ಈಗ ಕುಂಭರಾಶಿಯವರಿಗೆ ತುಸು ಗಂಭೀರ ಸಮಯ. ಗುರುಬಲ,ಶನಿಬಲ ಮತ್ತು ರಾಹು-ಕೇತು ಬಲ ಇಲ್ಲ. ಸಾಡೆಸಾತಿ ಶನಿಯ ಮಧ್ಯಭಾಗದಲ್ಲಿ ಇದ್ದೀರಿ. ಶನಿಯ ಪ್ರಭಾವಕ್ಕೆ ಸಿಕ್ಕು ನುಜ್ಜುಗುಜ್ಜಾಗುತ್ತೀರಿ. ಹಣದ ಹರಿವು ಕಡಿಮೆಯಾಗಲಿದೆ. ಖರ್ಚು ಹೆಚ್ಚಾಗಲಿದೆ.
ಡಿ.26ರ ನಂತರ ಸೂರ್ಯ ಡಿ.27ರ ನಂತರ ಕುಜ ಹನ್ನೊಂದನೇ ಮನೆಗೆ ಪ್ರವೇಶವಾದಾಗ ನಿಮ್ಮ ಪರಿಸ್ಥಿತಿ ಕೊಂಚ ಹಿಡಿತಕ್ಕೆ ಬರುತ್ತದೆ. ಹಣದ ಹರಿವು ಸರಾಗವಾಗುತ್ತದೆ. ಕುಟುಂಬದಲ್ಲಿ ಮನಸ್ತಾಪ ಭಿನ್ನಾಭಿಪ್ರಾಯ ಇರುತ್ತದೆ.
ಹೆಚ್ಚು ವಾದ ಮಾಡಬೇಡಿ. ನಿಮ್ಮದೇ ಸರಿ ಎಂದು ವಾದಿಸಬೇಡಿ. ಆದಷ್ಟು ಮೌನ ಕಾಯ್ದುಕೊಳ್ಳಿ. ಕಿರಿಕಿರಿ ಉಂಟಾಗುವ ಸಂದರ್ಭಗಳಲ್ಲಿ ಜನರಿಂದ ದೂರ ಉಳಿದುಕೊಳ್ಳವುದು ಸೂಕ್ತ. ಆಪ್ತರೊಂದಿಗೆ ಹರಿತವಾಗಿ ಮಾತನಾಡಬೇಡಿ. ಇವೆಲ್ಲವೂ ನಿಮಗೆ ಋಣಾತ್ಮಕ ಪರಿಣಾಮವನ್ನುಂಟು ಮಾಡಲಿವೆ.
ಮನಃ ಶಾಂತಿಯನ್ನು ಕಾಪಾಡಿಕೊಳ್ಳಬೇಕು. ವಿವಾಹವಾಗಬಯಸುವವರು ಇನ್ನೂ ಮೂರು ತಿಂಗಳು ಕಾಯಬೇಕು. ವೃತ್ತಿಯಲ್ಲಿ ಒತ್ತಡ ಇರುತ್ತದೆ. ವರ್ಗಾವಣೆಯ ಸಾಧ್ಯತೆಯು ಇದೆ. ಮನಸ್ಸನ್ನು ಕುಗ್ಗಿಸುವ ಸಂಗತಿಗಳಿಂದ ದೂರವಿದ್ದು ಸಮಾಧಾನ ಕಾಪಾಡಿಕೊಳ್ಳಿ.
ನಕ್ಷತ್ರಗಳು: ಧನಿಷ್ಠ 3,4 / ಶತಭಿಷ / ಪೂರ್ವಾಭಾದ್ರ 1,2,3 ನೇ ಪಾದ ಕುಂಭ ರಾಶಿಗೆ ಸೇರುತ್ತದೆ.
ಕುಂಭ ರಾಶಿಯ ಅಕ್ಷರಗಳು: ಗು, ಗೆ, ಗೊ, ಸ, ಸಿ, ಸು, ಸೇ, ಸೊ, ದ.
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….