Site icon ಹರಿತಲೇಖನಿ

ನಾವು ಹಿಂದೂಗಳು. ರಾಮ ಮಂದಿರ ಓಪನ್ ಮಾಡಿಸಿದ್ದೆ ರಾಜೀವ್ ಗಾಂಧಿ; ಪ್ರದೀಪ್ ಈಶ್ವರ್

ಶಿವಮೊಗ್ಗ, (ಜ.19): ನಾವು ಹಿಂದೂಗಳು. ನನ್ನ ಎದೆ ಸೀಳಿದರೂ ಶ್ರೀರಾಮನಿದ್ದಾನೆ, ಸಿದ್ದರಾಮನೂ ಇದ್ದಾನೆ. ನಮ್ಮನ್ನು ಬಿಜೆಪಿಯವರು ಹಿಂದೂ ವಿರೋಧಿಗಳೆಂದು ಬಿಂಬಿಸುತ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ಮೊದಲು ಓಪನ್ ಮಾಡಿಸಿದ್ದೆ ರಾಜೀವ್ ಗಾಂಧಿಯವರು. ನಾನು ಅಯೋಧ್ಯೆಗೆ ಹೋಗುತ್ತೇನೆ, ಪೂಜಿಸುತ್ತೇನೆ. ನನ್ನ ಆರಾಧ್ಯ ದೈವ ಶ್ರೀರಾಮ‌ ಎಂದರು.

ಶಿವಮೊಗ್ಗದ ಯುವಕರಿಗೆ ಕೈ ಮುಗಿದು ಬೇಡುತ್ತೇನೆ, ರಾಜಕಾರಣಿಗಳ ಹಿಂದೆ ಬರಬೇಡಿ. ನಾಳೆ ನಿಮ್ಮ ಹೆಚ್ಚುಕಮ್ಮಿಯಾದರೆ ಯಾರೂ ಬರುವುದಿಲ್ಲ, ಕೋಮುಗಲಭೆಯಲ್ಲಿ ಯಾವ ಸಮುದಾಯದ ಯುವಕರು ಹೋಗಬೇಡಿ. ಇಷ್ಟವಾದೆ ಮತನೀಡಿ, ಇನ್ನೂ ಜಾಸ್ತಿ ಆದರೆ ನಾಲ್ಕು ಮಾತ ಹಾಕಿಸಿ ಅಷ್ಟೇ.. 25 ವರ್ಷಕ್ಕೆ ಕೇಸ್ ಆದರೆ ಕಷ್ಟ. ನಾನು ಸಹ ಒಬ್ಬ ರಾಜಕಾರಣಿ ಹಿಂದೆ ಬಿದ್ದು 22 ಕೇಸ್ ಹಾಕಿಸಿಕೊಂಡಿದ್ದೆ, ಆಗ ಪಟ್ಟಿರುವ ನೋವು, ಕುಟುಂಬದ ಪರಿಸ್ಥಿತಿ ಕಷ್ಟ, ವಾರಕ್ಕೆರಡು ಬಾರಿ ಕೋರ್ಟ್ ಅಲೆದಾಡ ಅನಿಭವಿಸಿದಾಗ ಅರಿವಾಗುತ್ತದೆ ಎಂದರು.

ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನೀವು ನಮ್ಮ ನಾಯಕರನ್ನು ಬೈದ ಹಾಗೆ ನಾವು ಬೈಯ್ಯಬೇಕಾ? ಅವರು ಬೈದಿರುವುದು ನಮ್ಮ ಮುಖ್ಯಮಂತ್ರಿಯವರನ್ನು. ಅವರಿಗೆ ಒಂದು ಘನತೆಯಿದೆ. ಏಕವಚನದ ಪದ ಬಳಕೆ ಬೇಡ. ಪ್ರತಾಪ್ ಸಿಂಹ, ಅನಂತ ಕುಮಾರ್ ಹೆಗಡೆಯವರು ಯಾವ ಸೀಮೆ‌ಯ ಲೀಡರ್? ಸಂಸ್ಕೃತಿ, ಸಂಸ್ಕಾರದ ಬಗ್ಗೆ ಚರ್ಚೆಗೆ ಬನ್ನಿ. ಶಿರಸಿಗೆ ನಾನೇ ಬರಲಾ? ಸಂಸ್ಕಾರದ ನಮಗೆ ಹೇಳಕೊಡಬೇಡಿ. ನಮ್ಮ‌ಮನೆಯಲ್ಲಿ ಸಂಸ್ಕಾರ ಕಳಿಸಿಕೊಟ್ಟಿದ್ದಾರೆ.  ದೊಡ್ಡವರಿಗೆ ಗೌರವ ಕೊಡಬೇಕು ಎಂದರು.

