ಟೆಕ್ಸಾಸ್, (ಡಿ.27); ಆಂಧ್ರಪ್ರದೇಶದ (ಅಮಲಾಪುರಂ) ಐವರು ನಿವಾಸಿಗಳು ಅಮೆರಿಕದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಮೃತರನ್ನು ಮುಮ್ಮಿಡಿವರಂ ಶಾಸಕ ಪೊನ್ನಡ ಸತೀಶ್ ಚಿಕ್ಕಪ್ಪ ನಾಗೇಶ್ವರ ರಾವ್ ಅವರ ಕುಟುಂಬದವರು ಎಂದು ಗುರುತಿಸಲಾಗಿದೆ.
ಟೆಕ್ಸಾಸ್ ಹೆದ್ದಾರಿಯಲ್ಲಿ ನಡೆದ ಈ ಅಪಘಾತದಲ್ಲಿ ಪೊನ್ನಡ ನಾಗೇಶ್ವರ ರಾವ್ ಪತ್ನಿ ಸೀತಾಮಹಾಲಕ್ಷ್ಮೀ, ಪುತ್ರಿ ನವೀನ ಗಂಗಾ, ಮೊಮ್ಮಗ ಮತ್ತು ಮೊಮ್ಮಗಳು ಮೃತಪಟ್ಟಿದ್ದಾರೆ.
ನಾಗೇಶ್ವರ ರಾವ್ ಅವರ ಅಳಿಯ ಲೋಕೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….