ಗದಗ, (ಜ.27): ಜಿಲ್ಲೆಯ ಗಜೆಂದ್ರಗಡ ತಾಲೂಕಿನ ನರೆಗಲ್ಲ ಪಟ್ಟಣದ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ವಿಶೇಷ ಚೇತನ ಮಕ್ಕಳ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಅದ್ಭುತವಾದ ಮಲ್ಲಕಂಬದ ಕ್ರೀಡೆ ಪ್ರದರ್ಶನಗೊಂಡಿತು.
75ನೇ ಗಣರಾಜ್ಯೋತ್ಸವದ ಅಂಗವಾಗಿ ಅಂಗ ಸಂಸ್ಥೆಯ ವತಿಯಿಂದ ಪದವಿ ಮಹಾವಿದ್ಯಾಲಯದ ಆವರಣಲ್ಲಿ ಏರ್ಪಡಿಸಲಾದ ಗಣರಾಜ್ಯೊತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಲ್ಲಕಂಬ ಪ್ರದರ್ಶನದಲ್ಲಿ ವಿಶೇಷ ಚೇತನ ಮಕ್ಕಳ ಶಾಲೆಯ 40ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಈ ಕ್ರೀಡೆಯಲ್ಲಿ ಸ್ಥಿರ ಮಲ್ಲಕಂಬ ಪ್ರದರ್ಶನ ಹಾಗೂ ರೋಪ ಮಲ್ಲಕಂಬದ ಆಟ, ಪ್ರದರ್ಶನಗೊಂಡಿತು. ಈ ಆಟಗಳಲ್ಲಿ ದಸರಂಗ, ಮಂಕಿಪಕಡ್, ಪದ್ಮಾಸನ, ಅಬ್ಡಮಲ್ ಬ್ಯಾಲೆನ್ಸ್, ಮಯೂರಾಸನ, ಗುರು ಪಕಡ್, ಹಾಲಾಸನ, ಹ್ಯಾಂಡ್ ಬ್ಯಾಲೆನ್ಸ್, ಭಜರಂಗಾಸನ, ಕೂರ್ಮಾಸನ, ವೀರಭದ್ರಾಸನ, ಒಳಗೊಂಡಂತೆ ಅನೇಕ ಆಸನಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು.
ಸ್ಥಳಿಯ ಮಲ್ಲಕಂಬ ಕ್ರೀಡಾಪಟು ಕಳಕಪ್ಪ ಚವಡಿ ಹಾಗೂ ಎಂ.ವ್ಹಿ. ಹರ್ಲಾಪೂರ, ಹಾಗೂ ದೈಹಿಕ ಶಿಕ್ಷಕ ಮಹಮ್ಮದ್ ರಫೀಕ ರೇವಡಿಗಾರ ಮಾರ್ಗದರ್ಶನದಲ್ಲಿ ಜರುಗಿದ ಈ ವಿಶೇಷ ಚೇತನ ಮಕ್ಕಳ ಮಲ್ಲಕಂಬ ಪ್ರದರ್ಶನದ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.
ಅನ್ನದಾನೆಶ್ವರ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷರಾದ ಹಾಲಕೆರೆ ಮ.ನಿ.ಪ್ರ. ಪೂಜ್ಯ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ದೇಶಿಯ ಕ್ರೀಡೆಗಳಿಗೆ ಉತ್ತೇಜನ ನೀಡುವದು ನಮ್ಮಲ್ಲೆರ ಕರ್ತವ್ಯ ಅದನ್ನು ಇನ್ನು ಹೆಚ್ಚು ಹೆಚ್ಚು ಬೆಳಿಸಿಕೊಂಡ ಹೊಗಬೇಕು ಮತ್ತು ಸಂಸ್ಥೆಯ ವಿದ್ಯಾರ್ಥಿಗಳು ಅದರಲ್ಲು ವಿಶೇಷ ಚೇತನ ಮಕ್ಕಳು ಇಂತಹ ಕ್ರೀಡಾ ಮನೊಭಾವ ಬೆಳಿಸಿಕೊಂಡಿದ್ದು ತುಂಬಾ ಸಂತೋಷದ ವಿಷಯ ಇದು ಇನ್ನು ಹೆಚ್ಚು ಉನ್ನತ ಮಟ್ಟಕ್ಕೆ ಬೇಳೆಯಬೇಕು ಏಂದು ತಿಳಿಸಿದರು
ಈ ಸಂದರ್ಭದಲ್ಲಿ ಆಡಳಿತಾಧಿಕಾರಿಗಳಾದ ಎನ್.ಆರ್.ಗೌಡರ, ವಿಶೇಷ ಚೇತನ ಮಕ್ಕಳ ಶಾಲೆಯ ಚೇರಮನ್ನರಾದ ಶರಣಪ್ಪ ರೇವಡಿ ಪಾಲ್ಗೊಂಡಿದ್ದರಲ್ಲದೇ ಸಂಸ್ಥೆಯ ಸದಸ್ಯರುಗಳು, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….