ನಿಜಾಮಾಬಾದ್, (ಡಿ.27); ವರದಕ್ಷಿಣೆ ಹಾಗೂ ಜಾತಕ ಸರಿಯಾಗಿ ಹೊಂದಲಿಲ್ಲ ಎಂಬ ಕಾರಣಕ್ಕಾಗಿ ಮದುವೆಯನ್ನು ರದ್ದುಗೊಳಿಸಿರುವುದನ್ನು ನಾವು ನೋಡಿದ್ದೇವೆ ಆದರೆ, ಇಲ್ಲಿ ಹುಡುಗಿಯ ಮನೆಯವರು ಊಟದ ವೇಳೆ ಮಟನ್ ಮೂಳೆ ಬಡಿಸುವುದನ್ನು ಮರೆತ್ತಿದ್ದಾರೆ ಎಂದು ಕೋಪಗೊಂಡು ಮದುವೆಯನ್ನು ರದ್ದು ಮಾಡಲಾಗಿದೆ.
ಹೌದು ನಿಜಾಮಾಬಾದ್‌ನ ಹಡುಗನಿಗೂ ಮತ್ತು ಜಾಕ್ಸಿಯಾಲ್‌ನ ಹುಡುಗಿಗೂ ನವೆಂಬರ್‌ನಲ್ಲಿ ನಿಶ್ಚಿತಾರ್ಥವಾಗಿತ್ತು, ಹುಡುಗಿಯ ಮನೆಯವರು ಹುಡುಗನ ಮನೆಯರಿಗೆ ಹಾಗೂ ಕೆಲವು ಅತಿಥಿಗಳಿಗೆ ಮಾಂಸಹಾರಿ ಔತಣವನ್ನು ಏರ್ಪಡಿಸಿದ್ದರು.
ಊಟದ ವೇಳೆ ವರನ ಕಡೆಯವರಿಗೆ ಮಟನ್ ಮೂಳೆ ಬಡಿಸುವುದನ್ನು ಮರೆತ್ತಿದ್ದರು. ಇದರಿಂದ ವರನ ಮನೆಯವರು ಕೋಪಗೊಂಡು ಮದುವೆ ಯನ್ನು ರದ್ದುಗೊಳಿಸಿದ್ದಾರೆ..!
ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೂ, ಪೊಲೀಸರು ಎರಡು ಕಡೆಯವರಿಗೆ ಬುದ್ದಿ ಹೇಳಿದ್ದಾರೆ. ಆದರೆ ಕೇಳದೆ ಮದುವೆ ಮುರಿದುಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….