ಬೆಂ.ಗ್ರಾ.ಜಿಲ್ಲೆ, (ಫೆ.08); ದೇವನಹಳ್ಳಿಯ ಜೈನ ಪವಿತ್ರ ತೀರ್ಥ ಕ್ಷೇತ್ರದ ಮತ್ತು ಆಧ್ಯಾತ್ಮ ಕೇಂದ್ರದ ಸುತ್ತಮುತ್ತ ಮಾಂಸಹಾರ ಹೋಟೆಲ್ಗಳನ್ನು ಮತ್ತು ಮಧ್ಯಪಾನ ಅಂಗಡಿಗಳನ್ನು ನಿಷೇಧಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಪತ್ರ ಸಲ್ಲಿಸಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಜೈನ ಸಮುದಾಯದ ಮುಖಂಡರು ಮಾತನಾಡಿ, 1999 ರಲ್ಲಿ ಮಾನ್ಯ ಕರ್ನಾಟಕ ಸರ್ಕಾರವು ದೇವನಹಳ್ಳಿ ತಾಲ್ಲೂಕಿನ ಕಸಬಾ ಹೋಬಳಿಯ ದೇವನಹಳ್ಳಿ ಗ್ರಾಮದ ಸ.ನಂ 157ರಲ್ಲಿ 30.09 ಗುಂಟೆ ಗಳ ಜಮೀನನ್ನು ದೇವಸ್ಥಾನ, ಧರ್ಮಸ್ಥಳ ಮತ್ತು ಶಾಲೆಗಳನ್ನು ನಿರ್ಮಿಸುವ ಉದ್ದೇಶಕ್ಕಾಗಿ ಮಂಜೂರು ಮಾಡಿ ಆದೇಶ ನೀಡಿದೆ.
ಈಗಾಗಲೇ ಶೇ 70% ರಷ್ಟು ಕಲಸವು. ಪೂರ್ಣವಾಗಿದ್ದು ಅದರಲ್ಲಿ ಒಟ್ಟು ಹನ್ನೊಂದು ಮಂದಿರಗಳು ಈಗಾಗಲೇ ನಿರ್ಮಾಣವಾಗಿ ಪ್ರತಿನಿತ್ಯವೂ ಅಷ್ಟಪುಕಾರಿ ಪೂಜೆಯು ಪ್ರತಿ ನಿತ್ಯ ನೆರವೇರುತ್ತಿದೆ.
ಧಾರ್ಮಿಕ ಚಟುವಟಿಕೆಗೆ ಮಾತ್ರ ಸೀಮಿತವಲ್ಲದೆ ನಮ್ಮ ಧರ್ಮ ಗುರುಗಳ ಮಾರ್ಗದರ್ಶನದಲ್ಲಿ ಅನೇಕ ಸಾಮಾಜಿಕ ಚಟುವಟಿಕೆಗಳನ್ನು ಸಹ ಆಯೋಜಿಸಿಕೊಂಡು ಬಂದಿದ್ದೇವೆ. ಕೇವಲ ಮಂದಿರವನ್ನು ನಿರ್ಮಿಸುವುದಲ್ಲದೇ ಜನಪರ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಹಿತಕ್ಕಾಗಿಯೂ ಸಹ ನಮ್ಮ ಸಂಸ್ಥೆಯು ಸ್ಪಂದಿಸಿ ಶ್ರಮಿಸಿದೆ. ನಾವು ಕೈಗೊಂಡ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಆದರೆ ಇತ್ತೀಚೆಗೆ ಆಘಾತಕಾರಿ ಘಟನೆಗಳು ನಮ್ಮ ಪವಿತ್ರ ಜೈನ ತೀರ್ಥ ಪವಿತ್ರ ಕ್ಷೇತ್ರದ ಮತ್ತು ಅಧ್ಯಾತ್ಮ ಕೇಂದ್ರದ ಸುತ್ತಮುತ್ತ ನಡೆಯುತ್ತಿದೆ. ಅನೇಕ ಮಾಂಸಾಹಾರಿ ಹೋಟೆಲ್ಗಳು ಮತ್ತು ಮಧ್ಯಪಾನ ಅಂಗಡಿಗಳನ್ನು ನಮ್ಮ ಮಂದಿರಕ್ಕೆ ಅಂಟಿಕೊಂಡಂತೆ ಪ್ರಾರಂಭವಾಗಿವೆ. ಮಾಂಸ ಬೇಯಿಸುವ ವಾಸನೆ, ಕೊಳೆತ ಮಾಂಸದ ವಾಸನೆ ಹಾಗೂ ಇನ್ನಿತರ ಹೊಲಸು ರೀತಿಯ ವಾಸನೆ ನಮ್ಮ ಮಂದಿರದಲ್ಲೆಲ್ಲಾ ಹರಡುತ್ತಿದೆ. ಇದರಿಂದಾಗಿ ನಮ್ಮ ಧಾರ್ಮಿಕ ಭಾವನೆಗಳಿಗೆ ದಕ್ಕೆ ಬರುವಂತಾಗಿದೆ.
