Site icon ಹರಿತಲೇಖನಿ

ಸಗಣಿ ನೀರು ಸುರಿದುಕೊಂಡು ಅತಿಥಿ ಉಪನ್ಯಾಸಕರಿಂದ ಧರಣಿ: ವಿಡಿಯೋ ನೋಡಿ

ಚಿಕ್ಕಬಳ್ಳಾಪುರ, (ಡಿ.27); ಅತಿಥಿ ಉಪನ್ಯಾಸಕರು ಮೈಮೇಲೆ ಸಗಣಿ ನೀರು ಸುರಿದುಕೊಂಡು ಕಾಯಮಾತಿಗಾಗಿ ಸರಕಾರವನ್ನು ಆಗ್ರಹಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. 

ನಗರ ಹೊರವಲಯದ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಚಿಕ್ಕಬಳ್ಳಾಪುರ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ನಡೆದ 34ನೇ ದಿನದ ಹೋರಾಟದ ಭಾಗವಾಗಿ ಸಂಘದ ಜಿಲ್ಲಾಧ್ಯಕ್ಷ ಮುನಿರಾಜು.ಎಂ.ಅರಿಕೆರೆ ತಮ್ಮ ಮೈಮೇಲೆ ಸಗಣಿ ನೀರನ್ನು ಸುರಿದುಕೊಂಡು ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

ನಮ್ಮದು ಎರಡು ದಶಕಗಳ ಹೋರಾಟವಾಗಿದೆ. ಈ ಅವಧಿಯಲ್ಲಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ವೇತನ ಸಾಲದೆ, ಸಂಸಾರ ನಡೆಸಲಾಗದೆ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. 

ಸರಕಾರ ನಮ್ಮನ್ನು ಅತಿಥಿ ಪದನಾಮದ ಅಡಿಯಲ್ಲಿ ಕನಿಷ್ಠ ಗೌರವಧನ ನೀಡಿ ಜೀತಗಾರರಿಗಿಂತಲೂ ಕಡೆಯಾಗಿ ನಡೆಸಿಕೊಂಡಿದೆ ಸರ್ಕಾರ ಕಾಯಮಾತಿ ಮಾಡಲಾಗದಿದ್ದರೆ ದಯಾಮರಣದ ಭಿಕ್ಷೆ ನೀಡಲಿ ಎಂದು ನೊಂದು ನುಡಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version