Site icon ಹರಿತಲೇಖನಿ

ಅಯೋಧ್ಯೆ ರಾಮಲಲ್ಲಾ ಮೊದಲ ಫೋಟೋ ವೈರಲ್

ಅಯೋಧ್ಯೆ, (ಜ.19); ಕೋಟ್ಯಾಂತರ ಕಣ್ಣುಗಳ ಕಾತರದಿಂದ ಕಾಯುತ್ತಿದ್ದ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಗುರುವಾರ ಸಂಜೆ ವೇಳೆಗೆ ಬಾಲರಾಮನ ವಿಗ್ರಹವನ್ನು ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. 

ಗರ್ಭಗುಡಿಯ ಹೊರಗೆ ವಾಸ್ತು ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು 121 ಅರ್ಚಕರು ಸೇರಿ ನೆರವೇರಿಸುವ ಮೂಲಕ ವಿಗ್ರಹ ಸ್ಥಾಪನೆ ಕಾರ್ಯ ಪೂರ್ಣಗೊಂಡಿದೆ.

ಬುಧವಾರ ರಾತ್ರಿಯೇ ವಿಶೇಷ ಪೂಜೆಯೊಂದಿಗೆ ರಾಮಲಲ್ಲಾನ ವಿಗ್ರಹವನ್ನು ಮಂದಿರದ ಗರ್ಭಗುಡಿಗೆ ತರಲಾಗಿತ್ತು ಆದರೆ, ಕೆಲ ತಾಂತ್ರಿಕ ಕಾರಣಗಳಿಂದ  ಪ್ರತಿಷ್ಠಾಪಿಸಲಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಗುರುವಾರ ಖ್ಯಾತ ಜ್ಯೋತಿಷಿಗಳಾದ ಆಚಾರ್ಯ ಗಣೇಶ್ವರ ಶಾಸ್ತ್ರೀ ಅವರ ನೇತೃತ್ವದಲ್ಲಿ ಜಲಾಧಿವಾಸ್‌ ವಿಧಿಯ ಪ್ರಕಾರ ವಿಗ್ರಹವನ್ನು ಸ್ವಚ್ಚಗೊಳಿಸಿ ಸತತ 4 ಗಂಟೆಗಳ ಕಾಲ ಪೂಜೆ, ಮಂತ್ರ ಪಠಣೆಯನ್ನು ನೆರವೇರಿಸಿ ಶುಭ ಮುಹೂರ್ತದಲ್ಲಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. 

ಗೌರಿಗಣೇಶ ಪೂಜೆ, ವರುಣ ಪೂಜೆ ಸೇರಿ ವಿವಿಧ ಪೂಜಾ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ ಎಂದು ಮಂದಿರ ಟ್ರಸ್ಟ್‌ ಮಾಹಿತಿ ನೀಡಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version