20 ಸ್ಥಾನ ಲೋಕಸಭೆಯಲ್ಲಿ ಗೆಲ್ಲುತ್ತೇನೆ. ಸುಧಾಕರ್ ಅವರೇ ಒಮ್ಮೆ ಸೋತಿದ್ದೀರಿ ಮತ್ತೆ ಬಂದು ಸೋಲಬೇಡಿ. ಮತ್ತೊಮ್ಮೆ ಸೋತರೆ ಜನ ಕೈಬಿಡುತ್ತಾರೆ. ನಮ್ಮೂರ ಹುಡುಗ ಸೋಲುತ್ತಾನೆ ಎಂದು ಹೇಳುತ್ತಿದ್ದೇನೆ. ಕೊವಿಡ್ ನಲ್ಲಿ ಅವ್ಯವಹಾರ ನಡೆದಿದೆ ಅದನ್ನು ತನಿಖೆ ಮಾಡಿ. ಸ್ವಾತಂತ್ರ ಬಂದಾಗಿನಿಂದ ರಸ್ತೆಯೇ ಆಗಿಲ್ಲ. ಸುಧಾಕರ್ ನಗರ ಅಭಿವೃದ್ಧಿ ಮಾಡಿದ್ದಾರೆ, ಆದರೆ ಹಳ್ಳಿಗಳ ಅಭಿವೃದ್ಧಿ ಕಡೆಗಣಿಸಿದ್ದಾರೆ ಚಂದ್ರನಲ್ಲಿ ನೀರು ಹುಡುಕುತ್ತಿದ್ದಾರೆ ಆದರೆ ನಮ್ಮ ಕ್ಷೇತ್ರದ ಜನ ಕುಡಿಯುವ ನೀರಿಲ್ಲದೆ ಕಣ್ಣಿರು ಹಾಕುತ್ತಿದ್ದಾರೆ ಎಂದು ಪ್ರದೀಪ್ ಈಶ್ವರ್ ಹೇಳಿದರು.

ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾಳೆ ಪಕ್ಷ ಕಸ ಗುಡಿಸು, ರಾಜೀನಾಮೆ ಕೊಡು ಎಂದರೆ ಹಾಗೆ ಮಾಡುತ್ತೇನೆ. ಪಾರ್ಟಿ ಹೇಳಿದರೆ ಲೋಕಸಭೆಗೂ ನಿಲ್ಲುತ್ತೇನೆ. ಪಕ್ಷ ಸಂಘಟಿಸುವ ಆಸೆ ನನಗಿದೆ ಎಂದರು.

ಮಧು ಬಂಗಾರಪ್ಪ ಅವರು ತಂದೆಯ ಹಾದಿಯಲ್ಲಿ ನಡೆಯುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ನವರು ಅನೇಕ ಬದಲಾವಣೆ ತಂದಿದ್ದಾರೆ. ಅಲ್ಲಮ ಪ್ರಭುಗಳ ಹೆಸರನ್ನು ಫ್ರೀಡಂ ಪಾರ್ಕ್ ಗೆ ಇಟ್ಟಿದ್ದಾರೆ ಎಂದರು.

ಗ್ಯಾರಂಟಿಗಳ ಹಣ ವ್ಯರ್ಥವಾಗುತ್ತಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿದ್ದಾರೆ. ನಾನು ಬೇಕಾದರೆ ಡಾಟಾ ಮೂಲಕ ಗ್ಯಾರಂಟಿ ಸಾಧನೆ ಕೊಡಬಲ್ಲೆ. 8320 ಕೋಟಿಗಳ ದುರಸ್ತಿ ಆಗುತ್ತಿದೆ ಎಂದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version