶಿ
ನಕ್ಷತ್ರ: ಉತ್ತರಾಷಾಡ ನಕ್ಷತ್ರ.
ರಾಹುಕಾಲ: 01:30PM ರಿಂದ 3:00PM
ಗುಳಿಕಕಾಲ: 09:00AM ರಿಂದ 10:30AM
ಯಮಗಂಡಕಾಲ: 06:00AM ರಿಂದ 07:30AM
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….