ನಮ್ಮ ಜೈನಮುನಿಗಳು ಹಾಗೂ ಭಕ್ತಾದಿಗಳು ಬಲವಂತವಾಗಿ ದುರ್ವಾಸನೆಗಳನ್ನು ಯಾವುದೇ ಸನ್ಮತಿ ಇಲ್ಲದೆ ವಾಸನೆ ನೋಡುವಂತಾಗಿದೆ. ಇದು ನಮ್ಮ ಧಾರ್ಮಿಕ ಹಕ್ಕುಗಳಿಗೆ ಮತ್ತು ಭಾವನೆಗಳಿಗೆ ಚ್ಯುತಿ ತರುವಂತೆ ನಡೆದುಕೊಂಡಿದ್ದಾರೆ ನಿತ್ಯ ಪೂಜಾ ವಿಧಾನಗಳಿಗೆ ಮತ್ತು ಧ್ಯಾನ ಮಾಡುವಂತೆ ಸಂದರ್ಭದಲ್ಲಿ ಈ ಎಲ್ಲಾ ರೀತಿಯ ಕೆಟ್ಟವಾಸನೆಗಳನ್ನು ಉಸಿರಾಡುತ್ತಾ ಮಾಡುವಂತಾಗಿದೆ.
ಆದ್ದರಿಂದ ನಮ್ಮ ನಮ್ಮ ಮಂದಿರದ ಸುತ್ತಮುತ್ತಲಿನಲ್ಲಿ ಯಾವುದೇ ರೀತಿಯ ಮಾಂಸಹಾರಿ ಹೋಟೆಲ್ಗಳಿಗೆ ಹಾಗು ಮಧ್ಯಪಾನ ಅಂಗಡಿಗಳಿಗೆ ಅನುಮತಿ ಅಥವಾ ಪರವಾನಗಿ ನೀಡಬಾರದೆಂದು ಹಾಗೂ ಈಗಾಗಲೇ ನೀವು ಅನುಮತಿ ಪರವಾನಗಿ ನೀಡಿದ್ದಲ್ಲಿ ರದ್ದುಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಪ್ರಕಾಶ್ ಕೊಟರಿ, ಸುರೇಶ್ ವೆದ್ಮುತ್ತಾ, ಮನೋಜ್, ಜೈಲೇಷ್ ಶಾ, ಯೋಗೇಶ್ ಶಾ, ಪೃತಿರಾಜ್ ಜೈನ್, ಜಯ್ಚಂಧ್ ಚುತರ್ ಬಲ್ವಂತ್ ಪಗಾರಿಯ, ಸಂತೋಷ್, ವಿಮಲಾ, ಮಂಜು ಜೈನ್, ಮಹೇಶ್ ಸುರಾಣ, ರಾಜೇಶ್ ಬಂಡಾರಿ, ದಿಲೀಪ್ ಚುತ್ತರ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….