ಮೈಸೂರು, (ಜ.19); ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರು ಪಾಲಾಗಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನ ಹೆಜ್ಜಿಗೆ ಸೇತುವೆ ಬಳಿ ನಡೆದಿದೆ.
ಮೃತಪಟ್ಟ ಮೂವರೂ ತುಮಕೂರು ಮೂಲದವರು ಎನ್ನಲಾಗುತ್ತಿದ್ದು, ಗುರುತು ಪತ್ತೆಯಾಗಿಲ್ಲ.
ಸ್ನಾನ ಮಾಡಲು ಒಟ್ಟಾರೆ 5 ಜನ ಕಪಿಲಾ ನದಿಗೆ ಇಳಿದಿದ್ದರು. ಅದರಲ್ಲಿ 3 ಮಂದಿ ಮೃತಪಟ್ಟರೆ, ಈ ವೇಳೆ ಉಳಿದ ಇಬ್ಬರನ್ನು ಪಾರಾಗಿದ್ದಾರೆ.
ನದಿಯಲ್ಲಿ ಅಯ್ಯಪ್ಪ ಮಾಲೆ ತೆಗೆಯಲು ಹೋದಾಗ ಕಾಲು ಜಾರಿ ಮೂವರು ಕೊಚ್ಚಿ ಹೋಗಿದ್ದಾರೆ ಎಂದು ವರದಿಯಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….