Site icon ಹರಿತಲೇಖನಿ

ವ್ಯೂಹಂ ಸಿನಿಮಾ ಗದ್ದಲ; ರಾಮ್‌ಗೋಪಾಲ್ ವರ್ಮಾ ತಲೆಗೆ ಒಂದು ಕೋಟಿ ರೂ ಆಫರ್..!

ಹೈದರಾಬಾದ್, (ಡಿ.27); ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿರುವ ವ್ಯೂಹಂ ಚಿತ್ರದ ಕುರಿತು ಪ್ರತಿಭಟನೆಗಳು ತೀವ್ರವಾಗಿದ್ದು. ಮಾತ್ರವಲ್ಲದೆ ವರ್ಮಾ ತಲೆಗೆ 1 ಕೋಟಿ ಬಹುಮಾನ ಸಹ ಘೋಷಿಸಲಾಗಿದೆ.

ರಾಮ್ ಗೋಪಾಲ್ ವರ್ಮಾ ನಿರ್ದೇಶನದ ವ್ಯೂಹಂ ಸಿನಿಮಾದಲ್ಲಿ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ವಿಲನ್ ರೀತಿ ಚಿತ್ರಿಸಲಾಗಿದೆ. ರಾಜಶೇಖರ ರೆಡ್ಡಿ ಸಾವಿಗೆ ಚಂದ್ರಬಾಬು ನಾಯ್ಡು ಕಾರಣ ಎಂಬರ್ಥ ಬಿಂಬಿಸುವ ದೃಶ್ಯಗಳೂ ಸಿನಿಮಾದಲ್ಲಿ ಇವೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಹಾಲಿ ಸಿಎಂ ಜಗನ್ ಅನ್ನು ಹೀರೋ ರೀತಿಯಲ್ಲಿ ಚಿತ್ರಿಸಲಾಗಿದೆ. ಇದು ಚಂದ್ರಬಾಬು ನಾಯ್ಡು ನಾಯಕತ್ವದ ಟಿಡಿಪಿ ಪಕ್ಷದ ಕಾರ್ಯಕರ್ತರ ಅಸಹನೆಗೆ ಕಾರಣವಾಗಿದೆ.

ಈ ಕುರಿತಂತೆ ಸುದ್ದಿವಾಹಿನಿಯೊಂದರಲ್ಲಿ ನಡೆಸಲಾದ ಡಿಬೇಟ್​ನಲ್ಲಿ ಭಾಗವಹಿಸಿದ್ದ ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ ನಾಯ್ಡು ಅವರು ರಾಮ್ ಗೋಪಾಲ್ ವರ್ಮಾ ತಲೆ ಕಡಿದು ತಂದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುತ್ತೇನೆ’ ಎಂದು ಘೋಷಿಸಿದ್ದಾರೆ. 

ಇದರಿಂದ ವಿಚಲಿತರಾದ ಟಿವಿ ನಿರೂಪಕ,ಕಾನೂನಿಗೆ ವ್ಯತಿರೇಕವಾದ ಮಾತುಗಳು ಬೇಡ ಎಂದು ಮನವಿ ಮಾಡಿದರೂ ಸಹ, ಇಲ್ಲ ನನ್ನ ಆಫರ್ ಅನ್ನು ನಾನು ಮತ್ತೆ ಹೇಳುತ್ತೇನೆ, ಯಾರು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಲೆ ಕಡಿದು ತರುತ್ತಾರೋ ಅವರಿಗೆ ಒಂದು ಕೋಟಿ ರೂಪಾಯಿ ನೀಡುತ್ತೇನೆ. ಏಕೆಂದರೆ ಈ ಸಮಾಜಕ್ಕೆ ಆ ವ್ಯಕ್ತಿ ಮಾರಕ ಎಂದಿದ್ದಾರೆ. 

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version